"ಪತ್ನಿಯ ಮುಂದೆ ಸೋಲನ್ನು ಒಪ್ಪಿಕೊಳ್ಳಬೇಕು" ಅಮಿತಾಭ್‌ ಬಚ್ಚನ್‌ ಹೇಳಿಕೆ ಹಿಂದಿನ ಕಾರಣ ಏನು? : ಶತಮಾನದ ಮೆಗಾಸ್ಟಾರ್, ಅಮಿತಾಭ್ ಬಚ್ಚನ್ ತಮ್ಮ ಕ್ವಿಜ್ ಶೋ 'ಕೌನ್ ಬನೇಗಾ ಕರೋಡ್ಪತಿ' ನಲ್ಲಿ ಸ್ಪರ್ಧಿಗಳೊಂದಿಗೆ ಮೋಜು ಮಾಡುವುದನ್ನು ಹೆಚ್ಚಾಗಿ ಕಾಣಬಹುದು. ಆದರೆ ಇತ್ತೀಚಿನ ಸಂಚಿಕೆಯಲ್ಲಿ ಬಿಗ್‌ ಬಿ ಸ್ಪರ್ಧಿಗಳಿಗೆ ಸಲಹೆ ನೀಡುತ್ತಿರುವುದು ಕಂಡುಬಂದಿದೆ. ಇದು ನೆಟ್ಟಿಗರು ಅಚ್ಚರಿ ಪಡುವಂತೆ ಮಾಡಿದೆ. :ಶತಮಾನದ ಮೆಗಾಸ್ಟಾರ್, ಅಮಿತಾಭ್ ಬಚ್ಚನ್ ತಮ್ಮ ಕ್ವಿಜ್ ಶೋ 'ಕೌನ್ ಬನೇಗಾ ಕರೋಡ್ಪತಿ' ನಲ್ಲಿ ಸ್ಪರ್ಧಿಗಳೊಂದಿಗೆ ಮೋಜು ಮಾಡುವುದನ್ನು ಹೆಚ್ಚಾಗಿ ಕಾಣಬಹುದು. ಆದರೆ ಇತ್ತೀಚಿನ ಸಂಚಿಕೆಯಲ್ಲಿ ಬಿಗ್‌ ಬಿ ಸ್ಪರ್ಧಿಗಳಿಗೆ ಸಲಹೆ ನೀಡುತ್ತಿರುವುದು ಕಂಡುಬಂದಿದೆ. ಇದು ನೆಟ್ಟಿಗರು ಅಚ್ಚರಿ ಪಡುವಂತೆ ಮಾಡಿದೆ. 'ಕೌನ್ ಬನೇಗಾ ಕರೋಡ್ಪತಿ' ಹಿಂದಿ ರಿಯಾಲಿಟಿ ಶೋಗಳ ಕಿಂಗ್‌ ಅಮತಲೇ ಹೇಳಬಹುದು, ಈ ಕಾರ್ಕ್ರಮವನ್ನು ಅಮಿತಾಭ್‌ ಬಚ್ಚನ್‌ ನಡಿಸಿ ಕೊಡುತ್ತಾರೆ. ಸ್ಪರ್ಧಿಗಳಿಗೆ ಪ್ರಶ್ನೆ ಕೇಳಿ ವಾರು ಗಳಿಸುವ ಹಣದ ಮೊತ್ತವನ್ನ ಬಹುಮಾನವಾಗಿ ನೀಡಲಾಗುತ್ತದೆ. ಕೌನ್ ಬನೇಗಾ ಕರೋಡ್ಪತಿಯ ಇತ್ತೀಚಿನ ಸಂಚಿಕೆಯಲ್ಲಿ, ಅಮಿತಾಬ್ ಬಚ್ಚನ್ ಅವರು ಯಾವಾಗಲೂ ತಮ್ಮ ಹೆಂಡತಿಯ ಮಾತನ್ನು ಕೇಳಬೇಕು ಎಂದು ಸ್ಪರ್ಧಿಗೆ ಸಲಹೆ ನೀಡಿದ್ದಾರೆ. ಸ್ಪರ್ಧಿಗೆ ಅಮಿತಾಭ್‌ ಈ ರೀತಿಯ ಸಲಹೆ ನೀಡುತ್ತದ್ದಂತೆ ಅಲ್ಲಿ ನೆದಿದ್ದ ಪ್ರೇಕ್ಷಕರು ನಗೆಗಡಲಿನಲ್ಲಿ ತೇಲಾಡಿದರು. ಅಷ್ಟಕ್ಕೂ ಬಿಗ್ ಬಿ ಈ ರೀತಿಯ ಹೇಳಿಕೆ ಕೊಡಲು ಕಾರನ ಏನು? ಇದಕ್ಕೆ ಕಾರಣ ಜಾಯಾ ಬಚ್ಚನ್‌ ಇರಬಹುದಾ? ಇದನ್ನೂ ಓದಿ: ಜಯಾ ಬಚ್ಚನ್‌ ಅಂಮಿತಾಬ್‌ ಕುಟುಂಬದ ಬಾಸ್‌ ಎಂದು ಅವರ ಮಕ್ಕಳು ಹಲವು ಸಂದರ್ಸನಗಳಲ್ಲಿ ಹೇಲಿಕೊಂಡಿದ್ದಾರೆ. ಇನ್ನೂ ಈ ಕುರಿತು ಅಮಿತಾಬ್‌ ಬಚ್ಚನ್‌ ಕೂಡ ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಆಗಾಗ ಹೇಲಿಕೊಳ್ಳುತ್ತಿರುತ್ತಾರೆ. ಇನ್ನೂ ಇದೇ ರೀತಿ, ಕೌನ್ ಬನೇಗಾ ಕರೋಡ್ಪತಿ 16 ರ ಇತ್ತೀಚಿನ ಸಂಚಿಕೆಯಲ್ಲಿ, ಬಿಗ್ ಬಿ ದಂಪತಿಗಳಿಗೊಂದು ಕಿವಿ ಮಾತನ್ನು ಹೇಲಿದ್ದಾರೆ. ಹೆಂಡತಿ ಹೇಳುವ ಮಾತನ್ನು ಗಂಡಂದಿರು ಪಾಲಿಸಿದರೆ ಸಂಸಾರ ಚೆನ್ನಾಗಿರುತ್ತದೆ ಎಂದಿದ್ದಾರೆ. ಇತ್ತೀಚೆಗಷ್ಟೇ ಕೆಬಿಸಿ 16ರಲ್ಲಿ ಹರ್ಷಿತ್ ಭೂತಾನಿಗೆ ಹಾಟ್ ಸೀಟ್ ನಲ್ಲಿ ಕುಳಿತುಕೊಳ್ಳುವ ಅವಕಾಶ ಸಿಕ್ಕಿತ್ತು. ಗಂಡ ಹೆಂಡತಿ ಇಬ್ಬರೂ ಒಬ್ಬರಿಗೊಬ್ಬರು ನಮಸ್ಕರಿಸಿದ ದೃಶ್ಯ ಕಂಡುಬಂತು. ಹರ್ಷಿತ್ ಈ ರೀತಿ ಮಾಡುವುದನ್ನು ನೋಡಿದ ಅಮಿತಾಬ್ ಬಚ್ಚನ್ ಇದೇನು ಎಂದು ಕೇಳಿದರು, ಅದಕ್ಕೆ ಪ್ರತಿಕ್ರಿಯಿಸಿದ ಅವರು ಸರ್, ನಾನು ಬಹಳ ದಿನಗಳಿಂದ ಹಾಟ್ ಸೀಟ್ ತಲುಪಲು ಪ್ರಯತ್ನಿಸುತ್ತಿದ್ದೇನೆ. ಈಗ ನನ್ನ ಈ ಕನಸು ನನಸಾಗಿದೆ, ನನ್ನ ಹಾಗೂ ನನ್ನ ಪತ್ನಿ ನಡುವೆ ಯಾರು ಮೊದಲು ಹಾಟ್‌ ಸೀಟ್‌ನಲ್ಲಿ ಕೂರುತ್ತಾರೆ ಎಂಬ ಪೈಪೋಟಿ ನಡೆದಿತ್ತು. ಅದಕ್ಕೆ ಹರ್ಷಿತ್‌ ಅವರ ಪತ್ನಿ ನೀವು ಅಲ್ಲಿ ಕೂರಲು ನಿಮಗೆ ತರಬೇತಿ ನೀಡಿದ್ದು ನಾನು ಎಂದಾಗ ಅದಕ್ಕೆ ಪ್ರತಿಕ್ರಿಯಿಸಿದ ಬಿಗ್‌ ಬಿ ಕೆಲವು ಭಾರಿ ನಾವು ನಮ್ಮ ಪತ್ನಿಯರ ಎದುರು ಸೋಲನ್ನೊಪ್ಪಿಕೊಳ್ಳಲೇಬೇಕು ಎಂದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...