ವಿಮಾನ ನಿಲ್ದಾಣದಲ್ಲಿ ತಾಯಿ-ಸಹೋದರಿ ಜೊತೆ ಒಂಟಿಯಾಗಿ ಕಾಣಿಸಿಕೊಂಡ ಅಭಿಷೇಕ್‌! ಐಶ್ವರ್ಯ ಎಲ್ಲಿ? ಎಂದು ನೆಟ್ಟಿಗರ ಕಿರೀಕ್‌ ಬಚ್ಚನ್‌ ಕುಟುಂಬ ಈ ಮಧ್ಯೆ ಚರ್ಚೆಯ ಕೇಂದ್ರ ಬಿಂದುವಾಗಿದೆ. ಅಭಿಷೇಕ್‌ ಬಚ್ಚನ್‌ ಹಾಗೂ ಐಶ್ವರ್ಯ ರೈ ನಡುವಿನ ಭಿನ್ನಭಿಪ್ರಾಯದಿಂದ ಹಿಡಿದು, ಶ್ವೇತಾ ಬಚ್ಚನ್‌ ಹಾಗೂ ಜಯಾ ಬಚ್ಚನ್‌ ವೆರಗೇ ಬಚ್ಚನ್‌ ಕುಟುಂಬದ ಎಲ್ಲಾ ಸದಸ್ಯರು ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. :ಬಚ್ಚನ್‌ ಕುಟುಂಬ ಈ ಮಧ್ಯೆ ಚರ್ಚೆಯ ಕೇಂದ್ರ ಬಿಂದುವಾಗಿದೆ. ಅಭಿಷೇಕ್‌ ಬಚ್ಚನ್‌ ಹಾಗೂ ಐಶ್ವರ್ಯ ರೈ ನಡುವಿನ ಭಿನ್ನಭಿಪ್ರಾಯದಿಂದ ಹಿಡಿದು, ಶ್ವೇತಾ ಬಚ್ಚನ್‌ ಹಾಗೂ ಜಯಾ ಬಚ್ಚನ್‌ ವೆರಗೇ ಬಚ್ಚನ್‌ ಕುಟುಂಬದ ಎಲ್ಲಾ ಸದಸ್ಯರು ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. ಅಭಿಷೇಕ್‌ ಹಾಗೂ ಐಶ್ವರ್ಯ ವಿಚ್ಛೇದನ ವದಂತಿ ನಡುವೆ ದಂಪತಿ ಈ ನಡುವೆ ಪ್ರತ್ಯೇಕವಾಗಿ ಕಾಣಿಸಿಕೊಂಡು ಪದೇ ಪದೆ ಚರ್ಚೆಗೀಡಾಗುತ್ತಿದ್ದಾರೆ. ಇತ್ತೀಚೆಗಷ್ಟೆ ಐಶ್ವರ್ಯ ತಮ್ಮ ಮಗಳು ಆರಾಧ್ಯ ಅವರೊಟ್ಟಿಗೆ ಒಂಟಿಯಾಗಿ ನ್ಯೂಯಾರ್ಕ್‌ಗೆ ಹಾರಿದ್ದರು, ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ನಂತರ ಇವರ ವಿಚ್ಛೆದನ ಸುದ್ದಿ ಇದು ಮತ್ತಷ್ಟು ಪುಷ್ಠಿ ನೀಡುವಂತಿತ್ತು. ಇದೀಗ ಇದೇ ರೀತಿ ಅಭಿಷೇಕ್‌ ಬಚ್ಚನ್‌ ಕೂಡ ತಮ್ಮ ತಾಯಿ ಹಾಗೂ ಸಹೋದರಿಯೊಂದಿಗೆ ವಿಮಾನ ನಿಲ್ದಾಣದಲ್ಲಿ ಪತ್ನಿ ಇಲ್ಲದೆ ಒಂಟಿಯಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಇತ್ತೀಚೆಗೆ ಅಭಿಷೇಕ್‌ ಹಾಗೂ ಸಹೋದರಿ ಶ್ವೇತಾ ಬಚ್ಚನ್‌ ವಿಮಾನ್‌ ನಿಲ್ದಾಣದಲ್ಲಿ ಜೊತೆಯಾಗಿ ಕಾಣಿಸಿಕೊಂಡರು, ಇದನ್ನು ನೋಡಿದ ನೆಟ್ಟಿಗರು ಐಶ್ವರ್ಯ ಎಲ್ಲಿ ಎಂದು ಪ್ರಶ್ನೆ ಮಾಡಿದ್ದಾರೆ. ಈ ರೀತಿ ಜೋಡಿಯನ್ನು ಜೊತೆಯಾಗಿ ನೋಡಲಾಗದೆ ಅಭಿಮಾನಿಗಳು ದಿನೇ ದಿನೇ ಇವರಿಬ್ಬರು ಎಲ್ಲಿ ದೂರವಾಗಿ ಬಿಡುತ್ತಾರೂ ಎಂದು ಕಂಗಾಲಾಗುತ್ತಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಅಭಿಷೇಕ್ ಬಚ್ಚನ್, ಜಯಾ ಬಚ್ಚನ್ ಮತ್ತು ಶ್ವೇತಾ ನಂದಾ ಅವರ ವಿಡಿಯೋ ವೈರಲ್ ಆಗುತ್ತಿದೆ . ಜಯಾ ಬಚ್ಚನ್ ಬೂದು ಬಣ್ಣದ ಬಟ್ಟೆಯನ್ನು ಧರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದನ್ನೂ ಓದಿ: ಅಭಿಷೇಕ್ ಬಚ್ಚನ್ ಸಹೋದರಿ ಶ್ವೇತಾ ನಂದಾ ಕಪ್ಪು ಪ್ಯಾಂಟ್‌ನೊಂದಿಗೆ ತಿಳಿ ಬಣ್ಣದ ಜಾಕೆಟ್ ಧರಿಸಿದ್ದರು. ಜಯ ಮತ್ತು ಶ್ವೇತಾ ಇಬ್ಬರ ಕೈಯಲ್ಲೂ ಬ್ಯಾಗ್ ಇತ್ತು. ಆದರೆ ಅಭಿಷೇಕ್ ಬಚ್ಚನ್ ಕಪ್ಪು ಪ್ಯಾಂಟ್ ಮತ್ತು ಬೂದು ಬಣ್ಣದ ಸ್ವೆಟ್‌ಶರ್ಟ್ ಧರಿಸಿದ್ದರು. ಅಭಿಷೇಕ್ ಕುಟುಂಬದೊಂದಿಗಿನ ಈ ಚಿತ್ರಗಳು ವಿಚ್ಛೆದನದ ಕುರಿತು ಮತ್ತಷ್ಟು ಚರ್ಚೆ ಹೆಚ್ಚಾಗುವಂತೆ ಮಾಡಿದೆ. ವೀಡಿಯೊದಲ್ಲಿ, ಮೂವರೂ ತೀವ್ರ ಒತ್ತಡದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಅನೇಕ ವರದಿಗಳು ಬಂದವು. ಐಶ್ವರ್ಯಾ ಮತ್ತು ಅಭಿಷೇಕ್ ಬೇರೆಯಾಗುತ್ತಿದ್ದಾರೆ, ಅವರು ವಿಚ್ಛೇದನ ಪಡೆಯಲಿದ್ದಾರೆ ಎಂದು ಕೂಡ ಹೇಳಲಾಗಿದೆ. ಆದರೆ, ಈ ವರದಿಗಳು ಸುಳ್ಳು ಎಂದು ಅಭಿಷೇಕ್ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...