ದರ್ಶನ್ ಅಭಿಮಾನಿಗಳಿಗೆ ಮತ್ತೆ‌ ನಿರಾಸೆ: ಸೆಪ್ಟೆಂಬರ್ 9ರತನಕ ಕಿಲ್ಲಿಂಗ್ ಸ್ಟಾರ್ ಗೆ ಜೈಲೇ ಗತಿ : ರೇಣುಕಾಸ್ವಾಮಿ ಹತ್ಯ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ ಅಂಡ್ ಟೀಮ್ ಗೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿತ್ತು.. ಇಂದು ನ್ಯಾಯಾಂಗ ಬಂಧನ ಅಂತ್ಯವಾದ ಹಿನ್ನೆಲೆ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.. ಬೆಂಗಳೂರು: ಇಂದು ದರ್ಶನ್ ಅಂಡ್ ಟೀಮ್ ಗೆ ನ್ಯಾಯಾಂಗ ಬಂಧನ ಅಂತ್ಯವಾದ ಹಿನ್ನೆಲೆ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಕೋರ್ಟ್ ನಲ್ಲಿ ಪೊಲೀಸರು ಮತ್ತೆ ನ್ಯಾಯಂಗ ಮುಂದುವರಿಸಲು ಮನವಿ ಸಲ್ಲಿಸಿದರು. ಇನ್ನೂ ದರ್ಶನ್ ಗ್ಯಾಂಗ್ ನ್ಯಾಯಾಂಗ ಬಂಧನ ಮುಂದುವರಿಕೆ ಮುಂದುವರಿಸಲು ಪೊಲೀಸರು ನೀಡಿರುವ ಕಾರಣಗಳೇನೂ ಎಂದು ನೋಡೋದಾದ್ರೆ. 1. ಪ್ರಕರಣದಲ್ಲಿ ಆರೋಪಿಗಳ ಪಾತ್ರ ಎಲ್ಲಾ ರೀತಿಯಲ್ಲಿ‌ ಧೃಡವಾಗಿದೆ.2. ಕೇಸ್ ನಲ್ಲಿ ಇನ್ನೂ ಕೆಲ ಸಾಂದರ್ಭಿಕ ಸಾಕ್ಷಿಗಳ ಹೇಳಿಕೆ ಬಾಕಿ ಇದೆ.3.ಅಗತ್ಯ ಇದ್ದರೆ 164 ಅಡಿ ಹೇಳಿಕೆ ದಾಖಲಿಸಬೇಕಿದೆ.4. ಸದ್ಯ ಆರೋಪಿಗಳಿಗೆ ಜಾಮೀನು ನೀಡಿದ್ರೆ ಸಾಕ್ಷಿಗೆ ಬೆದರಿಕೆ ಸಾಧ್ಯತೆ.5. ವ್ಯವಸ್ಥಿತ ರೀತಿಯಲ್ಲಿ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.6.ಪ್ರಭಾವಿ ಆರೋಪಿ ಮೃತನ ಕುಟುಂಬಕ್ಕೆ ಬೆದರಿಕೆ ಆಮಿಷ ಸಾಧ್ಯತೆ.7. ವರದಿಯಲ್ಲಿ ಆರೋಪಿಗಳ ಪಾತ್ರ ಸಾಬೀತು.8. ಟೆಕ್ನಿಕಲ್ ಎವಿಡೆನ್ಸ್ ಬಗ್ಗೆ ಕೆಲ ವರದಿ ಬಾಕಿ‌ ಇದೆ.9. ಇನ್ನೂ ಕೆಲ ವಸ್ತುಗಳ ಗೆ ಕಳುಹಿಸಿ ವರದಿ ಪಡೆಯಬೇಕು.10. ಈ ವೇಳೆ ಆರೋಪಿಗಳಿಗೆ ಜಾಮೀನು ನೀಡದಂತೆ ಮನವಿ ಇನ್ನೂ ಇಂದು ಇದೇ ಪ್ರಕರಣ ಆರೋಪಿಗಳಾದ ನಾಗರಾಜ್ ಮತ್ತು ಲಕ್ಷ್ಮಣ್ ಬೇರೆ ಜೈಲಿಗೆ ಶಿಫ್ಟ್ ಮಾಡದಂತೆ ಜಡ್ಜ್ ಮುಂದೆ ಮನವಿ ಮಾಡಿದ್ರು. ಈ ವೇಳೆ ಜಡ್ಜ್ ನೋಡೋಣ ಬಿಡಿ ಎಂದು ಉತ್ತರ ನೀಡಿ ಮನವಿ ತಳ್ಳಿ ಹಾಕಿದ್ದಾರೆ. ಜೈಲು ಅಧಿಕಾರಿಗಳು ಕಾನೂನು ಪ್ರಕಾರ ನಡೆದುಕೊಳ್ಳುತ್ತಾರೆ. ಅವರಿಗೆ ಕುಟುಂಬದವರ ಭೇಟಿ ಅವಕಾಶ ನೀಡಿ ಎಂದು ಜೈಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...