ಹೀರೋಯಿನ್ ಬಟ್ಟೆ ಬದಲಿಸೋದನ್ನ ನೋಡಲು ಕಾರವಾನ್‌ನಲ್ಲಿ ಸೀಕ್ರೇಟ್ ಕ್ಯಾಮೆರಾ.. ಇದನ್ನ ಕಣ್ಣಾರೆ ಕಂಡಿದ್ದೇನೆ ಎಂದ ಸ್ಟಾರ್‌ ನಟಿ !! : ಇತ್ತೀಚೆಗಷ್ಟೇ ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಆಘಾತಕಾರಿ ಕಥೆಯೊಂದನ್ನು ಬಹಿರಂಗಪಡಿಸಿದ್ದಾರೆ. :ಹೇಮಾ ಸಮಿತಿ ವರದಿ ಬಂದ ನಂತರ ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಚರ್ಚೆಯಾಗುತ್ತಿದೆ. ಅನೇಕ ನಟಿಯರು ಮುಂದೆ ಬಂದು ತಮಗಾದ ಕಹಿ ಅನುಭವಗಳನ್ನು ಧೈರ್ಯವಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಈಗಾಗಲೇ ಹಲವರು ಮಾತನಾಡಿದ್ದಾರೆ. ಇತ್ತೀಚೆಗಷ್ಟೇ ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಆಘಾತಕಾರಿ ಕಥೆಯೊಂದನ್ನು ಬಹಿರಂಗಪಡಿಸಿದ್ದಾರೆ. ಕಾರವಾನ್‌ನಲ್ಲಿ ಹಿಡನ್ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ನಾಯಕಿಯರ ನಗ್ನ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತದೆ ಎಂದು ಹೇಳಿದ್ದಾರೆ. ಸೆಟ್‌ಗಳಲ್ಲಿ ಪುರುಷರು ಒಟ್ಟಿಗೆ ಕುಳಿತು ತಮ್ಮ ಮೊಬೈಲ್ ಫೋನ್‌ನಲ್ಲಿ ನಾಯಕಿಯರ ವೀಡಿಯೊಗಳನ್ನು ನೋಡಿ ಆನಂದಿಸುವ ಘಟನೆಗಳನ್ನು ನಾನು ನೋಡಿದ್ದೇನೆ ಎಂದು ರಾಧಿಕಾ ಹೇಳಿದ್ದಾರೆ. ಇದನ್ನೂ ಓದಿ: ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಹೇಮಾ ಸಮಿತಿಯ ವರದಿ ವಿಳಂಬವಾಗುತ್ತಿರುವುದು ಆಶ್ಚರ್ಯ ತಂದಿದೆ ಎಂದು ಹೇಳಿದ್ದಾರೆ. 46 ವರ್ಷಗಳಿಂದ ಈ ಕ್ಷೇತ್ರದಲ್ಲಿ ಇದ್ದೇನೆ. ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಚಿತ್ರರಂಗದಲ್ಲಿ ಮಹಿಳೆಯರು ಯಾವಾಗಲೂ ಲೈಂಗಿಕ ಕಿರುಕುಳ ಎದುರಿಸುತ್ತಲೇ ಇದ್ದಾರೆ. ಕೇರಳ ಮಾತ್ರವಲ್ಲದೆ ಬೇರೆ ಭಾಷೆಯಲ್ಲೂ ಅನೇಕ ನಟಿಯರು ತಮ್ಮ ಕೋಣೆಗೆ ಬಂದು ಸಹಾಯ ಕೇಳುತ್ತಾರೆ ಎಂದು ರಾಧಿಕಾ ಹೇಳಿದ್ದಾರೆ. ಕಾರವಾನ್‌ನಲ್ಲಿ ಹಿಡನ್ ಕ್ಯಾಮೆರಾದಲ್ಲಿ ತೆಗೆದ ದೃಶ್ಯಗಳನ್ನು ನೋಡಿದ್ದೇನೆ ಎಂದು ರಾಧಿಕಾ ಹೇಳಿದ್ದಾರೆ. ಕಾರವಾನ್‌ ನಲ್ಲಿ ಗಂಡಸರು ಹೀರೋಯಿನ್ ಗಳ ಬಟ್ಟೆ ಬದಲಾಯಿಸುವಾಗ ಸೀಕ್ರೆಟ್ ಕ್ಯಾಮೆರಾ ಇಟ್ಟು ವಿಡಿಯೋ ಮಾಡಿ ನೋಡಿ ಎಂಜಾಯ್ ಮಾಡಿದ್ದನ್ನು ನೇರವಾಗಿ ನೋಡಿದ್ದೇನೆ ಎಂದು ರಾಧಿಕಾ ಹೇಳಿದ್ದಾರೆ. ಅಷ್ಟೇ ಅಲ್ಲ, ಪ್ರತಿ ಫೋನ್‌ಗಳಲ್ಲಿ ಪ್ರತ್ಯೇಕ ಫೋಲ್ಡರ್‌ಗಳಿವೆ. ಅವರ ಹೆಸರನ್ನು ಕ್ಲಿಕ್ ಮಾಡಿದರೆ ನಟಿಯರ ಬಟ್ಟೆ ಬದಲಿಸುವ ವಿಡಿಯೋಗಳು ಬರುತ್ತವೆ ಎಂದು ರಾಧಿಕಾ ಹೇಳಿದ್ದಾರೆ. ಅವರನ್ನು ನೋಡಿ ಹೆದರಿ ಲೊಕೇಶನ್‌ನಲ್ಲಿ ಕಾರವಾನ್ ಬಳಸದೆ ತನ್ನ ಹೋಟೆಲ್ ಕೋಣೆಗೆ ಹೋಗಿದ್ದೆ ಎಂದು ರಾಧಿಕಾ ಹೇಳಿದ್ದಾರೆ. ರಾಧಿಕಾ ಮಾಡಿರುವ ಈ ಕಾಮೆಂಟ್ಸ್ ಈಗ ಚಿತ್ರರಂಗದಲ್ಲಿ ಸಂಚಲನ ಮೂಡಿಸುತ್ತಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...