ಕಳೆದ 3 ವರ್ಷಗಳಿಂದ ನಾನು ಯಾರೊಂದಿಗೂ * ಮಾಡಿಲ್ಲ: ಕಾರಣ ಬಿಚ್ಚಿಟ್ಟ ಹಾಟ್‌ ಬ್ಯೂಟಿ ಉರ್ಫಿ ಜಾವೇದ್ : ಇತ್ತೀಚೆಗೆ ಬಿಡುಗಡೆಯಾದ 'ಫಾಲೋ ಕರ್ ಲೋ ಯಾರ್' ಸಿರೀಸ್‌ʼನಿಂದಾಗಿ ಉರ್ಫಿ ಸುದ್ದಿಯಲ್ಲಿದ್ದಾರೆ. ಅದರಲ್ಲಿ ಉರ್ಫಿ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. : ಫ್ಯಾಷನ್ ದಿವಾ ಉರ್ಫಿ ಜಾವೇದ್ ತನ್ನ ಚಿತ್ರ ವಿಚಿತ್ರ ಸ್ಟೈಲ್‌ʼಗೆ ಸಖತ್‌ ಸುದ್ದಿಯಲ್ಲಿರುತ್ತಾರೆ. ಆದರೆ ಇದೀಗ ಟ್ರೆಂಡ್‌ ಆಗಿರುವುದು ಆಕೆ ನೀಡಿರುವ ಒಂದು ಹೇಳಿಕೆಯಿಂದ. ಅಷ್ಟಕ್ಕೂ ಆ ಹೇಳಿಕೆ ಏನು? ಎಂಬುದನ್ನು ಮುಂದೆ ತಿಳಿಯೋಣ. ಇದನ್ನೂ ಓದಿ: ಇತ್ತೀಚೆಗೆ ಬಿಡುಗಡೆಯಾದ 'ಫಾಲೋ ಕರ್ ಲೋ ಯಾರ್' ಸಿರೀಸ್‌ʼನಿಂದಾಗಿ ಉರ್ಫಿ ಸುದ್ದಿಯಲ್ಲಿದ್ದಾರೆ. ಅದರಲ್ಲಿ ಉರ್ಫಿ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಉರ್ಫಿ ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾರೆ. ಅದೇ ಸಮಯದಲ್ಲಿ, ಉರ್ಫಿಯ ಸ್ನೇಹಿತ "ನೀನು ಹೊಸ ಜನರನ್ನು ಭೇಟಿಯಾಗುತ್ತೀಯಾ, ಅವರ ಜೊತೆ ಟ್ರಾವೆಲ್‌ ಮಾಡುತ್ತೀ. ಆದ್ರೆ ಅವರ ಜೊತೆ ಏನೂ ಮಾಡಿಲ್ಲವೇ?" ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉರ್ಫಿ ನಾನು ಮೂರು ವರ್ಷಗಳಿಂದ * ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ. "ಕಳೆದ ಮೂರು ವರ್ಷಗಳಿಂದ ನಾನು ಯಾವುದೇ ವ್ಯಕ್ತಿಗೆ ಕಿಸ್‌ ಮಾಡಿಲ್ಲ. ಯಾರೊಂದಿಗೂ ರೊಮ್ಯಾಂಟಿಕ್‌ ಆಗಿ ಮಾತನಾಡಿಲ್ಲ" ಎಂದು ಉರ್ಫಿ ಹೇಳಿದ್ದಾರೆ. ಉರ್ಫಿಯ ಈ ಉತ್ತರವನ್ನು ಕೇಳಿದ ಆಕೆಯ ಸ್ನೇಹಿತರು ಆಶ್ಚರ್ಯಕರ ಪ್ರತಿಕ್ರಿಯೆ ನೀಡಿದ್ದಾರೆ. ಇದಾದ ನಂತರ ಸ್ವತಃ ಉರ್ಫಿಯೇ ನಾನೇಕೆ * ಮಾಡುತ್ತಿಲ್ಲ ಎಂಬುದಕ್ಕೂ ಉತ್ತರ ನೀಡಿದ್ದಾರೆ. ಇದನ್ನೂ ಓದಿ: "ಖಾಸಗಿ ಜೆಟ್ ಹೊಂದುವವರೆಗೆ ಯಾರೊಂದಿಗೂ ಲೈಂಗಿಕ ಸಂಬಂಧ ಹೊಂದುವುದಿಲ್ಲ ಎಂದು ನಾನು ಮೂರು ವರ್ಷಗಳ ಹಿಂದೆ ಪ್ರಮಾಣ ಮಾಡಿದ್ದೆ. ನನ್ನ ಜೀವನದಲ್ಲಿ ಏನಿದೆಯೋ ಅದೆಲ್ಲಾ ನಾನೇ ಸ್ವತಃ ಮಾಡಿರುವುದು, ಬಹಳ ಸ್ವಾತಂತ್ರ್ಯದಿಂದ ಮಾಡಿದ್ದೇನೆ. ಅದಕ್ಕಾಗಿಯೇ ನಾನು ನನ್ನ ಸಂಗಾತಿಯ ಮುಂದೆ ದುರ್ಬಲವಾಗಿರಲು ಬಯಸುವುದಿಲ್ಲ" ಎಂದಿದ್ದಾರೆ. ಉರ್ಫಿಯ ಈ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...