ಇವರೇ ನೋಡಿ 8 ರ ಮೊದಲ ಸ್ಪರ್ಧಿ..! ಅಧಿಕೃತವಾಗಿ ಘೋಷಣೆ 8 : ಬಿಗ್‌ ಬಾಸ್‌ ತನ್ನ ಮೊದಲ ಸ್ಪರ್ಧಿಯ ಪ್ರೋಮೋ ರಿಲೀಸ್‌ ಮಾಡಿದೆ. ಈ ಬಾರಿ ದೊಡ್ಮನೆಗೆ ಯಾರು ಪ್ರವೇಶ ಮಾಡ್ತಾರೆ ಅಂತ ಕಾಯುತ್ತಿದ್ದ ಕಿರುತೆರೆ ಪ್ರೇಕ್ಷಕರ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ.. ಹಾಗಿದ್ರೆ ಬಿಗ್‌ ಹೌಸ್‌ ಪ್ರವೇಶಿಸಿದ ಮೊದಲ ಸ್ಪರ್ಧಿ ಯಾರು..? ಬನ್ನಿ ನೋಡೋಣ.. 8 :ಕಿರುತೆರೆ ಪ್ರೇಕ್ಷಕರ ನೆಚ್ಚಿನ ಟಿವಿ ಶೋ ಬಿಗ್ ಬಾಸ್ ಪ್ರಾರಂಭವಾಗಿದೆ. ಇಂದು ಸಂಜೆ ನಡೆದ ಶೋ ಲಾಂಚ್‌ ಸಮಾರಂಭದಲ್ಲಿ ನಿರೂಪಕ ನಾಗಾರ್ಜುನ ಅವರು ಮೊದಲು ಗ್ರ್ಯಾಂಡ್ ಎಂಟ್ರಿ ಕೊಟ್ಟು, ಎಲ್ಲರನ್ನು ಸ್ವಾಗತಿಸಿ ನೇರವಾಗಿ ಬಿಗ್ ಬಾಸ್ ಮನೆಗೆ ತೆರಳಿ, ಹೊಸ ಬಿಗ್‌ಹೌಸ್‌ ದರ್ಶನ ಮಾಡಿ ವಿಶೇಷತೆ ತಿಳಿಸಿದರು.. ಹೌದು.. ಟಿವಿ ಪ್ರೇಕ್ಷಕರ ನೆಚ್ಚಿನ ಟಿವಿ ಶೋ ಬಿಗ್ ಬಾಸ್ ಅಬ್ಬರದಿಂದ ಪ್ರಾರಂಭವಾಗಿದೆ. ಈ ಬಾರಿ ದೊಡ್ಮನೆಯಲ್ಲಿ ವಿಶೇಷ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಜನಪ್ರಿಯ ಕಿರುತೆರೆ ನಟಿ ಯಶ್ಮಿ ಗೌಡ ಬಿಗ್ ಬಾಸ್ ಸೀಸನ್ 8 ರಲ್ಲಿ ಮೊದಲ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶ ಮಾಡಿದ್ದಾರೆ.. ಇದನ್ನೂ ಓದಿ: ‘ನಾಟಿ ನಾಟಿ ಗಲ್’ ಹಾಡಿಗೆ ಸ್ಟೆಪ್ ಹಾಕುತ್ತಾ ಯಶ್ಮಿ ಬಿಗ್ ಬಾಸ್ ವೇದಿಕೆ ಮೇಲೆ ಬಂದರು. ಯಶ್ಮಿ ‘ಸ್ವಾತಿ ಚಿನುಕುಲು’, ‘ನಾಗಭೈರವಿ’, ‘ಕೃಷ್ಣ ಮುಕುಂದ ಮುರಾರಿ’ ಧಾರಾವಾಹಿಗಳ ಮೂಲಕ ಕಿರುತೆರೆ ಅಭಿಮಾನಿಗಳಲ್ಲಿ ಉತ್ತಮ ಮನ್ನಣೆ ಗಳಿಸಿದ್ದಾರೆ.. ಸಧ್ಯ ಬಿಗ್‌ಹೌಸ್‌ಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. 🌟 ' 8 ! 🔥✨ . ! 📺🎉 — (@) ಯಶ್ಮಿ ಗೌಡ ಸಾಮಾಜಿಕ ಜಾಲತಾಣಗಳಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಶೋ ವೇದಿಕೆಯ ಮೇಲೆ ಬಂದ ಯಶ್ಮಿ ಮೊದಲು ನಾಗಾರ್ಜುನ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಆ ನಂತರ ಹೂಗಳನ್ನು ನೀಡಿದರು. ಸಧ್ಯ ಈ ಕುರಿತ ಪ್ರೋಮೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...