ನಟ ದರ್ಶನ್‌ ಮತ್ತೊಂದು ಫೋಟೋ ವೈರಲ್‌! ದಾಸನ ಪಕ್ಕ ಕುಳಿತ ವ್ಯಕ್ತಿಯ ಕ್ರೈಂ ಹಿಸ್ಟರಿ ಭಯಾನಕ!! : ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಸೇರಿರುವ ನಟ ದರ್ಶನ್ ಬಿಂದಾಸ್ ಜೀವನ ನಡೆಸುತ್ತಿರುವುದಕ್ಕೆ ಸಾಕ್ಷಿ ಲಭ್ಯವಾಗಿವೆ. ನಿನ್ನೆ ಒಂದು ಫೋಟೋ ಹಾಗೂ ವಿಡಿಯೋ ವೈರಲ್ ಆಗಿದ್ದವು.. ಇವತ್ತು ಮತ್ತೊಂದು ಫೋಟೋ ವೈರಲ್ ಆಗಿದ್ದು, ಜೈಲಲ್ಲಿ ಎಲ್ಲವೂ ಸರಿ ಇಲ್ಲಾ ಅನ್ನೊದು ಗೊತ್ತಾಗಿದೆ. ಮತ್ತೊಂದು ಕಡೆ ಫೋಟೋ ವಿಡಿಯೋದಲ್ಲಿ ದರ್ಶನ್ ಇದ್ದವರ ಕ್ರೈಂ ಹಿಸ್ಟರಿ ಭಯಾನಕವಾಗಿದ್ದು, ಅದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ A2 ಆರೋಪಿಯಾಗಿ ಅಂದರ್ ಆಗಿ ಜೈಲು‌ ಸೇರಿರುವ ನಟ‌ ದರ್ಶನ್ ಫುಲ್ ಬಿಂದಾಸ್ ಆಗಿ ಇದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ ನಿನ್ನೆ ಎರಡು ಸಾಕ್ಷಿಗಳು ಲಭ್ಯವಾಗಿದ್ದವು.‌ಆದರೆ ಇವತ್ತು ಸಹ ದರ್ಶನ್ ಜೈಲಲ್ಲಿರುವ ಮತ್ತೊಂದು ಫೋಟೋ ಲಭ್ಯವಾಗಿದೆ. ದಾಸ ಬೆಡ್ ಮೇಲೆ ವಿಗ್ ಇಲ್ಲದೇ ಕುಳಿತಿರುವ ಫೋಟೋದಲ್ಲಿ ದರ್ಶನ್ ಜೊತೆ ಮತ್ತೊಬ್ಬ ವ್ಯಕ್ತಿ‌ ಕುಳಿತುಕೊಂಡಿದ್ದಾನೆ. ಆ ವ್ಯಕ್ತಿ ದರ್ಶನ್ ಗೆ ಮೊಬೈಲ್ ನಲ್ಲಿ ಏನೋ ತೋರಿಸುತ್ತಿದ್ದಾನೆ. ಹಾಗಾದ್ರೆ ಸೆಂಟ್ರಲ್ ಜೈಲಲ್ಲಿ ಮೊಬೈಲ್ ಬಳಕೆಗೆ ಅವಕಾಶ ಕೊಟ್ಟವರ್ಯಾರು. ಜೈಲಲ್ಲಿ ಹಣವಂತರು, ಪ್ರಭಾವಿಗಳಿಗೆ ಎಲ್ಲಾ ಫೆಸಿಲಿಟಿ ಕೊಡ್ತಾರ.? ಮನಪರಿವರ್ತನೆಗೆ ಅಂತಾ ಜೈಲಿಗೆ ಹೋಗುವ ಆರೋಪಿಗಳು ಐಷಾರಾಮಿ ಜೀವನ ನಡೆಸಿದರೆ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಹೌದು ನಟ ದರ್ಶನ್ ಜೊತೆ ಫೋಟೋದಲ್ಲಿರುವ ವಿಲ್ಸನ್‌ ಗಾರ್ಡನ್ ನಾಗ ಹಾಗೂ ಈ ಕುಳ್ಳ ಸೀನನ ಕ್ರೈಂ ಹಿಸ್ಟರಿ ನೋಡಿದ್ರೆ ಒಂದು ಕ್ಷಣ ಶಾಕ್ ಆಗುತ್ತೆ. ಏಕೆಂದ್ರೆ 2004 ರಿಂದಲೂ ನಾಗನ ಮೇಲೆ ಅನೇಕ ಪ್ರಕರಣಗಳಿವೆ. ಕೊಲೆ, ಕೊಲೆ ಯತ್ನ, ರಾಬರಿ ಪ್ರಕರಣಗಳು ಸೇರಿ ಒಟ್ಟು 23 ಕೇಸ್ ಗಳು ನಾಗನ ಮೇಲಿವೆ. ಇದರಲ್ಲಿ 10 ಕೊಲೆ ಪ್ರಕರಣದಲ್ಲಿ ವಿಲ್ಸನ್ ಗಾರ್ಡನ್ ನಾಗ A1 ಆರೋಪಿಪಿಯಾಗಿದ್ದಾನೆ. ಕಳೆದ ವರ್ಷ ತಮ್ಮ ಸಹಚರರ ಮೂಲಕ ಆಗತಾನೇ ಜೈಲಿಂದ ಹೊರಬಂದ ಸಿದ್ದಾಪುರ ಮಹೇಶನನ್ನು ನಾಗ ಫಿನೀಶ್ ಮಾಡಿಸಿದ್ದ. ಈಗ ಮಹೇಶನ ಕೊಲೆ‌ ಕೇಸಲ್ಲಿ ವಿಲ್ಸನ್ ಗಾರ್ಡನ್ ನಾಗ ಜೈಲಿನಲ್ಲಿದ್ದಾನೆ. ಇನ್ನೂ ದರ್ಶನ್ ಜೊತೆ ಜೈಲಿನಲ್ಲಿರುವ ಮತ್ತೊಬ್ಬ ರೌಡಿ ಶೀಟರ್ ಕುಳ್ಳ ಸೀನಾ ಸಜಾ ಕೈದಿ. ವಿಡಿಯೋ ಕಾಲ್ ನಲ್ಲಿ ಮಾತನಾಡೊಸಿದ ಧರ್ಮ ಕೂಡ ಸಜಾ ಕೈದಿಯಾಗಿದ್ದಾನೆ. ದರ್ಶನ್ ಗೆ ಜೈಲಲ್ಲಿ ಸಜಾ ಕೈದಿಗಳು ಸಾಕಷ್ಟು ಹತ್ತಿರವಾಗಿದ್ದಾರೆ. ಇದೇ ಕಾರಣಕ್ಕೆ ದರ್ಶನ್ ಗೆ ಬೆಡ್ಡು ಫುಡ್ಡು, ಸಿಗರೇಟ್ ಎಲ್ಲಾ ಸಪ್ಲೈ ಆಗುತ್ತಿದೆ. ಇದನ್ನೂ ಓದಿ- ಜೈಲಿನಲ್ಲಿ ಕುಳ್ಳ ಸೀನಾ ಆತನ ಹವಾ ಹೇಗಿದೆ ಅಂತ ನೋಡೋದಾದ್ರೆ ಶಾಕ್ ಆಗೋದು ಪಕ್ಕಾ. ವಿಲ್ಸನ್ ಗಾರ್ಡನ್ ನಾಗ ಕ್ರೈಂ ಲೋಕದ ಪ್ರಾರಂಭದ ದಿನಗಳಲ್ಲಿ ನಾಗನಿಗೆ ಗುರುವಾಗಿದ್ನಂತೆ ಈ ಸೀನಾ. ಜೈಲಿನಲ್ಲೇ ಸೀನನ ಬರ್ತಡೇಗೆ ಜೈಲು ಅಧಿಕಾರಿಗಳು ಗನ್ ಕೇಕ್ ಮಾಡಿಸಿಕೊಟ್ಟಿದ್ದಾರೆ. ಈ ಗನ್ ಕೇಕ್ ಕಟ್ ಮಾಡಿ ಸೀನಾ ವಿಲ್ಸನ್ ಗಾರ್ಡನ್ ನಾಗನ ಫೋಟೋಗೆ ಫೋಸ್ ನೀಡಿದ್ದಾನೆ. 2006 ರಲ್ಲಿ ಕೊಲೆ ಪ್ರಕರಣದಲ್ಲಿ ಶ್ರೀನಿವಾಸ್ ಗೆ ಸಜೆ ಕೂಡ ಆಗಿದೆ. ಸಜೆ ಆಗಿರೋ ಖೈದಿಗಳಿಗಳು ಸಾಧಾರಣವಾಗಿ ಬಿಳಿ ಬಟ್ಟೆ ಹಾಕಬೇಕು. ಆದ್ರೆ ಶ್ರೀನಿವಾಸ್ ಮತ್ತು ಧರ್ಮ ಸಜೆ ಆದ್ರೂ ಬಿಳಿ ಬಟ್ಟೆ ಧರಿಸೋದಿಲ್ಲ. ಅದರಲ್ಲೂ ಈ ಇಬ್ಬರು ಜೈಲಾಧಿಕಾರಿಗಲಿಗೆ ಶ್ರೀನಿವಾಸ್ ಕ್ಯಾರೆ ಅಂತಾನು ಅನ್ನಲ್ವಂತೆ. ಇದನ್ನೂ ಓದಿ- ಇನ್ನೂ A2 ಕೊಲೆ ಆರೋಪಿ ದರ್ಶನ್ ಜೊತೆಗೆ ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದ ಕೊಲೆಯತ್ನದ ಕೇಸ್ ನ ಆರೋಪಿಯಾಗಿದ್ದ ಸತ್ಯಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮಾಜಿ ರೌಡಿಶೀಟರ್ ಜಾನಿ ಅಲಿಯಾಸ್ ಜನರ್ಧಾನ್ ಮನೆ ಬಳಿ ಬ್ಯಾಡರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಸತ್ಯ ಮನೆಯಲ್ಲಿ ಇಲ್ಲ ಎಂದು ಹೇಳಲಾಗ್ತಿದೆ. ಸತ್ಯನನ್ನ ಹುಡುಕಿ ಆತನ ವಿಚಾರಣೆ ನಡೆಸಿ ಯಾವಗಾ ವಿಡಿಯೋ ಕಾಲ್ ಮಾಡಿದ್ದ. ಯಾವ ಉದ್ದೇಶಕ್ಕೆ ಮಾಡಿದ್ದ ಎಂದು ವಿಚಾರಣೆ ನಡೆಸಲಿದ್ದಾರೆ. ಮತ್ತೊಂದು ಅಪ್ಡೇಟ್ ಅಂದ್ರೆ ದರ್ಶನ್ ಜೊತೆ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನಾನ ಜೊತೆ ತೆಗೆದಿದ್ದು ಮತ್ತೊರ್ವ ರೌಡಿಶೀಟರ್ ವೇಲು ಎಂಬ ಮಾಹಿತಿ ಲಭ್ಯವಾಗಿದೆ. ಈ ವೇಲು ಪೋಟೋ ತೆಗೆದು ಮೈಸೂರು ಸೇರಿದಂತೆ ಬೇರೆ ಬೇರೆ ಕಡೆ ಶೇರ್ ಮಾಡಿದ್ದ. ಮಾಧ್ಯಮಗಳಲ್ಲಿ ಸುದ್ದಿ ಬಿತ್ತರ ಬೆನ್ನಲ್ಲೆ ಜೈಲಿನಲ್ಲಿ ವೇಲು ಮೇಲೆ ವಿಲ್ಸನ್ ಗಾರ್ಡನ್ ನಾಗ ಮತ್ತು ಕುಳ್ಳ ಸೀನಾ ಕೆಂಡ ಕಾರಿದ್ದಾರೆ. ಫೋಟೋ ತೆಗೆದು ವೈರಲ್ ಮಾಡಿದ ರೌಡಿಶೀಟರ್ ವೇಲು ಮೇಲೆ ಕೆಲ ರೌಡಿಶೀಟರ್ ಗಳು ಹಲ್ಲೆ ನಡೆಸಿದ್ದಾರಂತೆ. ಒಟ್ಟಾರೆಯಾಗಿ ಹಣವಂತರು, ಪ್ರಭಾವವಿಗಳಿಗೆ ಪರಪ್ಪನ ಅಗ್ರಹಾರ ಸೆರೆಮನೆಯಲ್ಲ ಅರಮನೆ ಅನ್ನೊಂದಂತು ಸುಳ್ಳಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...