ಮಧ್ಯರಾತ್ರಿ ಸಂಭೋಗಕ್ಕೆ ಬಾ ಎಂದಿದ್ದ ಆ ನಟ, ಇನ್ನೊಬ್ಬ ಹೀರೋ ಬ್ಯಾಕ್‌ ಮುಟ್ಟಿ, ತಬ್ಬಿ ಮುತ್ತಿಟ್ಟ : ಖ್ಯಾತ ನಟಿ ಆರೋಪ.. : ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಭಾರತೀಯ ಸಿನಿರಂಗದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಮಲಯಾಳಂ ಸಿನಿರಂಗದಲ್ಲಿ ನಟರ ಮೇಲೆ ಸಾಲು ಸಾಲು ಆರೋಪಗಳನ್ನು ನಟಿಯರು ಮಾಡುತ್ತಿದ್ದಾರೆ.. ಈ ಪೈಕಿ ಖ್ಯಾತ ನಟಿ ಮೀನು ಮುನೀರ್‌ ಅವರು ನಟರಾದ ಮುಖೇಶ್, ಮಣಿಯನಪಿಳ್ಳ ರಾಜು, ಇಡವೇಲ ಬಾಬು ಮತ್ತು ಜಯಸೂರ್ಯ ತಮ್ಮನ್ನು ದೈಹಿಕ ಮತ್ತು ಮೌಖಿಕ ನಿಂದನೆ ಮಾಡಿದ್ದಾರೆ ಗಂಭೀರ ಆರೋಪ ಮಾಡಿದ್ದಾರೆ. :ಹೇಮಾ ಸಮಿತಿಯ ವರದಿ ಬಿಡುಗಡೆಯಿಂದ ಮಾಲಿವುಡ್‌ನಲ್ಲಿ ಲೈಂಗಿಕ ದೌರ್ಜನ್ಯ ಆರೋಪಗಳು ಸಾಲು ಸಾಲಾಗಿ ಹೊರ ಬರುತ್ತಿವೆ. ಅಲ್ಲದೆ ಕೆಲವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಅಲ್ಲದೆ, ಮಲಯಾಳಂ ಚಲನಚಿತ್ರೋದ್ಯಮದಲ್ಲಿನ ಅವ್ಯವಹಾರಗಳ ತನಿಖೆಗೆ ಒತ್ತಾಯ ಕೇಳಿ ಬರುತ್ತಿದೆ.. ಇದರ ನಡುವೆ ನಟಿ ಮೀನು ಮುನೀರ್‌ ಫೇಸ್‌ಬುಕ್‌ ಪೋಸ್ಟ್‌ನಲ್ಲಿ, ನಟರಾದ ಮುಖೇಶ್, ಮಣಿಯನ್‌ಪಿಳ್ಳ ರಾಜು, ಇಡವೇಲ ಬಾಬು ಮತ್ತು ಜಯಸೂರ್ಯ ಅವರ ಫೋಟೋಗಳನ್ನು ಹಾಕಿ ಸೆಟ್‌ನಲ್ಲಿ ತಮ್ಮನ್ನು ದೈಹಿಕವಾಗಿ ಮತ್ತು ಮೌಖಿಕವಾಗಿ ನಿಂದಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.. ಇದನ್ನೂ ಓದಿ: ಮಲಯಾಳಂನ ಪ್ರಮುಖ ನಟನೊಬ್ಬ ಹೋಟೆಲ್‌ನಲ್ಲಿ ತನ್ನ ಮೇಲೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದ ಎಂದು ಮಿನು ಆರೋಪಿಸಿದ್ದಾರೆ. ಅಲ್ಲದೆ, ಅವರು, ತನ್ನ ಕೊಠಡಿಗೆ ಪ್ರವೇಶಿಸಿ ಉತ್ತಮ ಅವಕಾಶಗಳು ಬೇಕು ಅಂದ್ರೆ, ಅಂತ ಹೇಳಿ ನನ್ನನ್ನು ಹಾಸಿಗೆಯ ಮೇಲೆ ಎಳೆದರು. ಆಗ ನಾನು ಆ ಸ್ಥಳವನ್ನು ಬಿಟ್ಟು ಬಂದೇ ಎಂದರು.. ಅಲ್ಲದೆ... ಅದಕ್ಕೂ ಮೊದಲು, ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಮತ್ತೊಬ್ಬ ನಟ ರಾತ್ರಿ ನನ್ನ ಕೋಣೆಗೆ ಬರುವುದಾಗಿ ಹೇಳಿದರು. ಅವನು ಕೂಡ ರಾತ್ರಿಯಲ್ಲಿ ಬಂದು ನನ್ನ ಕೊಠಡಿಯ ಬಾಗಿಲು ತಟ್ಟಿದ್ದ ಎಂದು ಮುನೀರ್‌ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಇವರಲ್ಲದೆ ವಕೀಲ ಚಂದ್ರಶೇಖರನ್, ಪ್ರೊಡಕ್ಷನ್ ಕಂಟ್ರೋಲರ್‌ಗಳಾದ ನೋಬಲ್, ವಿಚು ಮುಂತಾದವರು ಕೂಡ ಲೈಂಗಿಕ ಕಿರುಕುಳ ನೀಡಿದ್ದರು ಅಂತ ನಟಿ ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದಾರೆ. ಇನ್ನು ಈ ಆರೋಪಗಳ ಕುರಿತು ಯಾವುದೇ ನಟರು ಪ್ರತಿಕ್ರಿಯೆ ನೀಡಿಲ್ಲ.. ಮುಂದಿನ ದಿನಗಳಲ್ಲಿ ಏನಾಗುತ್ತೆ ಅಂತ ಕಾಯ್ತು ನೋಡಬೇಕಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...