2024: ಶಾರುಖ್, ಕರಣ್ ಜೋಹರ್‌, ವಿಕ್ಕಿ ಕೌಶಲ್ ಸಾರಥ್ಯದಲ್ಲಿ ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್‌..! 2024: ಲಕ್ಷಾಂತರ ಜನರ ಹೃದಯ ಕದ್ದ ವಿಕ್ಕಿ ಕೌಶಲ್ ಅವರು ಬಾಲಿವುಡ್ ಲೆಜೆಂಡರಿ ನಟರಾದ ಶಾರುಖ್ ಖಾನ್ ಮತ್ತು ಕರಣ್ ಜೋಹರ್ ಅವರೊಂದಿಗೆ ಈ ಸೆಪ್ಟೆಂಬರ್‌ನಲ್ಲಿ ಅಬುಧಾಬಿಯ ಯಾಸ್ ಐಲ್ಯಾಂಡ್‌ನಲ್ಲಿ ಬಹು ನಿರೀಕ್ಷಿತ 24 ನೇ ಆವೃತ್ತಿಯ ಅವಾರ್ಡ್‌ ಈವೆಂಟ್‌ಗೆ ಹೋಸ್ಟ್‌ ಆಗಿ ಸೇರಲು ಸಿದ್ಧರಾಗಿದ್ದಾರೆ. : ಬಾಲಿವುಡ್ ನಟ ವಿಕ್ಕಿ ಕೌಶಲ್ ಸೂಪರ್ ಸ್ಟಾರ್ ಶಾರುಖ್ ಖಾನ್ ಮತ್ತು ಖ್ಯಾತ ಚಿತ್ರನಿರ್ಮಾಪಕ ಕರಣ್ ಜೋಹರ್ ಅವರರೊಂದಿಗೆ ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ () 2024 ರ ನಿರೂಪಕರಾಗಿ ಸೇರಿಕೊಳ್ಳಲಿದ್ದಾರೆ. ಭಾರತೀಯ ಚಿತ್ರರಂಗವನ್ನು ಅಭಿನಂದಿಸುವ ಪ್ರತಿಷ್ಠಿತ ಪ್ರಶಸ್ತಿ ಸಮಾರಂಭವು ಸೆಪ್ಟೆಂಬರ್ 28 ರಂದು ಅಬುಧಾಬಿ ಯಾಸ್‌ನಲ್ಲಿ ನಡೆಯಲಿದೆ. ಇದನ್ನೂ ಓದಿ- ಹೋಸ್ಟಿಂಗ್ ಲೈನ್‌ಅಪ್‌ಗೆ ಕೌಶಲ್ ಅವರ ಸೇರ್ಪಡೆಯು ಜನಪ್ರಿಯ ಈವೆಂಟ್‌ಗೆ ಹೆಚ್ಚಿನ ಸ್ಟಾರ್ ಪವರ್ ಅನ್ನು ತರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.. ಈ ಸುದ್ದಿಯನ್ನು ವಿಕ್ಕಿ ಅವರೇ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಪ್ರಕಟಿಸಿದ್ದು, " . #IIFAAwards2024 !!! ? # # 28th ." ಎಂದು ಬರೆದುಕೊಂಡಿದ್ದಾರೆ.. ಇದನ್ನೂ ಓದಿ- 2024 ಸೆಪ್ಟೆಂಬರ್ 27 ರಿಂದ ಸೆಪ್ಟೆಂಬರ್ 29 ರವರೆಗೆ ಮೂರು ದಿನಗಳವರೆಗೆ ನಡೆಯಲಿದ್ದು, ನಾಲ್ಕು ದಕ್ಷಿಣ ಭಾರತದ ಸಿನಿರಂಗವನ್ನು ಗೌರವಿಸಲು ಮೀಸಲಾಗಿರುವ ಸೆಪ್ಟೆಂಬರ್ 27 ರಂದು ಪ್ರಾರಂಭವಾಗುತ್ತದೆ.. ಮರುದಿನ, ಸೆಪ್ಟೆಂಬರ್ 28, ಬಹು ನಿರೀಕ್ಷಿತ ನಡೆಯಲಿದೆ.. ಅಲ್ಲಿ ಕೌಶಲ್, ಖಾನ್ ಮತ್ತು ಜೋಹರ್ ಹೋಸ್ಟ್‌ಗಳಾಗಿ ಮಿಂಚಲಿದ್ದಾರೆ... ಈ ಕಾರ್ಯಕ್ರಮವು ಬಾಲಿವುಡ್‌ನಲ್ಲಿ ಶಾಹಿದ್ ಕಪೂರ್ ಸೇರಿದಂತೆ ದೊಡ್ಡ ಹೆಸರುಗಳನ್ನು ಸೆಳೆಯುವ ನಿರೀಕ್ಷೆಯಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...