ಬಿಗ್ ಬಾಸ್ ಕನ್ನಡ ಸೀಸನ್ 11ಗೆ ಹೋಸ್ಟ್‌ ಇವರೇ! ಪ್ರೋಮೋದೊಂದಿಗೆ ರಿವೀಲ್‌ ಆಯ್ತು ಬಿಗ್‌ ಸೀಕ್ರೆಟ್!!‌ 11: ಬಿಗ್ ಬಾಸ್ ಕನ್ನಡ ಸೀಸನ್ 11 ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಒಂದು ಸಿಕ್ಕಿದೆ.. ಇದೀಗ ಈ ಸಂಬಂಧ ಪ್ರೋಮೋ ಕೂಡ ರಿಲೀಸ್‌ ಆಗಿದ್ದು, ಯಾರು ಹೋಸ್ಟ್‌ ಎನ್ನುವುದು ಕೂಡ ಬಹಿರಂಗವಾಗಿದೆ.. ತೆಲುಗು ಬಿಗ್‌ಬಾಸ್‌ ಆರಂಭವಾಗಿದ್ದನ್ನು ನೋಡಿ ಕನ್ನಡಿಗರು ಸಹ ಬಿಗ್‌ಬಾಸ್‌ ಅಪ್ಡೇಟ್‌ಗಾಗಿ ಕಾತುರದಿಂದ ಕಾಯುತ್ತಿದ್ದರು.. ಅಲ್ಲದೇ ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿದ್ದ ಸುದೀಪ್‌ ಅವರ ಮಾತು ಕೇಳಿ ಯಾರು ಹೋಸ್ಟ್‌ ಆಗಲಿದ್ದಾರೆ ಎನ್ನುವ ಕುತೂಹಲ ಮೂಡಿತ್ತು.. ಈ ಬಹುನಿರೀಕ್ಷಿತ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ರ ಮೊದಲ ಪ್ರೋಮೋ ರಿಲೀಸ್‌ ಆಗಿದ್ದು, ಬೆಂಕಿ.. ಬಿರುಗಾಳಿಯನ್ನು ಒಳಗೊಂಡಿರುವ ಕಣ್ಣಿನ ಲೋಗೋಗೆ ಗುಡುಗಿನ ಸದ್ದು ಎಲ್ಲರನ್ನು ಬೆಚ್ಚಿಬೀಳಿಸುವಂತಿದೆ.. ಇದನ್ನೂ ಓದಿ- ಈ ಬಾರಿಯೂ ಬಿಗ್‌ಬಾಸ್‌ ಕಣ್ಣಿನ ಲೋಗೋ ಫುಲ್‌ ಅಟ್ರ್ಯಾಕ್ಟ್‌ ಆಗಿ ಕಾಣಿಸಿಕೊಂಡಿದ್ದು, ಬೆಂಕಿ ಮತ್ತು ನೀರಿನ ಸಮ್ಮಿಲನದಲ್ಲಿ ಬಿಗ್‌ ಬಾಸ್‌ ಕಣ್ಣು ಮೂಡಿ ಬಂದಿದೆ.. ಹೀಗೆ ಸಾಕಷ್ಟು ವಿಶೇಷವಾಗಿರುವ ಪ್ರೋಮೋ ರಿಲೀಸ್‌ ಆಗಿದ್ದು, ಎಲ್ಲ ಸೀಸನ್‌ಗಳಿಗಿಂತ ಈ ಸೀಸನ್‌ ಭರ್ಜರಿಯಾಗಿ ಇರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.. ಇದನ್ನೂ ಓದಿ- ಇನ್ನು ಈ ಬಾರಿ ಬಿಗ್‌ಬಾಸ್‌ ಹೋಸ್ಟ್‌ ಯಾರು ಎನ್ನುವುದು ಬಹುದೊಡ್ಡ ಚರ್ಚೆಯ ವಿಷಯವಾಗಿತ್ತು.. ಆದರೆ ಇದೀಗ ಇದಕ್ಕೆ ತೆರೆಬಿದ್ದಿದೆ.. ಹೌದು ರಿಲೀಸ್‌ ಆಗಿರುವ ಪ್ರೋಮೋದಲ್ಲಿ ಕಿಚ್ಚ ಸುದೀಪ್‌ ಅವರೇ ನಿರೂಪಣೆ ಮಾಡುತ್ತಾರೆ ಎನ್ನುವುದು ಗೊತ್ತಾಗಿದೆ.. ಏಕೆಂದರೇ ಅದರಲ್ಲಿ ಕಿಚ್ಚಸುದೀಪ್‌ ಹ್ಯಾಶ್‌ ಟ್ಯಾಗ್‌ ಬಳಸಲಾಗಿದೆ.. ಹೀಗಾಗಿ ಈ ಬಾರಿಯೂ ಸ್ಯಾಂಡಲ್‌ವುಡ್‌ ಬಾದ್‌ ಷಾ ಕಿಚ್ಚನೇ ನಿರೂಪಕ ಎನ್ನುವುದು ಪಕ್ಕಾ ಆಗಿದೆ.. ಸದ್ಯ ರಿಲೀಸ್‌ ಆಗಿರುವ ಈ ಪ್ರೋಮೋ ಬಿಗ್‌ಬಾಸ್‌ ಅಭಿಮಾನಿಗಳಲ್ಲಿ ಕುತೂಲ ಹೆಚ್ಚಿಸುತ್ತಿದ್ದು, ಕಿಚ್ಚ ಸುದೀಪ್‌ ಅವರು ಇರುವಂತಹ ಪ್ರೋಮೋ ಯಾವಾಗ ರಿಲೀಸ್‌ ಆಗುತ್ತೇ ಎಂದು ವೀಕ್ಷಕರು ಕಾತುರದಿಂದ ಕಾಯ್ತಾಇದ್ದಾರೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...