ʻನನ್ನನ್ನು ಹಿಂದಿನಿಂದ ತಬ್ಬಿಕೊಂಡು...ʼ ಸ್ಟಾರ್‌ ನಟನ ವಿರುದ್ಧ ನಟಿ ಗಂಭೀರ ಆರೋಪ ! : ಮಲಯಾಳಂ ಚಿತ್ರರಂಗದಲ್ಲಿ ಅವಕಾಶ ನೀಡಲು ನಟಿಯರನ್ನು ಲೈಂಗಿಕವಾಗಿ ಶೋಷಿಸಲಾಗುತ್ತಿದೆ ಎಂಬ ಬಹುದೊಡ್ಡ ಆರೋಪ ಕೇಳಿಬಂದಿದೆ. :ಚಿತ್ರರಂಗದಲ್ಲಿ ನಟಿಯರು ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಹೇಮಾ ಸಮಿತಿಯ ಇತ್ತೀಚಿನ ವರದಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ವಿಶೇಷವಾಗಿ ಸಿನಿ ಉದ್ಯಮದಲ್ಲಿ ನಡೆಯುತ್ತಿವೆ ಎಂದು ತಿಳಿದಿದೆ. ಹೇಮಾ ಸಮಿತಿ ನೀಡಿರುವ ವರದಿ ಇದೀಗ ಮಲಯಾಳಿ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಮಲಯಾಳಂ ಚಿತ್ರರಂಗದಲ್ಲಿ ಅವಕಾಶ ನೀಡಲು ನಟಿಯರನ್ನು ಲೈಂಗಿಕವಾಗಿ ಶೋಷಿಸಲಾಗುತ್ತಿದೆ ಎಂಬ ಬಹುದೊಡ್ಡ ಆರೋಪ ಕೇಳಿಬಂದಿದೆ. ಇದೀಗ ಇನ್ನೂ ಐವರು ನಟರ ಮೇಲೆ ನಟಿ ಮೀನು ಮುನೀರ್‌ ಹಾಗೂ ಮತ್ತೊಬ್ಬ ನಟಿ ಗಂಭೀರ ಆರೋಪ ಮಾಡಿದ್ದಾರೆ. ಇತ್ತೀಚೆಗೆ ನಟಿ ಮೀನು ಮುನೀರ್ ಕೂಡ ಸಿದ್ದಿಕಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಇದೀಗ ಇನ್ನೂ ಐವರ ವಿರುದ್ಧ ಆರೋಪಿಸಿದ್ದಾರೆ. 2013 ರಲ್ಲಿ ಸಿನಿಮಾವೊಂದರ ಸೆಟ್‌ನಲ್ಲಿ ಹಾಲಿ ಸಿಪಿಎಂ ಶಾಸಕ ಕಂ ನಟ ಮುಕೇಶ್‌ (ನಟಿ ಸರಿತಾ ಮಾಜಿ ಗಂಡ), ಜಯಸೂರ್ಯ, ಮಣಿಯನ್‌ಪಿಲ್ಲಾ ರಾಜು ಮತ್ತು ಇಡವೇಲು ಬಾಬು ತನಗೆ ದೈಹಿಕವಾಗಿ ಮತ್ತು ಮಾತಿನ ಮೂಲಕ ಕಿರುಕುಳ ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮನು ಮುನೀರ್ ಫೇಸ್ ಬುಕ್ ನಲ್ಲಿ ದೊಡ್ಡ ಪೋಸ್ಟ್ ಬರೆದಿದ್ದಾರೆ. ಈ ಪೋಸ್ಟ್‌ನಲ್ಲಿ “2013 ರಲ್ಲಿ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುವಾಗ, ಈ ಜನರು [ಹಾಲಿ ಸಿಪಿಎಂ ಶಾಸಕ ಕಂ ನಟ ಮುಖೇಶ್‌ (ನಟಿ ಸರಿತಾ ಮಾಜಿ ಗಂಡ), ಜಯಸೂರ್ಯ, ಮಣಿಯನ್‌ಪಿಲ್ಲಾ ರಾಜು ಮತ್ತು ಇಡವೇಲು ಬಾಬು] ನನಗೆ ದೈಹಿಕವಾಗಿ ಕಿರುಕುಳ ನೀಡಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಾನು ಅವರೊಂದಿಗೆ ಸಹಕರಿಸಿ ಕೆಲಸ ಮುಂದುವರಿಸಲು ಪ್ರಯತ್ನಿಸಿದೆ, ಆದರೆ ಅವರ ಕಿರುಕುಳ ಸಹಿಸಲಾಗಲಿಲ್ಲ. ನಾನು ಈಗ ಅಂದು ಆದ ನೋವುಗಳಿಗೆ ನ್ಯಾಯವನ್ನು ಹುಡುಕುತ್ತಿದ್ದೇನೆ. ಈ ಹೇಯ ಕೃತ್ಯಗಳ ವಿರುದ್ಧ ಕ್ರಮ ಕೈಗೊಳ್ಳಲು ನಿಮ್ಮ ಸಹಾಯವನ್ನು ಕೋರುತ್ತೇನೆ. ಅವರ ಕಿರುಕುಳದಿಂದಾಗಿ ನಾನು ಮಲಯಾಳಂ ಚಿತ್ರರಂಗವನ್ನು ತೊರೆದು ಚೆನ್ನೈಗೆ ತೆರಳಬೇಕಾಯಿತು. 'ಕೇರಳ ಕೌಮುದಿ'ಯಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಈ ಶೋಷಣೆಯ ವಿರುದ್ಧ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ" ಎಂದು ಬರೆದಿದ್ದಾರೆ. ಅಲ್ಲದೆ ಆಂಗ್ಲ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮೆನು ಮುನೀರ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. “ಚಿತ್ರದ ಶೂಟಿಂಗ್ ಸಮಯದಲ್ಲಿ ನಾನು ವಿಶ್ರಾಂತಿ ಕೊಠಡಿಗೆ ಹೋಗಿದ್ದೆ. ಆ ಕೋಣೆಯಿಂದ ಹೊರಬಂದ ನಂತರ ನಟ ಜಯಸೂರ್ಯ ನನ್ನ ಅನುಮತಿಯಿಲ್ಲದೆ ನನ್ನನ್ನು ಹಿಂದಿನಿಂದ ತಬ್ಬಿಕೊಂಡು ಮುತ್ತಿಟ್ಟರು. ನಾನು ಶಾಕ್‌ನಿಂದ ಓಡಿಹೋದೆ” ಎಂದು ಅವರು ಹೇಳಿದ್ದಾರೆ. ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯು ಮಲಯಾಳಂ ಚಿತ್ರರಂಗದಲ್ಲಿ ಅತಿರೇಕದ ಲೈಂಗಿಕ ಕಿರುಕುಳವನ್ನು ಬಹಿರಂಗಪಡಿಸಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...