ಐಶ್ವರ್ಯ ರೈ, ಪ್ರಿಯಾಂಕಾ ಇವರ್ಯಾರು ಅಲ್ಲ.. 14 ವರ್ಷಗಳಿಂದ ಒಂದೂ ಸಿನಿಮಾ ಮಾಡಿದೇ.. ಆಸ್ತಿ ವಿಚಾರದಲ್ಲಿ ಅಮಿತಾಬ್‌ ಬಚ್ಚನ್‌ ಅವರನ್ನೇ ಸೋಲಿಸಿದ ನಟಿ ಈಕೆ! : ಸದ್ಯ ಚಿತ್ರರಂಗದಲ್ಲಿ ಅತಿ ಹೆಚ್ಚು ಬಜೆಟ್ ನಲ್ಲಿ ಚಿತ್ರಗಳು ನಿರ್ಮಾಣವಾಗುತ್ತಿರುವುದು ಗೊತ್ತೇ ಇದೆ. ಅಲ್ಲದೇ ಸ್ಟಾರ್ ಹೀರೋಗಳ ಸಂಭಾವನೆಯಂತೂ ಕೇಳೋದೆ ಬೇಡ..ಅಲ್ಲದೇ ನಾಯಕಿಯರೂ ಒಂದು ರೇಂಜ್ ನಲ್ಲಿ ಸಂಭಾವನೆ ಕೇಳುತ್ತಿದ್ದಾರೆ. : ಪ್ರತಿ ಸ್ಟಾರ್‌ ನಟನೂ ಈಗ 100 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಅಲ್ಲದೇ ನಾಯಕಿಯರೂ ಒಂದು ರೇಂಜ್ ನಲ್ಲಿ ಸಂಭಾವನೆ ಕೇಳುತ್ತಿದ್ದಾರೆ. ಆದರೆ ಭಾರತದ ಶ್ರೀಮಂತ ನಾಯಕಿ ಯಾರು ಗೊತ್ತಾ? ಈ ನಟಿ ಅಷ್ಟೊಂದು ಸಿನಿಮಾ ಮಾಡಿಲ್ಲ.. ಅಷ್ಟು ಫಾಲೋಯಿಂಗ್ ಕೂಡ ಸಿಗಲಿಲ್ಲ.. ಆದರೆ ಈಗ ಭಾರತದ ಶ್ರೀಮಂತ ನಾಯಕಿ ಎಂಬ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಕನ್ನಡದ‌ ನಟ ರವಿಚಂದ್ರನ್ ಜೊತೆ ಸಿನಿಮಾ ಮಾಡಿದ್ದ ಚೆಲುವೆ.. ಆಗ ಟಾಪ್ ಹೀರೋಯಿನ್ ಕೂಡ ಆಗಿರಲಿಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವಳ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಆದರೆ, ಸ್ಟಾರ್ ಹೀರೋಯಿನ್ ಗಳನ್ನು ಸೋಲಿಸುವಷ್ಟು ಆಸ್ತಿ ಸಂಪಾದಿಸಿದ್ದಾಳೆ ಈ ಬ್ಯೂಟಿ.. ಇತ್ತೀಚೆಗಷ್ಟೇ ಗುರುವಾರ ಬಿಡುಗಡೆಯಾದ ಹುರುನ್ ಇಂಡಿಯಾ ರಿಚ್ ಲಿಸ್ಟ್.. ಇದರಲ್ಲಿ 4600 ಕೋಟಿ ಸಂಪತ್ತು ಹೊಂದಿರುವ ಚೆಲುವೆ ಟಾಪ್ ಹೀರೋಯಿನ್ ಎನಿಸಿಕೊಂಡಿದ್ದಾರೆ. ಆನಟಿ ಬೇರಾರೂ ಅಲ್ಲ.. ಅವರೇ ಜೂಹಿ ಚಾವ್ಲಾ. ಇದನ್ನೂ ಓದಿ- ತನ್ನ ಸೌಂದರ್ಯ ಮತ್ತು ನಟನೆಯಿಂದ ಬಾಲಿವುಡ್ ಇಂಡಸ್ಟ್ರಿಯಲ್ಲಿ ತನಗೊಂದು ವಿಶೇಷವಾದ ಗುರುತನ್ನು ಗಳಿಸಿಕೊಂಡಿರುವ ನಾಯಕಿ. ಹಿಂದೊಮ್ಮೆ ಹಿಂದಿ, ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಈಗ ಅವರು ಹುರುನ್ ಇಂಡಿಯಾ ವರದಿ ಪ್ರಕಾರ ಶ್ರೀಮಂತ ನಾಯಕಿ. ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಶಾರುಖ್ ಖಾನ್ ಜೊತೆಗೆ ಸ್ಥಾನ ಪಡೆದ ಏಕೈಕ ನಟಿ. ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಅವರಂತಹ ಭಾರತೀಯ ಸೆಲೆಬ್ರಿಟಿಗಳನ್ನು ಒಳಗೊಂಡಿರುವ ಈ ಪಟ್ಟಿಯಲ್ಲಿ ಜೂಹಿ ಚಾವ್ಲಾ ಕೂಡ ಇದ್ದಾರೆ ಎಂಬುದು ಗಮನಾರ್ಹ. 15 ವರ್ಷಗಳಿಂದ ಯಾವುದೇ ದೊಡ್ಡ ಚಿತ್ರಗಳನ್ನು ಮಾಡದ ಜೂಹಿ 4600 ಕೋಟಿ ರೂ.ಗಳ ಒಡೆತಿಯೇ ಎಂದು ಜನ ಆಶ್ಚರ್ಯ ಪಡುತ್ತಿದ್ದಾರೆ. ವಾಸ್ತವವಾಗಿ, ಕನಿಷ್ಠ 1000 ಕೋಟಿ ರೂಪಾಯಿ ಸಂಪತ್ತು ಹೊಂದಿರುವ ಭಾರತೀಯರು ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ. ಈ ಬಾರಿ ಹೊಸದಾಗಿ 220 ಮಂದಿ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.. ಒಟ್ಟು 1539 ಮಂದಿ ಇದ್ದಾರೆ. ಬಾಲಿವುಡ್‌ನ ಬಾದ್ ಶಾ ರೂ.7300 ಕೋಟಿ ಸಂಪತ್ತನ್ನು ಹೊಂದಿರುವ ಭಾರತದ ಅತ್ಯಂತ ಶ್ರೀಮಂತ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ. 1990ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ನಾಯಕಿಯರಲ್ಲಿ ಇವರೂ ಒಬ್ಬರು. ಅಮೀರ್ ಖಾನ್ ಅಭಿನಯದ ಕಯಾಮತ್ ಸೆ ಕಯಾಮತ್ ತಕ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಜೂಹಿ ಚಾವ್ಲಾ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. 2000 ರ ನಂತರ, ಅವರು ಚಲನಚಿತ್ರ ನಿರ್ಮಾಣ ಕ್ಷೇತ್ರವನ್ನು ಪ್ರವೇಶಿಸಿದರು. ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಒಮ್ಮೆ ಈ ನಾಯಕಿಯನ್ನು ಪ್ರೀತಿಸುತ್ತಿದ್ದರು. ಆದರೆ ಜೂಹಿ ಚಾವ್ಲಾ ತಂದೆ ಒಪ್ಪಲಿಲ್ಲ ಎಂದು ಮೊನ್ನೆಯ ಸಂದರ್ಶನವೊಂದರಲ್ಲಿ ಸಲ್ಮಾನ್ ಖಾನ್ ಹೇಳಿದ್ದರು.\ ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...