ದರ್ಶನ್‌ ಕೇಸ್‌ನಲ್ಲಿ ಪೊಲೀಸರದ್ದು ಸುಳ್ಳು ವರದಿ, ಯಾರದೋ ರಕ್ತಕ್ಕೆ ಯಾರದ್ದೋ ಹೆಸರು..! ವಕೀಲ ಕುಡಪಲಿ ಗಂಭೀರ ಆರೋಪ : ಖ್ಯಾತ ವಕೀಲ ನಾಗರಾಜ್‌ ಕುಡುಪಲಿ ಹೇಳಿಕೆಯೊಂದು ಚರ್ಚೆಗೆ ಕಾರಣವಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಲಾಯರ್‌ ದರ್ಶನ್‌ ಕೇಸ್‌ ಸಂಬಂಧ ಪೊಲೀಸರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.. ಈ ಕುರಿತ ವಿಡಿಯೋ ವೈರಲ್‌ ಆಗುತ್ತಿದೆ. :ರೇಣುಕಾಸ್ವಾಮಿ ಹತ್ಯೆ ಪ್ರಕರಣ ರಾಜ್ಯದಲ್ಲಿ ಗಂಭೀರತೆಯನ್ನು ಪಡೆಯುತ್ತಿದೆ. ಅಲ್ಲದೆ, ಇದು ಸ್ಯಾಂಡಲ್‌ವುಡ್‌ಗೆ ಕಪ್ಪು ಚುಕ್ಕೆಯಾಗಿದೆ ಅಂತ ಕೆಲ ನಟ-ನಟಿಯರು ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ.. ಪೊಲೀಸರು ಸಹ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಖ್ಯಾತ ವಕೀಲ ನಾಗರಾಜ್‌ ಕುಡುಪಲಿ ಅವರ ಹೇಳಿಕೆಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಹೌದು.. ನಟಿ ಪವಿತ್ರಗೌಡಗೆ ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಎನ್ನುವರು ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಎನ್ನುವ ಕಾರಣಕ್ಕೆ ನಟ ದರ್ಶನ್‌ ಸೇರಿದಂತೆ ಅವರ ಗ್ಯಾಂಗ್‌ ಹಲ್ಲೆ ನಡೆಸಿ ಹತ್ಯೆಗೈದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ಇದನ್ನೂ ಓದಿ: ಅಲ್ಲದೆ ಕಳೆದ ಕೆಲವು ದಿನಗಳ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್‌ ರಾಜಾತಿಥ್ಯ ಅನುಭವಿಸುತ್ತಿದ್ದ ಎನ್ನುವ ವಿಚಾರ ಬಹಿರಂಗವಾಗುತ್ತಿದ್ದಂತೆ ಇದೀಗ ಆತನನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಿದ್ದಾರೆ. ಅಲ್ಲದೆ, ಆ ಜೈಲಿನಲ್ಲಿದ್ದ ಪ್ರದೋಶ್‌ನನ್ನು ಹಿಂಡಲಗಾ ಕೇಂದ್ರೀಯ ಕಾರಾಗೃಹಕ್ಕೆ ಸ್ಥಳಾಂತರಿಸಿದ್ದಾರೆ. ಇಷ್ಟೇಲ್ಲ ಘಟನೆಗಳ ನಡೆಯುತ್ತಿರುವಾಗಲೇ ಖ್ಯಾತ ವಕೀಲ ನಾಗರಾಜ್‌ ಕುಡುಪಲಿ ಹೇಳಿಕೆಯೊಂದು ಚರ್ಚೆಗೆ ಕಾರಣವಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಲಾಯರ್‌ ದರ್ಶನ್‌ ಕೇಸ್‌ ಸಂಬಂಧ ಪೊಲೀಸರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.. ಅಖಿಲ ಭಾರತ ಕುಡುಪ್ಲಿ ಬ್ರಿಗೇಡ್ ದಾವಣಗೆರೆ 17 ಎಂಬ ಇನ್ಟಾಗ್ರಾಮ್‌ ಖಾತೆಯಲ್ಲಿ ಈ ವಿಡಿಯೋ ಅಪ್‌ಲೋಡ್‌ ಮಾಡಲಾಗಿದೆ. ಇದನ್ನೂ ಓದಿ: ದರ್ಶನ್‌ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಕೇಸ್‌ ಸಂಪೂರ್ಣ ವಿಫಲವಾಗಿದೆ. ಎಫ್‌ಎಸ್‌ಎಲ್‌ ಮತ್ತು ಸಿಎಫ್‌ಎಸ್‌ಎಲ್‌ ರಿಪೋರ್ಟ್‌ ಶುದ್ಧ ಸುಳ್ಳು, ಅದರಲ್ಲಿ ಯಾರದ್ದೋ ರಕ್ತಕ್ಕೆ ಇನ್ಯಾರದ್ದೋ ಪ್ಯಾಟೆರ್ನಿಟಿ ಕೊಟ್ಟಿದ್ದಾರೆ. ಅದಕ್ಕೆ ಸಾಕ್ಷಿ ಹೇಳೋಕೆ ಯಾರು ಬರುತ್ತಿಲ್ಲ.. ನಾನು ವರದಿ ನೋಡಿದ್ದೇನೆ.. ಅಂತ ಹೇಳಿಕೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...