: ಒಂದು ನಿಮಿಷಕ್ಕೆ 4.5 ಕೋಟಿ ಈ ನಟನ ಸಂಭಾವನೆ .. ಸಲ್ಮಾನ್, ಶಾರುಖ್, ರಜನಿ ಅಲ್ಲವೇ ಅಲ್ಲ! : ಈ ನಟ ಸಿನಿಮಾಮೊಂದರಲ್ಲಿ ನಟಿಸಲು ಒಂದು ನಿಮಿಷಕ್ಕೆ 4.5 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. :ಸಿನಿರಂಗದಲ್ಲಿ ಕೋಟಿ ಕೋಟಿ ಸಂಭಾವನೆ ಪಡೆಯುವುದು ಇತ್ತೀಚೆಗೆ ಟ್ರೆಂಡ್‌ ಆಗಿದೆ. ಬಹುತೇಕ ಎಲ್ಲ ಸ್ಟಾರ್‌ ನಟ - ನಟಿಯರ ಸಂಭಾವನೆ ಕೋಟಿ ಕೋಟಿಯಲ್ಲೇ ಇದೆ. ಬಾಲಿವುಡ್‌ನ ಈ ನಟ ಸಂಭಾವನೆ ವಿಚಾರದಲ್ಲಿ ಸಲ್ಮಾನ್​, ಶಾರುಖ್​, ರಜನಿಕಾಂತ್‌ ಎಲ್ಲರನ್ನೂ ಮೀರಿಸಿದ್ದಾರೆ. ಒಂದು ಸಿನಿಮಾಗೆ ಅಲ್ಲ ಒಂದು ನಿಮಿಷದ ನಟನೆಗೆ ಕೋಟಿ ಕೋಟಿ ಸಂಭಾವನೆ ಪಡೆದಿದ್ದಾರೆ. ಕೆಲವು ನಟರು ಈಗ ನಿಮಿಷಕ್ಕೆ ಕೋಟಿಗಟ್ಟಲೇ ಸಂಭಾವನೆ ಪಡೆಯುತ್ತಿದ್ದಾರೆ. ಈ ಸೂಪರ್‌ ಸ್ಟಾರ್‌ ಪ್ರತಿ ನಿಮಿಷಕ್ಕೆ 4.50 ಕೋಟಿ ರೂಪಾಯಿ ಸಂಭಾವನೆ ಪಡೆದು ರೆಕಾರ್ಡ್‌ ಕ್ರಿಯೇಟ್‌ ಮಾಡಿದ್ದಾರೆ. ಅಮೀರ್ ಖಾನ್, ಶಾರುಖ್ ಖಾನ್, ಪ್ರಭಾಸ್, ರಜನಿಕಾಂತ್, ಸಲ್ಮಾನ್ ಖಾನ್ ಮತ್ತು ದಳಪತಿ ವಿಜಯ್ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿದ್ದಾರೆ. ಈ ಎಲ್ಲಾ ನಟರು ಪ್ರತಿ ಚಿತ್ರಕ್ಕೆ ರೂ 100 ಕೋಟಿಗಿಂತ ಹೆಚ್ಚು ಸಂಭಾವನೆ ತೆಗೆದುಕೊಳ್ಳುತ್ತಾರೆ. ಇದನ್ನೂ ಓದಿ: ರಾಜಮೌಳಿ ನಿರ್ದೇಶನದ ನಲ್ಲಿ ನಟಿಸಿದ ಈ ಬಾಲಿವುಡ್‌ ನಟ ಪಡೆದಿದ್ದು ಬರೋಬ್ಬರಿ 35 ಕೋಟಿ ರೂಪಾಯಿ ಸಂಭಾವನೆ. ಚಿತ್ರದಲ್ಲಿ ಕೇವಲ ಎಂಟು ನಿಮಿಷಗಳ ಪಾತ್ರದಲ್ಲಿ ಈ ನಟ ಕಾಣಿಸಿಕೊಂಡಿದ್ದಾರೆ. 8 ನಿಮಿಷದ ನಟನೆಗೆ 35 ಕೋಟಿ ಸಂಭಾವನೆ ಪಡೆದಿದ್ದಾರೆ. ಇದನ್ನು ಲೆಕ್ಕ ಹಾಕಿದರೆ ಪ್ರತಿ ನಿಮಿಷಕ್ಕೆ 4.5 ಕೋಟಿ ರೂ. ಆಗುತ್ತದೆ. ಇಷ್ಟು ಮೊತ್ತದ ಸಂಭಾವನೆ ಪಡೆದ ನಟ ಬೇರಾರೂ ಅಲ್ಲ.. ಬಾಲಿವುಡ್‌ನ ಸ್ಟಾರ್‌ ಹೀರೋ ಅಜಯ್ ದೇವಗನ್. ಸಿನಿಮಾದಲ್ಲಿ ಶ್ರಿಯಾ ಶರಣ್ ಜೊತೆಗೆ‌ ಅಜಯ್ ದೇವಗನ್‌ ಒಂದು ಫ್ಲ್ಯಾಷ್‌ಬ್ಯಾಕ್ ದೃಶ್ಯದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಅವರು ಪ್ರತಿ ನಿಮಿಷಕ್ಕೆ 4.5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...