ಗೃಹಿಣಿಯರಿಂದ ರಿಲೀಸ್‌ ಆಯ್ತು ಕಾಲಾಪತ್ಥರ್ ಸಿನಿಮಾದ ʼಬಾಂಡ್ಲಿ ಸ್ಟವ್ʼ ಹಾಡು: ಕೇಳ್ತಿದ್ದಂತೆ ಫಿದಾ ಆದ ಫ್ಯಾನ್ಸ್ ಆರಂಭದಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ಅನೂಪ್ ಸೀಳಿನ್, "ಮೊದಲು ಒಂದು ಹಾಡು ಶುರುವಾಗಬೇಕದಾಗಿನಿಂದಲೂ ಸಂಗೀತ ನಿರ್ದೇಶಕರ ಜೊತೆಗೆ ನಿರ್ದೇಶಕರು ಇರುತ್ತಿದ್ದರು‌. ಈಗ ಹಾಗಲ್ಲ‌. ಆದರೆ ಈ ಚಿತ್ರದ ನಿರ್ದೇಶಕ ವಿಕ್ಕಿ ವರುಣ್ ಆರಂಭದಿಂದಲೂ ನನ್ನ ಜೊತೆಗಿದ್ದಾರೆ. ಹಾಡು ಚೆನ್ನಾಗಿ ಬಂದಿದೆ ಅಂದರೆ ಅವರು ಕಾರಣ. ಹಾಡುಗಳಿಗೆ ಹಾಗೂ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ" ಎಂದರು. ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿರುವ, ʼಕೆಂಡಸಂಪಿಗೆʼ ಖ್ಯಾತಿಯ ವಿಕ್ಕಿ ವರುಣ್ ನಿರ್ದೇಶಿಸಿ, ನಾಯಕನಾಗೂ ನಟಿಸಿರುವ ʼಕಾಲಾಪತ್ಥರ್ʼ ಚಿತ್ರಕ್ಕಾಗಿ ಪ್ರಮೋದ್ ಮರವಂತೆ ಬರೆದು, ಅನೂಪ್ ಸೀಳಿನ್ ಸಂಗೀತ ನೀಡಿರುವ "ಬಾಂಡ್ಲಿ ಸೌಟ್" ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಗೃಹಿಣಿಯರಿಂದಲೇ ಈ ಹಾಡು ಬಿಡುಗಡೆಯಾಗಿದ್ದು ವಿಶೇಷ. ಇದನ್ನೂ ಓದಿ: ಆರಂಭದಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ಅನೂಪ್ ಸೀಳಿನ್, "ಮೊದಲು ಒಂದು ಹಾಡು ಶುರುವಾಗಬೇಕದಾಗಿನಿಂದಲೂ ಸಂಗೀತ ನಿರ್ದೇಶಕರ ಜೊತೆಗೆ ನಿರ್ದೇಶಕರು ಇರುತ್ತಿದ್ದರು‌. ಈಗ ಹಾಗಲ್ಲ‌. ಆದರೆ ಈ ಚಿತ್ರದ ನಿರ್ದೇಶಕ ವಿಕ್ಕಿ ವರುಣ್ ಆರಂಭದಿಂದಲೂ ನನ್ನ ಜೊತೆಗಿದ್ದಾರೆ. ಹಾಡು ಚೆನ್ನಾಗಿ ಬಂದಿದೆ ಅಂದರೆ ಅವರು ಕಾರಣ. ಹಾಡುಗಳಿಗೆ ಹಾಗೂ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ" ಎಂದರು. "ಬಾಂಡ್ಲಿ, ಸ್ವವ್ ಹಾಗೂ ಸೌಟ್ ಅನ್ನು ಹೆಚ್ಚಾಗಿ ಗೃಹಿಣಿಯರು ಬಳಸುತ್ತಾರೆ. ಹಾಗಾಗಿ ಈ ಹಾಡನ್ನು ಅವರಿಂದ ಬಿಡುಗಡೆ ಮಾಡಿಸಿದ್ದೇವೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಹಾಗೂ ಪ್ರಮೋದ್ ಮರವಂತೆ ಅವರ ಸಾಹಿತ್ಯ ಚೆನ್ನಾಗಿದೆ‌. ನೃತ್ಯ ಬಾರದ ನನ್ನಿಂದ ಧನು ಮಾಸ್ಟರ್ ಚೆನ್ನಾಗಿ ನೃತ್ಯ ಮಾಡಿಸಿದ್ದಾರೆ. ನಿರ್ಮಾಪಕರು ಅದ್ದೂರಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸೆಪ್ಟೆಂಬರ್ 13 ಚಿತ್ರ ತೆರೆಗೆ ಬರಲಿದೆ" ಎಂದರು ನಾಯಕ ಹಾಗೂ ನಿರ್ದೇಶಕ ವಿಕ್ಕಿ ವರುಣ್. ಇದನ್ನೂ ಓದಿ: ಇಂದು ಬಿಡುಗಡೆಯಾಗಿರುವ ಹಾಡು ಹಾಗೂ ಚಿತ್ರ ಎರಡು ಚೆನ್ನಾಗಿದೆ ಎಂದರು ನಾಯಕಿ ಧನ್ಯ ರಾಮಕುಮಾರ್. ನಿರ್ಮಾಪಕ ಭುವನ್ ಸುರೇಶ್, ನಾಗರಾಜ್ ಬಿಲ್ಲನಕೋಟೆ ಹಾಗೂ ನೃತ್ಯ ನಿರ್ದೇಶಕ ಧನು ಮಾಸ್ಟರ್ "ಬಾಂಡ್ಲಿ ಸ್ಟವ್" ಹಾಡಿನ ಕುರಿತು ಮಾತನಾಡಿದರು ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...