ದರ್ಶನ್‌ ನನ್ನ ಗಾಡ್‌ ಫಾದರ್‌, ಅವರೇ ನನ್ನ ಬೆಳಸುತ್ತಿರೋದು.. ಅದಕ್ಕೆ ಜೈಲಿಗೆ ನೋಡಲು ಹೋಗಿದ್ದೆ : ಪೊಲೀಸರ ಮುಂದೆ ಚಿಕ್ಕಣ್ಣ ಹೇಳಿಕೆ : ನಮ್ಮನ್ನ ಇಂಡಸ್ಟ್ರಿಯಲ್ಲಿ ಕೈ ಹಿಡಿದು ಬೆಳೆಸುತ್ತಿರುವುದು ನಟ ದರ್ಶನ್‌. ಅವರೇ ನಮ್ಮ ಗಾಡ್ ಫಾದರ್.. ನಾನು ಕರ್ಟಸಿ ಮೇಲೆ ದರ್ಶನ್ ಭೇಟಿಯಾಗಲು ಜೈಲಿಗೆ ಹೋಗಿದ್ದೆ ಎಂದು ನಟ ಚಿಕ್ಕಣ್ಣ ತನಿಖಾಧಿಕಾರಿಗಳ ಮುಂದೆ ಹೇಳಿಕೆ ಕೊಟ್ಟಿದ್ದಾರೆ. ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿ ಕೊಲೆ ಆರೋಪಿಗಳ ವಿರುದ್ಧ ನಟ ಚಿಕ್ಕಣ್ಣ 164 ಅಡಿಯಲ್ಲಿ ಹೇಳಿಕೆ ದಾಖಲಿಸಿದ್ದರು. ಆದರೆ ಇದಾದ ಕೆಲವೆ ದಿನಗಳಲ್ಲಿ ನಟ ದರ್ಶನ್ ಭೇಟಿಯಾಗಲು ಜೈಲಿಗೆ ತೆರಳಿದ್ದ ನಟ ಚಿಕ್ಕಣ್ಣನಿಗೆ ರಾತ್ರಿ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಹೀಗಾಗಿ ಇಂದು ಬೆಳಗ್ಗೆ ಇಂದು 9 ಗಂಟೆಗೆ ತನಿಖಾಧಿಕಾರಿಗಳ ಮುಂದೆ ಹಾಜರಾದ ಚಿಕ್ಕಣ್ಣ ಯಾಕೆ ಜೈಲಿಗೆ ಹೋಗಿದ್ದೆ ಎಂಬುದಕ್ಕೆ ಉತ್ತರ ಕೊಟ್ಟಿದ್ದಾರೆ. ನಮ್ಮನ್ನು ಬೆಳೆಸುತ್ತಿರೋದು ನಟ ದರ್ಶನ್, ಇಂಡಸ್ಟ್ರಿಯಲ್ಲಿ ಅವರು ನಮ್ಮನ್ನು ಕೈಹಿಡಿದು ಬೆಳೆಸುತ್ತಿದ್ದಾರೆ. ಇಂಡಸ್ಟ್ರಿಯಲ್ಲಿ ದರ್ಶನದ ಅವರೇ ನಮ್ಮ ಗಾಡ್ ಫಾದರ್ ಆಗಿದ್ದಾರೆ. 164 ಅಡಿಯಲ್ಲಿ ಹೇಳಿಕೆ ಕೊಟ್ಟ ಮೇಲೆ ಆರೋಪಿಗಳನ್ನು ಭೇಟಿಯಾಗಬಾರದು ಎಂದು ಗೊತ್ತಿರಲಿಲ್ಲ. ನಾನು ಕರ್ಟಸಿ ಮೇಲೆ ದರ್ಶನ್ ಭೇಟಿಯಾಗಲು ಜೈಲಿಗೆ ಹೋಗಿದ್ದೆ ಎಂದು ತನಿಖಾಧಿಕಾರಿಗಳ ಮುಂದೆ ನಟ ಚಿಕ್ಕಣ್ಣ ಹೇಳಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಇನ್ನೂ ವಿಚಾರಣೆ ವೇಳೆ ಚಿಕ್ಕಣ್ಣನಿಗೆ ಕ್ಲಾಸ್ ತೆಗೆದುಕೊಂಡಿರುವ ಪೊಲೀಸರು 164 ಅಡಿಯಲ್ಲಿ ಹೇಳಿಕೆ ನೀಡಿ ಮತ್ತೆ ನಿಮ್ಮ ಹೇಳಿಕೆ ಬದಲಾಯಿಸಿದ್ರೆ ನಿಮಗೆ ಸಮಸ್ಯೆಯಾಗುತ್ತೆ. ನ್ಯಾಯಾಧೀಶರ ಮುಂದೆ ನೀಡಿದ ಹೇಳಿಕೆ ಬದಲಾಯಿಸಿದ್ರೆ ನಿಮ್ಮದು ತಪ್ಪಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನೂ ಮುಂದುವರೆದು ಜೈಲಲ್ಲಿ ನೀವು ದರ್ಶನ್ ಭೇಟಿಯಾದಾಗ ಬೆದರಿಕೆ ಹಾಕೋದು ಅಥವಾ ಆಮಿಷ ಏನಾದ್ರೂ ಒಡ್ಡಿದ್ರಾ ಎಂದು ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಚಿಕ್ಕಣ್ಣ, ಇಲ್ಲಾ ಸರ್ ಅವರು ಕೇಸ್ ಬಗ್ಗೆ ಮಾತನಾಡಿಲ್ಲ. ಪೊಲೀಸರು ನನ್ನ ಹೇಳಿಕೆ ತೆಗೆದುಕೊಂಡಿರುವ ಬಗ್ಗೆ ದರ್ಶನ್ ಬಳಿ ಹೇಳಿದೆ. ಆಗಾ ದರ್ಶನ್ ಇರಲಿ ಬಿಡು ಎಂದರು ಎಂದು ಚಿಕ್ಕಣ್ಣ ಹೇಳಿದ್ದಾರೆ. ಇನ್ನೂ ಪೊಲೀಸರು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ನಟ ಚಿಕ್ಕಣ್ಣನಿಗೆ ವಾರ್ನಿಂಗ್ ಮಾಡಿ ಕಳುಹಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...