ಧ್ರುವ ಅಭಿಮಾನಿಗಳಿಗೆ ಹಬ್ಬ.. ಶೀಘ್ರದಲ್ಲೇ ಬಹುನಿರೀಕ್ಷೆಯ ‘ಮಾರ್ಟಿನ್’ ಸಿನಿಮಾದ ಲವ್ ಸಾಂಗ್ ರಿಲೀಸ್! : ಮಾರ್ಟಿನ್. . ಪ್ಯಾನ್ ವರ್ಲ್ಡ್ ಸಿನಿಮಾ.. ಈಗಾಗಲೇ ಮಾರ್ಟಿನ್ ಸಿನಿಮಾದ ಚರ್ಚೆ ಸಪ್ತಸಾಗರದಾಚೆ ಕೂಡ ಜೋರಾಗೆ ನಡೆಯುತ್ತಿದೆ. ವಿದೇಶಿ ಮಾಧ್ಯಮಗಳಲ್ಲೂ ಮಾರ್ಟಿನ್ ಹವಾ ಶುರುವಾಗಿದೆ. ಟ್ರೇಲರ್ ಬಳಿಕ ಏನು ಕೊಡುತ್ತೀರಾ ಅನ್ನೋ ಫ್ಯಾನ್ಸ್ ಪ್ರಶ್ನೆಗೆ ಉತ್ತರ ಸಿಕ್ಕಿದೆ. : ಸೆಪ್ಟೆಂಬರ್ 3ರಂದು ಮಾರ್ಟಿನ್ ಸಿನಿಮಾದ ಲವ್ ಸಾಂಗ್ ರಿಲೀಸ್ ಆಗಲಿದ್ದು ಅಭಿಮಾನಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಎಪಿ ಅರ್ಜುನ್ ನಿರ್ದೇಶನದ ಈ ಸಿನಿಮಾದಲ್ಲಿ ಆಕ್ಷನ್ ಪ್ರಿನ್ಸ್ ಅಬ್ಬರ ಜೋರಾಗೆ ಇರುತ್ತೆ ಅನ್ನೋದಕ್ಕೆ ಟ್ರೇಲರ್ ಮತ್ತು ಟೀಸರ್ ಈಗಾಗಲೇ ಸಾಕ್ಷಿಯಾಗಿದೆ. 100ಕೋಟಿಗೂ ಹೆಚ್ಚು ಇನ್ವೆಸ್ಟ್ ಮಾಡಿರೋ ಈ ಸಿನಿಮಾದ ಬ್ಯುಸಿನೆಸ್ ಕೂಡ ಜೋರಾಗೆ ನಡೆಯುತ್ತಿದೆ ಅನ್ನೋ ಮ್ಯಾಟರ್ ಕೂಡ ಗಾಂಧಿನಗರದಲ್ಲಿ ಗುಲ್ಲೆಬ್ಬಿದೆ. ಅಕ್ಟೋಬರ್ 11ಕ್ಕೆ ಮಾರ್ಟಿನ್ ಸಿನಿಮಾ ವರ್ಲ್ಡ್ ವೈಡ್ ಎಲ್ಲ ಭಾಷೆಗಳಲ್ಲೂ ರಿಲೀಸ್ ಆಗುತ್ತಿದೆ. ಇದನ್ನೂ ಓದಿ- ಇದೀಗ ಲವ್ ಸಾಂಗ್ ಸೆಪ್ಟೆಂಬರ್ 3 ರಂದು 5ಭಾಷೆಗಳಲ್ಲಿ ಲವ್ ಸಾಂಗ್ ರಿಲೀಸ್ ಆಗುತ್ತಿರೋದು ಹೆಮ್ಮೆಯ ವಿಚಾರವಾಗಿದೆ. ಕನ್ನಡದ ಸಿನಿಮಾವನ್ನ ಜಾಗತಿಕ ಮಟ್ಟದತ್ತ ಕೊಂಡೋಗೋ ಪ್ರಯತ್ನಕ್ಕೆ ಕೈಹಾಕಿರೋ ಕನ್ನಡಿಗರ ಸಾಹಸಕ್ಕೆ ಅದ್ರಲ್ಲೂ ಧ್ರುವ ಸರ್ಜಾ ಅವರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ಇದನ್ನೂ ಓದಿ- ಸೆಪ್ಟೆಂಬರ್ 3ರ ವರೆಗೆ ಕಾದು ಲವ್ ಸಾಂಗ್ ನೋಡಿ ಎಂಜಾಯ್ ಮಾಡೋಣ. ಇದರೊಂದಿಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಯ ಸಂದರ್ಶನದಲ್ಲಿ ಕಂಪ್ಲೀಟ್ ಬ್ಯುಸಿ ಆಗಿದ್ದಾರೆ. ಇನ್ನು ಮತ್ತೊಂದು ವಿಶೇಷ ಸಮಾಚಾರವೆಂದರೇ ನಟ ಧ್ರುವ ಸರ್ಜಾ ಬಾಲಿವುಡ್‌ನ ಎಲ್ಲಾ ವಿಷಯಗಳನ್ನು ಒಳಗೊಂಡಿರುವ ಅಪ್ರತಿಮ ಬ್ರಿಟಿಷ್-ಭಾರತೀಯ ಬ್ರಾಡ್‌ಕಾಸ್ಟಿಂಗ್ ಜೋಡಿ ದಿ ರಾಜ್ & ಪ್ಯಾಬ್ಲೋ ಶೋ" ನ ಹೊಸ ಅದ್ಭುತ ಸಂಚಿಕೆಯಲ್ಲಿ ಮುಂಬರುವ ಮಾರ್ಟಿನ್ ಬಗ್ಗೆ ಮಾತನಾಡಲಿದ್ದಾರೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...