ಸಲ್ಮಾನ್‌ ಜೊತೆ ಪ್ರೀತಿಯಲ್ಲಿದ್ದಾಗಲೆ ಈ ಸ್ಟಾರ್‌ ನಟನೊಂದಿಗೆ ಡೇಟ್‌ ಮಾಡುತ್ತಿದ್ದರಂತೆ ಐಶ್ವರ್ಯ ರೈ! ಸಂಬಂಧ ಮುರಿದು ಬೀಳಲು ಇದೇ ಕಾರಣ ಎಂದ ಆಪ್ತ : ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ವಿಚ್ಛೇದನ ವದಂತಿ ಸದ್ಯ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವದಂತಿಗಳಿಗೆ ಪುಷ್ಠಿ ನೀಡುವಂತೆ ದಂಪತಿ ಇತ್ತೀಚಿನ ಕಾರ್ಯಕ್ರಮಗಳಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಸಲ್ಮಾನ್‌ ಅವರೊಂದಿಗನ ಐಶ್ವರ್ಯ ರೈ ಸಂಬಂಧದ ಕುರಿತು ಹಲವು ಚರ್ಚೆಗಳು ಸಾಮಜಿಕ ಜಾಲಾತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. :ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ವಿಚ್ಛೇದನ ವದಂತಿ ಸದ್ಯ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವದಂತಿಗಳಿಗೆ ಪುಷ್ಠಿ ನೀಡುವಂತೆ ದಂಪತಿ ಇತ್ತೀಚಿನ ಕಾರ್ಯಕ್ರಮಗಳಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಸಲ್ಮಾನ್‌ ಅವರೊಂದಿಗನ ಐಶ್ವರ್ಯ ರೈ ಸಂಬಂಧದ ಕುರಿತು ಹಲವು ಚರ್ಚೆಗಳು ಸಾಮಜಿಕ ಜಾಲಾತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಸಲ್ಮಾನ್‌ ಖಾನ್‌ ಹಾಗೂ ಐಶ್ವರ್ಯ ರೈ ಇಬ್ಬರು ರಹಸ್ಯ ಮದುವೆ ಮಾಡಿಕೊಂಡಿದ್ದಾರೆ. ನ್ಯೂಯಾರ್ಕ್‌ನಲ್ಲಿ ಹನಿಮೂನ್‌ಗೂ ಹೋಗಿ ಬಂದಿದ್ದಾರೆ ಎನ್ನು ಸುದ್ದಿ ಹರಿದಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಐಶ್ವರ್ಯ " ಹಾಗೊಂದು ವೇಳೆ ನಾವು ಮದುವೆಯಾಗಿದ್ದರೆ, ಈ ಬಗ್ಗೆ ಇಂಡಸ್ಟ್ರಿಯಲ್ಲಿ ಎಲ್ಲರಿಗೂ ತಿಳಿದಿರುತ್ತಿತ್ತು, ಇಂಡಸ್ಟ್ರಿ ಎನ್ನುವುದು ಒಂದು ಸಣ್ಣ ಪ್ರಪಂಚ, ಅದರಲ್ಲೂ ಮದುವೆಯಂತಹ ಪ್ರಮುಖ ವಿಶಯದ ಕುರಿತು ಇಂತಹ ದೊಡ್ಡ ವದಂತಿ ಹರಿದಾಡುತ್ತಿರುವಾಗ ಅದನ್ನು ಅಲ್ಲಗೆಳೆಯುವಷ್ಟು ಮೂರ್ಖಿ ನಾನಲ್ಲ" ಎಂದಿದ್ದರು. ಇನ್ನೂ ಇದರ ನಂತರ ಸಲ್ಮಾನ್‌ ಖಾನ್‌ ಜೊತೆ ಪ್ರೀತಿಯಲ್ಲಿದ್ದಾಗ ನಟಿ ಐಶ್ವರ್ಯ ವಿವೇಕ್‌ ಒಬಿರೈ ಅವರ ಜೊತೆಗೂ ಸಂಬಂಧದಲ್ಲಿದ್ದರು ಎಂದು ಹೇಳಲಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಸೊಹೈಲ್‌ ಖಾನ್‌ ಒಂದು ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದು," ಐಶ್ವರ್ಯ ಸಲ್ಮಾನ್‌ ಖಾನ್‌ ಜೊತೆಗೆ ಸಂಬಂದದಲ್ಲಿದ್ದಾಗ ಹಾಗಾಗ ನಮ್ಮ ಮನೆಯಲ್ಲಿನ ಒಬ್ಬ ಸದಸ್ಯರಾಗಿ ನಮ್ಮ ಮನೆಗೆ ಸಲ್ಮಾನ್‌ ಅವರೊಂದಿಗೆ ಬರುತ್ತಿದ್ದರು. ಆದರೆ ಸಾರ್ವಜನಿಕವಾಗಿ ಮಾತ್ರ ಈ ಸಂಬಂದದ ಕುರಿತು ನಟಿ ಎಂದಿಗೂ ಬಹಿರಂಗ ಪಡಿಸಲೇ ಇಲ್ಲ" " ನಟಿ ಹೀಗೆ ತಮ್ಮ ಸಂಬಂದವನ್ನು ಗೌಪ್ಯವಾಗಿ ಇಡುತ್ತಿದ್ದದ್ದು, ಸಲ್ಮಾನ್‌ ಖಾನ್‌ ಅವರನ್ನು ಅಭದ್ರತೆಯ ಭಾವನೆಯನ್ನು ಉಂಟು ಮಾಡಿತ್ತು. ಆಕೆ ಸಲ್ಮಾನ್‌ ಖಾನ್‌ಗೆ ಎಂದೂ ಕೂಡ ತಮ್ಮ ಸಂಬಂದದ ಕುರಿತು ಕ್ಲಾರಿಟಿ ಕೊಡಲೇ ಇಲ್ಲ, ಆದರೆ ಸಲ್ಮಾನ್‌ ಖಾನ್‌ ಮಾತ್ರ ಐಶ್ವರ್ಯ ರೈಗೆ ತಾನೆಷ್ಟು ಮುಖ್ಯ ಎಂದು ತಿಳಿಯಲು ಅಪತಪಿಸುತಿದ್ದರು. ಇನ್ನೂ ನಂತರ ವಿವೇಕ್‌ ಜೊತೆಗೆ ನಟಿಯ ಹೆಸರು ಕೇಳಿ ಬಂದ ನಂತರ ಕೂಡ ಐಶ್ವರ್ಯ ಸಲ್ಮಾನ್‌ ಖಾನ್‌ ಅವರ ಜೊತೆ ಸಂಪರ್ಕದಲ್ಲಿದ್ದು, ವಿವೇಕ್‌ ಅವರನ್ನು ಸಹ ನಿರಾಶೆ ಮೂಡಿಸಿತ್ತು" ಎಂದಿದ್ದಾರೆ. ಸದ್ಯ ಐಶ್ವರ್ಯ ಹಾಗೂ ಅಭಿಷೇಕ್‌ ಬಚ್ಚನ್‌ ವಿಚ್ಛೇದನ ವದಂತಿಯ ನಡುವೆ ಈ ಎಲ್ಲಾ ಪ್ರೇಮ ಪ್ರಕರಣಗಳು ವೈರಲ್‌ ಆಗುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ, ಇನ್ನೂ ಈ ಕುರಿತು ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...