ಪಶ್ಚಾತಾಪವೂ ಇಲ್ಲ, ನೋವಿಲ್ಲ..!! ಜೈಲಲ್ಲಿ ವಿಗ್‌ ಇಲ್ಲದೆ ಸಿಗರೇಟ್‌ ಸೇದಿಕೊಂಡು ಮಜಾ ಮಾಡುತ್ತಿರುವ ದಾಸ.. : ನಟ ದರ್ಶನ್ ಜೈಲಲ್ಲಿ ಬಿಂದಾಸ್ ಆಗಿ ಕಾಲ‌ ಕಳೆಯುತ್ತಿದ್ದಾರೆ. ಈ ಫೋಟೋ ಕುರಿತ ಫೊಟೋ ವೈರಲ್‌ ಆಗುತ್ತಿದೆ. ಫೋಟೋದಲ್ಲಿ ನಟ ದರ್ಶನ್ ಜೊತೆ ಜೈಲಿನಲ್ಲಿರುವ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ, ದರ್ಶನ್ ಮ್ಯಾನೇಜರ್, ನಾಗರಾಜ್, ಕುಳ್ಳ ಸೀನಾ ಕುಳಿತುಕೊಂಡಿದ್ದಾರೆ.. :ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಎಲ್ಲಾ ಖೈದಿಗಳಂತೆ ಜೈಲಲ್ಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ನಟ ದರ್ಶನ್ ಗೆ ಜೈಲಿನಲ್ಲಿ ಎಲ್ಲಾ ರೀತಿಯ ಫೆಸಿಲಿಟಿ ಕೊಡುತ್ತಿರುವುದು ಸಾಬೀತಾಗುತ್ತಿದೆ. ಕೊಲೆ ಕೇಸಲ್ಲಿ ಜೈಲು ಸೇರಿಸುವ ದಾಸ ತನ್ನ ಆತ್ಮೀಯರ ಜೊತೆ ಹರಟೆ ಹೊಡೆಯುತ್ತ ಕುಳಿತಿರುವ ಫೋಟೋ ಫುಲ್ ವೈರಲ್ ಆಗುತ್ತಿದೆ. ಈ ಫೋಟೋವನ್ನು ಗಮನಿಸಿದಾಗ ಇದು ಪರಪ್ಪನ ಅಗ್ರಹಾರ ಜೈಲೋ ಅಥವಾ ಗೆಸ್ಟ್ ಹೌಸಾ ಎಂಬ ಅನುಮಾನ ವ್ಯಕ್ತವಾಗುತ್ತೆ. ಹೌದು... ನಟ ದರ್ಶನ್ ಜೈಲಲ್ಲಿ ಬಿಂದಾಸ್ ಆಗಿ ಕಾಲ‌ ಕಳೆಯುತ್ತಿದ್ದಾರೆ ಎಂಬ ಅಂಶ ಈ ಫೋಟೋದಿಂದ ಬಯಲಾಗುತ್ತಿದೆ. ಫೋಟೋದಲ್ಲಿ ನಟ ದರ್ಶನ್ ಜೊತೆ ಜೈಲಿನಲ್ಲಿರುವ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ, ದರ್ಶನ್ ಮ್ಯಾನೇಜರ್, ನಾಗರಾಜ್, ಕುಳ್ಳ ಸೀನಾ ಕುಳಿತುಕೊಂಡಿದ್ದಾರೆ. ಇದನ್ನೂ ಓದಿ: ದರ್ಶನ್ ಸಹ ಒಂದು ಕೈಯಲ್ಲಿ ಸಿಗರೇಟ್,ಮತ್ತೊಂದು ಕೈನಲ್ಲಿ ಟೀ ಕಪ್ ಹಿಡಿದುಕೊಂಡು ಕುಳಿತಿರುವ ಫೋಟೋ ವೈರಲ್ ಆಗಿದೆ. ಇದನ್ನು ನೋಡಿದ್ರೆ ಪರಪ್ಪನ ಅಗ್ರಹಾರವನ್ನು ದರ್ಶನ್ ಗೆಸ್ಟ್ ಹೌಸ್ ಮಾಡಿಕೊಂಡ್ರ ಎಂಬ ಅನುಮಾನ ಶುರುವಾಗುತ್ತೆ. ಪರಪ್ಪನ ಅಗ್ರಹಾರ ಜೈಲು ಹಣ ಅಧಿಕಾರ ಇರೋರಿಗೆ ರೆಸಾರ್ಟ್ ರೀತಿ ಅನ್ನೋದು ಪದೆ ಪದೇ ಸಾಬೀತಾಗುತ್ತಿದೆ. ಈ ಹಿಂದೆ ಜೈಲಲ್ಲಿ ಜಯಲಲಿತಾ ಶಶಿಕಲಾಗೆ ರಾಜಾತಿಥ್ಯ ನೀಡಿ ಸಾಕಷ್ಟು ಸುದ್ದಿಯಾಗಿತ್ತು. ಅಷ್ಟೇ ಅಲ್ಲದೆ ಈ ಹಿಂದೆ ರೌಡಿ ಶೀಟರ್ ಕುಳ್ಳು ರಿಜ್ವಾನ್ ಭರ್ಜರಿ ಬರ್ತಡೇ ಮಾಡಿಕೊಂಡಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಇದನ್ನೂ ಓದಿ: ದರ್ಶನ್ ಜೈಲು ಸೇರಿದ ದಿನದಿಂದ ದರ್ಶನ್ ಗೆ ರೌಡಿ ಶೀಟರ್ ನಾಗ ಎಲ್ಲಾ ವ್ಯವಸ್ಥೆ ಮಾಡಿದ್ದಾನೆ ಅಂತ ಸುದ್ದಿ ಹರಿದಾಡಿತ್ತು. ಆದರೆ ಇದಕ್ಕೆ ಜೈಲು ಅಧಿಕಾರಿಗಳು ಮಾತ್ರ ಇದೆಲ್ಲಾ ಸುಳ್ಳು, ದರ್ಶನ್ ಬ್ಯಾರಕ್ ಬಿಟ್ಟು ಆಚೆ ಬರ್ತಿಲ್ಲ ಅಂತ ಸಬೂಬು ಹೇಳಿಕೊಂಡು ಬರ್ತಿದ್ರು. ಆದರೆ ಈ ಫೋಟೋಗಳನ್ನ ನೋಡಿದ್ರೆ ಬಹುಷ್ಯ ಜನ ಕೂಡ ಊಹೆ ಮಾಡಿರ್ಲಿಲ್ಲ ಜೈಲಲ್ಲಿ ದರ್ಶನ್ ಇಷ್ಟು ಆರಾಮಗಿದ್ದಾನೆ ಅಂತಾ. ರೆಸಾರ್ಟ್ ನ ಲಾನ್ ಒಂದರಲ್ಲಿ ನಾಲ್ಕು ಚೇರು ಟೇಬಲ್ ಹಾಕಿ ಟೀ ಮಗ್ ಹಿಡಿದುಕೊಂಡು ಸಿಗರೇಟ್ ಸೇದಿಕೊಂಡು ಮಜಾ ಮಾಡುತ್ತಿರೋದು ಕಂಡು ಬಂದಿದೆ. ಜೈಲಲ್ಲಿ ಸಿಗರೇಟ್ ಮಾರಾಟ ಮಾಡಲಾಗುತ್ತದೆ. ಆದರೆ ಎಲ್ಲಾ ಖೈದಿಗಳಿಗೂ ಇದೇ ರೀತಿ ಚೇರು ಟೇಬಲ್ ಹಾಕಿ ಸಿಗರೇಟ್ ಸಿದೋಕೆ ಬಿಡ್ತಾರ. ಇಲ್ಲ ಈ ಚೇರು ಟೇಬಲ್ ವ್ಯವಸ್ಥೆಗೆ ಎಷ್ಟು ಹಣ ಸಂದಾಯವಾಗಿದೆ ಅಥವಾ ಪ್ರಭಾವಿ ವ್ಯಕ್ತಿಗಳ ಮಾತಿಗೆ ಮಣಿದು ಈ ರೀತಿ ಫೆಸಿಲಿಟಿ ನೀಡಲಾಗಿದೆಯಾ ಎಂಬುದಕ್ಕೆ ಜೈಲಾಧಿಕಾರಿಗಳೇ ಉತ್ತರ ಕೊಡಬೇಕಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...