"ನೆಪೋಲಿಯನ್" ಆಗಿ "ನಟ್ವರ್ ಲಾಲ್" ಆಗಮನ ಚಿತ್ರಕ್ಕೆ "ನೆಪೋಲಿಯನ್" ಎಂದು ಹೆಸರಿಡಲಾಗಿದೆ. ಸಂಕ್ರಾಂತಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು "ನಟ್ವರ್ ಲಾಲ್" ಚಿತ್ರದ ನಿರ್ದೇಶಕ ಲವ ವಿ ಅವರೆ ನಿರ್ದೇಶಿಸುತ್ತಿದ್ದಾರೆ‌. :ಇತ್ತೀಚೆಗೆ ತೆರೆಕಂಡ ತನುಷ್ ಶಿವಣ್ಣ ಅಭಿನಯದ "ನಟ್ವರ್ ಲಾಲ್" ಚಿತ್ರ ಜನಮನಸೂರೆಗೊಂಡಿತ್ತು. ಅಮೇಜಾನ್ ಪ್ರೈಮ್ ನಲ್ಲೂ ಈ ಚಿತ್ರವನ್ನು ಅಧಿಕ ಸಂಖ್ಯೆಯ ಜನರು ‌ವೀಕ್ಷಿಸುತ್ತಿದ್ದಾರೆ. ಈ ಖುಷಿಯ ಸಂದರ್ಭದಲ್ಲಿ ತನುಷ್ ಶಿವಣ್ಣ ನಾಯಕನಾಗಿ ನಟಿಸುತ್ತಿರುವ ಮತ್ತೊಂದು ಚಿತ್ರದ ಘೋಷಣೆಯಾಗಿದೆ. ಇದನ್ನೂ ಓದಿ: ಚಿತ್ರಕ್ಕೆ "ನೆಪೋಲಿಯನ್" ಎಂದು ಹೆಸರಿಡಲಾಗಿದೆ. ಸಂಕ್ರಾಂತಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು "ನಟ್ವರ್ ಲಾಲ್" ಚಿತ್ರದ ನಿರ್ದೇಶಕ ಲವ ವಿ ಅವರೆ ನಿರ್ದೇಶಿಸುತ್ತಿದ್ದಾರೆ‌. "ವಿಕ್ರಾಂತ್ ರೋಣ" ಖ್ಯಾತಿಯ ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಹಾಗೂ "ಮಾರ್ಟಿನ್" ಖ್ಯಾತಿಯ ಮಹೇಶ್ ಅವರ ಸಂಕಲನ ಈ ನೂತನ ಚಿತ್ರಕ್ಕಿದೆ. ಮುಂದಿನ ತಿಂಗಳ ಮಧ್ಯದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಕರ್ನಾಟಕದ ಅನೇಕ‌ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ. ಶೋಷಿತ ಹೆಣ್ಣುಮಕ್ಕಳ ಪರ ಧ್ವನಿ ಎತ್ತುವ ಕಥಾಹಂದರ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ದ್ಯಾವಿಪ್ರಸಾದ್ ಸಂಗೀತ ನೀಡುತ್ತಿದ್ದಾರೆ‌. ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...