"ಕಾಲವು ಭಾವನೆಗಳನ್ನು ಬದಲಾಯಿಸಲಾರದು, ಭಾವಗಳು ದೂರವಾಗಿ ಸಾಯಲಾರವು" ರೇಖಾಗಾಗಿ ಅಮಿತಾಭ್‌ ಬಚ್ಚನ್‌ ಪ್ರೀತಿಯ ಪಾಠ? : ಅಮಿತಾಬ್ ಬಚ್ಚನ್ ತಮ್ಮ ನಟನೆ ಹಾಗೂ ಡೈಲಾಗ್ ಡೆಲಿವರಿಗಾಗಿ ಹೆಸರುವಾಸಿಯಾಗಿದ್ದಾರೆ. ಅವರು ಆಗಾಗ್ಗೆ ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಕಥೆಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿತ್ತಾರೆ. ಇತ್ತೀಚಿನ ದಿನಗಳಲ್ಲಿ ಅವರು ಕೌನ್ ಬನೇಗಾ ಕರೋಡ್ಪತಿಯ ಸೀಸನ್ 16 ರಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿಯೂ ಅವರು ತಮ್ಮ ಜೀವನದ ಕಥೆಗಳನ್ನು ಸ್ಪರ್ಧಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ 43 ವರ್ಷದ ಬ್ಲಾಕ್‌ಬಸ್ಟರ್ ಚಿತ್ರದ ಸಂಭಾಷಣೆಯ ಕುರಿತು ಮಾತನಾಡುತ್ತಾ ಇದ್ದರು, ಅಮಿತಾಭ್‌ ಅವರ ಮಾತುಗಳನ್ನು ಕೇಳುತ್ತಿದ್ದ ಅಭಿಮಾನಿಗಳಿಗೆ ತಕ್ಷಣ ನೆನಪಾಗಿದ್ದು ರೇಖಾ. :ಅಮಿತಾಬ್ ಬಚ್ಚನ್ ತಮ್ಮ ನಟನೆ ಹಾಗೂ ಡೈಲಾಗ್ ಡೆಲಿವರಿಗಾಗಿ ಹೆಸರುವಾಸಿಯಾಗಿದ್ದಾರೆ. ಅವರು ಆಗಾಗ್ಗೆ ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಕಥೆಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿತ್ತಾರೆ. ಇತ್ತೀಚಿನ ದಿನಗಳಲ್ಲಿ ಅವರು ಕೌನ್ ಬನೇಗಾ ಕರೋಡ್ಪತಿಯ ಸೀಸನ್ 16 ರಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿಯೂ ಅವರು ತಮ್ಮ ಜೀವನದ ಕಥೆಗಳನ್ನು ಸ್ಪರ್ಧಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ 43 ವರ್ಷದ ಬ್ಲಾಕ್‌ಬಸ್ಟರ್ ಚಿತ್ರದ ಸಂಭಾಷಣೆಯ ಕುರಿತು ಮಾತನಾಡುತ್ತಾ ಇದ್ದರು, ಅಮಿತಾಭ್‌ ಅವರ ಮಾತುಗಳನ್ನು ಕೇಳುತ್ತಿದ್ದ ಅಭಿಮಾನಿಗಳಿಗೆ ತಕ್ಷಣ ನೆನಪಾಗಿದ್ದು ರೇಖಾ. ಅಮಿತಾಬ್ ಬಚ್ಚನ್ ಜೊತೆ ಕೆಲಸ ಮಾಡುವುದು ಪ್ರತಿಯೊಬ್ಬ ತಾರೆಯರ ಕನಸು. 'ಕೌನ್ ಬನೇಗಾ ಕರೋಡ್ಪತಿ' ಶೋ ತಲುಪುವ ಮೂಲಕ ಸ್ಪರ್ಧಿಗಳು ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಯಾರಾದರಾಗಲೀ ಒಮ್ಮೆಯಾದರೂ ಅಮಿತಾಭ್‌ ಅವರನ್ನು ಒಮ್ಮೆ ಸ್ಪರ್ಶಿಸಬೇಕು ಎಂದು ಬಯಸುತ್ತಾರೆ. ಕೆಲವರು ಛಾಯಾಚಿತ್ರಗಳನ್ನು ತೆಗೆದುಕೊಳ್ಳುವ ಮೂಲಕ ಅವರೊಂದಿಗೆ ನೆನಪುಗಳನ್ನು ಸಂಗ್ರಹಿಸಲು ಬಯಸುತ್ತಾರೆ, ಇತರರು ಅವರನ್ನು ತಮ್ಮ ನಾಯಕನಂತೆ ನೋಡುತ್ತಾರೆ. 1981 ರಲ್ಲಿ ರೇಖಾ, ಅಮಿತಾಬ್ ಮತ್ತು ಜಯಾ ಬಚ್ಚನ್ ಅವರ ನೆನಪುಗಳನ್ನು ರಿಫ್ರೆಶ್ ಮಾಡಿದ ಇತ್ತೀಚಿನ ಸಂಚಿಕೆಯಲ್ಲಿ ದೃಶ್ಯ ಒಂದು ಕಂಡು ಬಂದಿದೆ. ವಾಸ್ತವವಾಗಿ, ಸ್ಪರ್ಧಿ ದೀಪ್ತಿ ಸಿಂಗ್ ಕಾರ್ಯಕ್ರಮಕ್ಕೆ ಬಂದಾಗ, ಕಾರ್ಯಕ್ರಮಕ್ಕೆ ಬರುವ ಮೂಲಕ ತಮ್ಮ ಕನಸು ನನಸಾಯಿತು ಎಂದು ಹೇಳಿದರು. ಯಾಕೆಂದರೆ ಆಕೆ ಬಿಗ್ ಬಿ ಕೈ ಹಿಡಿದು ಹಾಟ್ ಸೀಟ್ ಗೆ ಬರಲು ಬಯಸಿದ್ದಳು. ಜೊತೆಗೆ ಎರಡು ಗುಲಾಬಿಗಳನ್ನೂ ತಂದಿದ್ದ ಆಕೆ ತನಗೆ ಒಂದು ಗುಲಾಬಿಯನ್ನು ನೀಡುವಂತೆ ಅಮಿತಾಭ್‌ಗೆ ವಿನಂತಿಸಿದಳು, ಅದಕ್ಕೊಪ್ಪಿಕೊಂಡ ಅಮಿತಾಭ್ ದೀಪ್ತಿಗೆ ಗುಲಾಬಿಯನ್ನು ನೀಡಿದರು. ದೀಪ್ತಿ ಸಿಂಗ್ ಬಿಗ್ ಬಿಗೆ ಗುಲಾಬಿಗಳನ್ನು ನೀಡಿ ತನ್ನ ಕನಸಿನ ರಾಜ ಎಂದು ಕರೆದರು. 'ಸರ್, ನಾನು ಈ ಹೂವುಗಳನ್ನು ನನ್ನ ಕನಸಿನ ರಾಜನಿಗಾಗಿ ತಂದಿದ್ದೇನೆ, ಅವನು ಪ್ರತಿದಿನ ನನ್ನ ಕನಸಿನಲ್ಲಿ ಬರುತ್ತಾನೆ. ಸರ್, ನೀವು ನನಗೆ ಒಂದು ಕೊಡಿ ಮತ್ತು ನಾನು ನಿಮಗೆ ಒಂದು ಕೊಡುತ್ತೇನೆ ಎಂದರು ನಂತರ ಅಮಿತಾಬ್ ಬಚ್ಚನ್ ದೀಪ್ತಿ ಅವರಿಂದ ಗುಲಾಬಿಯನ್ನು ಪಡೆದರು ಮತ್ತು 1981 ರಲ್ಲಿ ಬಿಡುಗಡೆಯಾದ 'ಸಿಲ್ಸಿಲಾ'ದ ಅಮಿತ್ ಮಲ್ಹೋತ್ರಾ ಆದರು. ಹೂವು ಕೊಡುತ್ತಲೇ ‘ಸಿಲಸಿಲ’ ಡೈಲಾಗ್‌ನೊಂದಿಗೆ ಅಮಿತಾಭ್‌- ‘ಅಪಘಾತದಿಂದ ಕನಸು ಛಿದ್ರವಾದರೆ, ಕಾಲವು ಭಾವನೆಗಳನ್ನು ಬದಲಾಯಿಸಲಾರದು, ಭಾವಗಳು ದೂರವಾಗಿ ಸಾಯಲಾರವು... ಈ ಪ್ರೀತಿಯೇ ಹೃದಯಗಳ ಸಂಬಂಧ.. ಈ ಪ್ರೀತಿಯು ಹೃದಯಗಳ ಸಂಬಂಧ, ಅಂತಹ ಸಂಬಂಧವು ಎಂದಿಗೂ ಗಡಿಯಾಗಿ ಬದಲಾಗುವುದಿಲ್ಲ. , ನೀವು ಯಾವುದೇ ದಾರಿಯ ಎಡೆಗೆ ಸಾಗಿದರು ನನ್ನ ಹೃದಯದಲ್ಲಿ ನಿಮಗೆ ಗಮ್ಯ ಸ್ಥಾನ ಎಂದರು. ಈ ಡೈಲಾಗ್‌ ಕೇಳಿ ಅಲ್ಲ ನೆರೆದಿದ್ದ ಪ್ರೇಕ್ಷಕರು ಒಂದು ಭಾರಿ ರೇಖಾ ಅವರನ್ನು ನೆನಪಿಸಿಕೊಂಡರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...