ಸುದೀಪ್‌ ತುರ್ತು ಪತ್ತಿಕಾಗೋಷ್ಠಿ! ದರ್ಶನ್‌ ಕುರಿತ ಪ್ರಶ್ನೆಗೆ ಕಿಚ್ಚನ ಖಡಕ್‌ ಉತ್ತರ ಶನಿವಾರ (ಆಗಸ್ಟ್‌ 31) ದಂದು ಕಿಚ್ಚ ಸುದೀಪ್‌ ತುರ್ತು ಪತ್ರಿಕಾಗೋಷ್ಟೀ ಕರೆದಿದ್ದರು, ಈ ವೇಳೆ ಮಾತನಾಡಿದ ಅವರು ತಮ್ಮ ಹುಟ್ಟುಹಬ್ಬ, ಸಿನಿಮಾ ಅಪ್ಡೇಟ್ಸ್‌ ಅಷ್ಟೆ ಅಲ್ಲ ದರ್ಶನ್‌ ಕುರಿತು ಕೇಳಿದ ಪ್ರಸ್ನೆಗಳಿಗೂ ಕೂಡ ಖಡಕ್‌ ಆಗಿ ಉತ್ತರ ನೀಡಿದ್ದಾರೆ. :ಶನಿವಾರ (ಆಗಸ್ಟ್‌ 31) ದಂದು ಕಿಚ್ಚ ಸುದೀಪ್‌ ತುರ್ತು ಪತ್ರಿಕಾಗೋಷ್ಟೀ ಕರೆದಿದ್ದರು, ಈ ವೇಳೆ ಮಾತನಾಡಿದ ಅವರು ತಮ್ಮ ಹುಟ್ಟುಹಬ್ಬ, ಸಿನಿಮಾ ಅಪ್ಡೇಟ್ಸ್‌ ಅಷ್ಟೆ ಅಲ್ಲ ದರ್ಶನ್‌ ಕುರಿತು ಕೇಳಿದ ಪ್ರಸ್ನೆಗಳಿಗೂ ಕೂಡ ಖಡಕ್‌ ಆಗಿ ಉತ್ತರ ನೀಡಿದ್ದಾರೆ. ಸುದೀಪ್‌ ಹಾಗೂ ದರ್ಶನ್‌ ಅವರ ಸ್ನೇಹ ಮುರಿದು ಹಲವು ದಿನಗಳು ಕಳೆದಿವೆ. ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಜೈಲು ಸೇರಿದ್ದಾರೆ. ದಾಸ ಜೈಲು ಸೇರಿದಾಗಿನಿಂದ ಕಿಚ್ಚನ ಬಳಿ ದರ್ಶನ್‌ ಕುರಿತ ಪ್ರಸ್ನೆಗಳನ್ನು ಕೇಳಲಾಗುತ್ತಿದೆ. ಈ ಕುರಿತು ಎಲ್ಲೂ ಪ್ರತಿಕ್ರಿಯಿಸದ ಕಿಚ್ಚ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಇನ್ನೂ, ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಸುದೀಪ್‌ ಅವರ ಬಳಿ ದರ್ಶನ್‌ ಕೊಲೆ ಕೇಸ್‌ ಪ್ರಕರನ ಪ್ರಶ್ನೆಯನ್ನು ಕೇಳಲಾಯಿತು ಈ ಬಗ್ಗೆ ಮಾತನಾಡಿದ ಕಿಚ್ಚ," ನಾವಿಬ್ಬರು ಮಾತೇ ಆಡ್ತಿಲ್ಲ ಅಲ್ವಾ? ನಾವಿಬ್ಬರು ಒಟ್ಟಿಗೆ ಇದ್ದರೆ ಸರಿ ಹೊಂದುವುದಿಲ್ಲ. ಸೂರ್ಯ ಬೆಳಗ್ಗೆ, ಚಂದ್ರ ರಾತ್ರಿ ಇದ್ರೇನೆ ಚೆಂದ. ಇಬ್ಬರು ಒಟ್ಟಿಗೆ ಕಂಡರೆ ಚೆಂದ ಕಾಣುವುದಿಲ್ಲ." ಎಂದಿದ್ದಾರೆ. ಇನ್ನೂ, ಈ ಕುರಿತು ಮಾತನಾಡಿದ ದರ್ಸನ್‌ " ಹೀಗೇನು ನಾನು ಒಳಗೆ ಹೋಗಿ ದರ್ಸನ್‌ ಅವರನ್ನು ಹೊರಗೆ ಕಳುಹಿಸ ಬೇಕಾ? ಅವರಿಗೂ ಕೂಡ ಒಂದು ಕುಟುಂಬ ಇದೆ, ಅವರಿಗಾಗಿ ಕಾಯುತ್ತಿರುವ ಅಭಿಮಾನಿಗಳಿದ್ದಾರೆ, ನಾನು ಈ ಕುರಿತು ಮಾತನಾಡಿ ಅವರ್ಯಾರನ್ನು ನೋಯಿಸಲು ಬಯಸುವುದಿಲ್ಲ" ಎಂದಿದ್ದಾರೆ. ನಮ್ಮ ದೇಶದಲ್ಲಿ ಕಾನೂನು ಒಳ್ಳೆಯದ್ದೇ ಇದೆ. ಕಾನೂನನ್ನು ನಾನು ನಂಬುತ್ತೇನೆ, ಮಾಧ್ಯಮಗಳಿಂದಲೇ ನನಗೂ ಕೂಡ ಈ ಕೇಸ್‌ನ ಬೆಳವಣಿಗೆಗಳ ಬಗ್ಗೆ ಗೊತ್ತಾಗುತ್ತಿದೆ" ಎಂದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...