ʼರಣಬೀರ್ ಕಪೂರ್ ನನ್ನ ಮನೆಗೆ ಬಂದು.. ನನ್ನೊಂದಿಗೆ..! ಆಘಾತಕಾರಿ ವಿಚಾರ ಬಹಿರಂಗಪಡಿಸಿದ ಕಂಗನಾ : ʼಎಮರ್ಜೆನ್ಸಿʼ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟಿ ಕಂಗನಾ ರಣಾವತ್ ರಣಬೀರ್ ಕಪೂರ್‌ ಕುರಿತು ನೀಡಿರುವ ಹೇಳಿಕಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. ಬಿಟೌನ್‌ ಕ್ವೀನ್‌ ಮನೆಗೆ ಬಂದು ರಣಬೀರ್‌... ಹೆಚ್ಚಿನ ಮಾಹಿತಿ ಇಲ್ಲಿದೆ.. :ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಪ್ರಸ್ತುತ ʼಎಮರ್ಜೆನ್ಸಿʼ ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದೇ ವೇಳೆ ನಟ ರಣಬೀರ್‌ ಕಪೂರ್‌ಗೆ ಸಂಬಂಧಿಸಿದ ವಿಷಯವೊಂದರನ್ನು ನಟಿ ಬಹಿರಂಗ ಪಡಿಸಿದ್ದಾರೆ. ʼಸಂಜುʼ ಚಿತ್ರದಲ್ಲಿ ನನ್ನ ಜೊತೆ ನಟಿಸಬೇಕು ಅಂತ ರಣಬೀರ್ ಕಪೂರ್ ಬಯಸಿದ್ದರು ಎಂದು ಕಂಗನಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಆದರೆ ಸಂಜು ಚಿತ್ರದ ಆಫರ್ ಅನ್ನು ತಿರಸ್ಕರಿಸಿದರಂತೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಸಂಜು ಚಿತ್ರ 2018 ರ ರಿಲೀಸ್‌ ಆಯ್ತು. ಈ ಸಿನಿಮಾದಲ್ಲಿ ಅನುಷ್ಕಾ ಶರ್ಮಾ, ದಿಯಾ ಮಿರ್ಜಾ ಮತ್ತು ಸೋನಮ್ ಕಪೂರ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಂಜು ಚಿತ್ರದಲ್ಲಿ ನಟಿಸುವಂತೆ ಮನವಿ ಮಾಡಿಕೊಳ್ಳಲು ರಣಬೀರ್ ಕಪೂರ್ ಸ್ವತಃ ಕಂಗನಾ ಮನೆಗೆ ಹೋಗಿದ್ದರಂತೆ. ಆದರೆ ಅವರ ಆಫರ್ ಅನ್ನು ತಿರಸ್ಕರಿಸಿದ್ದಾಗಿ ಕಂಗನಾ ಹೇಳಿದ್ದಾರೆ. ಇದರೊಂದಿಗೆ ನಟಿ ರಣಬೀರ್ ಮಾತ್ರವಲ್ಲದೆ ಬಾಲಿವುಡ್ ಸೂಪರ್ ಸ್ಟಾರ್ ಎನಿಸಿರುವ ಮೂವರು ಖಾನ್ ಗಳ ಚಿತ್ರಗಳನ್ನೂ ತಿರಸ್ಕರಿಸಿದ್ದಾಗಿ ತಿಳಿದ್ದಾರೆ.. ಏಕೆಂದರೆ ಅವರ ಚಿತ್ರಗಳಲ್ಲಿ ಮಹಿಳೆಯರಿಗೆ ವಿಶೇಷ ಪಾತ್ರಗಳಿಲ್ಲ ಎನ್ನುವುದು ಅವರ ಆರೋಪ. ಕೆಲಸದ ವಿಚಾರವಾಗಿ ಹೇಳುವುದಾದರೆ ಕಂಗನಾ ನಟನೆಯ ಎಮರ್ಜೆನ್ಸಿ ಚಿತ್ರವು ಸೆಪ್ಟೆಂಬರ್ 6 ರಂದು ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಕಂಗನಾ ರಣಾವತ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಅವರು ಮಾಜಿ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನುಪಮ್ ಖೇರ್, ಜೈಪ್ರಕಾಶ್ ನಾರಾಯಣ್, ಶ್ರೇಯಸ್ ತಲ್ಪಾಡೆ, ಮಹಿಮಾ ಚೌಧರಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...