ಈ ಬಾರಿ ಬಿಗ್ ಬಾಸ್ ಕನ್ನಡದಲ್ಲಿ ಹಾಟ್‌ ಬ್ಯೂಟಿ ಸನ್ನಿ ಲಿಯೋನ್! ಶೋ ಆರಂಭಕ್ಕೂ ಮುನ್ನ ವೀಕ್ಷಕರಲ್ಲಿ ಹೆಚ್ಚಾಯ್ತು ಕುತೂಹಲ : ಬಿಗ್‌ ಬಾಸ್‌ ಶುರುವಾಗಲಿದೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ, ಯಾರೆಲ್ಲಾ ಸ್ಪರ್ಧಿಗಳು ದೊಡ್ಮನೆಯೊಳಗೆ ಕಾಲಿಡಲಿದ್ದಾರೆ ಎಂಬ ಸಂಭಾವ್ಯ ಪಟ್ಟಿಗಳು ಎಲ್ಲೆಡೆ ಹರಿದಾಡಲು ಶುರುವಾಗಿದೆ :ಕನ್ನಡ ಬಿಗ್‌ ಬಾಸ್‌ ಸೀಸನ್‌ 11 ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಇದೀಗ ಶೋ ಆರಂಭಕ್ಕೂ ಮುನ್ನ ಭರ್ಜರಿ ತಯಾರಿಯನ್ನು ನಡೆಸಲಾಗುತ್ತಿದೆ ಎಂಬ ವರದಿ ಇತ್ತೀಚೆಗೆಯಷ್ಟೇ ಹೊರಬಿದ್ದಿದೆ. ಅಂದಹಾಗೆ ಬಿಗ್​ಬಾಸ್​ ಯಾವಾಗ ಬರುತ್ತೆ ಅನ್ನೋದು ಪಕ್ಕಾ ಆಗಿಲ್ಲ, ಆದರೆ ಅಭಿಮಾನಿಗಳು ಮಾತ್ರ ಕಾತುರದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ: ಇನ್ನೊಂದೆಡೆ ಬಿಗ್‌ ಬಾಸ್‌ ಶುರುವಾಗಲಿದೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ, ಯಾರೆಲ್ಲಾ ಸ್ಪರ್ಧಿಗಳು ದೊಡ್ಮನೆಯೊಳಗೆ ಕಾಲಿಡಲಿದ್ದಾರೆ ಎಂಬ ಸಂಭಾವ್ಯ ಪಟ್ಟಿಗಳು ಎಲ್ಲೆಡೆ ಹರಿದಾಡಲು ಶುರುವಾಗಿದೆ. ಇವೆಲ್ಲದರ ಜೊತೆಗೆ ಬಾಲಿವುಡ್‌ ಹಾಟ್‌ ಬ್ಯೂಟಿ ಸನ್ನಿ ಲಿಯೋನ್ ಕೂಡ ಕನ್ನಡ ಬಿಗ್‌ ಬಾಸ್‌ʼಗೆ ಬರ್ತಾರಾ ಎಂಬ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣವೂ ಇದೆ. ಬಿಗ್​ಬಾಸ್​ ಮಾಜಿ ಸ್ಪರ್ಧಿಗಳಾದ ನಿರಂಜನ್ ದೇಶಪಾಂಡೆ ಮತ್ತು ಕಿರಿಕ್ ಕೀರ್ತಿ ಈ ಬಾರಿಯ ಬಿಗ್​ಬಾಸ್ʼ​ಗೆ ಯಾರೆಲ್ಲ ಹೋಗಬಹುದು ಎಂಬ ಲಿಸ್ಟ್ ಬಗ್ಗೆ ಮಾತನಾಡಿದ್ದಾರೆ. ಈ ಲಿಸ್ಟ್​ʼನಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಪಾತ್ರದಲ್ಲಿ ನಟಿಸಿರುವ ತನ್ವಿ ರಾವ್​​, ಗೀತಾ ಸೀರಿಯಲ್​ ನಟಿ ಶರ್ಮಿತಾ ಗೌಡ, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಚಂದ್ರಪ್ರಭ ಹಾಗೂ ರಾಘವೇಂದ್ರ, ಸತ್ಯ ಸೀರಿಯಲ್​ ನಟಿ ಗೌತಮಿ ಜಾಧವ್, ಬೃಂದಾವನ ಧಾರಾವಾಹಿ ನಟ ವರುಣ್​ ಆರಾಧ್ಯ, ರೀಲ್ಸ್‌ ಸ್ಟಾರ್ ವರ್ಷ ಕಾವೇರಿ, ಮಲ್ಲು ಜಮಖಂಡಿ, ಪ್ರಿಯಾ ಸವದಿ ಬರಬಹುದು ಎಂದಿದ್ದಾರೆ. ಇದರ ಜೊತೆಗೆ ಇವರಿಬ್ಬರ ಪ್ರಕಾರ ಸನ್ನಿ ಲಿಯೋನ್ ಬಿಗ್​ಬಾಸ್​ʼಗೆ ಬರಲಿ ಅನ್ನೋದು ಆಸೆಯಾಗಿದೆ. ಇದನ್ನೂ ಓದಿ: ಅಂದಹಾಗೆ ಪ್ರೇಮ್ ಸಿನಿಮಾದಲ್ಲಿ ಸನ್ನಿ ಲಿಯೋನ್ ನಟಿಸಿದ್ದರು. ಇನ್ನು ಇವರ ಮಾತು ನಿಜವಾಗುತ್ತಾ ಎಂಬುದು ಖಚಿತವಾಗಬೇಕಿದ್ದರೆ ಬಿಗ್​ಬಾಸ್​ ಅಸಲಿ ಲಿಸ್ಟ್ ಗೊತ್ತಾಗಬೇಕಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...