ಕರಣ್ ಜೋಹರ್ ಅವಳಿ ಮಕ್ಕಳ ತಾಯಿ ಯಾರು? ನೆಟ್ಟಿಗರ ಬಹುದಿನದ ಪ್ರಶ್ನೆಗೆ ಉತ್ತರ ನೀಡಿದ ನಿರ್ದೇಶಕ!! : 2017 ರಲ್ಲಿ, ಕರಣ್ ಅವಳಿ ಮಕ್ಕಳಿಗೆ ತಂದೆಯಾದರು. ಅವರ ಮಕ್ಕಳ ಹೆಸರು ಯಶ್ ಮತ್ತು ರೂಹಿ. ಇತ್ತೀಚೆಗೆ ಅವರು ರೂಹಿಯ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಆಕೆಯ ತಾಯಿ ಯಾರು ಎಂಬ ಪ್ರಶ್ನೆಯನ್ನು ಬಳಕೆದಾರರು ಕೇಳಿದಾಗ, ಕರಣ್ ಅವರೇ ಉತ್ತರ ನೀಡಿದ್ದಾರೆ.. :ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಅವರು ತಮ್ಮ ಅಭಿಮಾನಿಗಳೊಂದಿಗೆ ವಿವಿಧ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. 2017 ರಲ್ಲಿ, ಕರಣ್ ಬಾಡಿಗೆ ತಾಯ್ತನದ ಮೂಲಕ ಎರಡು ಮಕ್ಕಳಿಗೆ ತಂದೆಯಾದರು. ಅವರ ಮಕ್ಕಳ ಹೆಸರು ಯಶ್ ಮತ್ತು ರೂಹಿ. ಈ ಮಕ್ಕಳ ತಾಯಿ ಯಾರು ಎಂದು ಮೊದಲು ಹಲವು ಬಾರಿ ಕೇಳಲಾಗಿತ್ತು. ಆದರೆ ಇದೀಗ ಬಳಕೆದಾರರ ಪ್ರಶ್ನೆಯೊಂದಕ್ಕೆ ಕರಣ್ ಅವರೇ ಉತ್ತರ ನೀಡಿದ್ದಾರೆ. ಕರಣ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಗಳು ರೂಹಿಯ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊದಲ್ಲಿ, ರೂಹಿ ತನ್ನ ಐಫೋನ್‌ನಲ್ಲಿ 'ಸಿರಿ' ಹಾಡನ್ನು ಹಾಡಲು ಕೇಳುತ್ತಾಳೆ. ಆಕೆಯ ಈ ತಮಾಷೆಯ ವಿಡಿಯೋಗೆ ಹಲವು ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ. ನಟಿ ನೀಲಂ ಕೊಠಾರಿ, ಆಯುಷ್ಮಾನ್ ಖುರಾನಾ, ಸಬಾ ಪಟೌಡಿ ಮುಂತಾದ ಸೆಲೆಬ್ರಿಟಿಗಳು ರೂಹಿಯನ್ನು ಹೊಗಳಿದ್ದಾರೆ. ಆದರೆ ರೂಹಿಯ ತಾಯಿ ಯಾರು ಎಂದು ಬಳಕೆದಾರರು ಕೇಳಿದ್ದಾರೆ.. ಇದನ್ನೂ ಓದಿ- 'ರೂಹಿಯ ತಾಯಿ ಯಾರು? ಯಾರಾದರೂ ದಯವಿಟ್ಟು ನನಗೆ ಹೇಳಬಹುದೇ? ನಾನು ತುಂಬಾ ಗೊಂದಲಕ್ಕೊಳಗಾಗಿದ್ದೇನೆ' ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಸ್ವತಃ ಕರಣ್ ಜೋಹರ್ ಉತ್ತರ ನೀಡಿದ್ದು, 'ನಾನು. ನಿಮ್ಮ ಗೊಂದಲದ ಬಗ್ಗೆ ನಾನು ಆಳವಾಗಿ ಚಿಂತಿಸುತ್ತಿದ್ದೇನೆ, ನಿಮ್ಮ ಸಂಬಂಧಿತ ಮತ್ತು ವೀಡಿಯೊ ಸಂಬಂಧಿತ ಪ್ರಶ್ನೆಗೆ ಒತ್ತಾಯಪೂರ್ವಕವಾಗಿ ಉತ್ತರಿಸುತ್ತಿದ್ದೇನೆ.. ರೂಹಿಯ ತಂದೆ ತಾಯಿ ಎರಡೂ ನಾನೇ ಎಂದು" ಎಂದು ಕರಣ್ ಬರೆದಿದ್ದಾರೆ. ಈ ಹಿಂದೆ ವಿವಿಧ ಸಂದರ್ಶನಗಳಲ್ಲಿ, ಕರಣ್ ತನ್ನ ಮಕ್ಕಳನ್ನು ಬೆಳೆಸುವ ಬಗ್ಗೆ, ಮತ್ತು ಸಿಂಗಲ್ ಪೇರೆಂಟ್ ಆಗಿರುವ ಬಗ್ಗೆ ಮುಕ್ತವಾಗಿ ಹೇಳಿದ್ದರು. ಕರಣ್ ತಾಯಿ ಜೊತೆಗೆ ತನ್ನ ಮಕ್ಕಳಿಬ್ಬರನ್ನೂ ನೋಡಿಕೊಳ್ಳುತ್ತಿದ್ದಾರೆ. ಅವರ ಮಕ್ಕಳು ತಮ್ಮ ತಾಯಿ ಮತ್ತು ಜನ್ಮದ ಬಗ್ಗೆ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದ್ದಾರೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದರು. ಮಕ್ಕಳ ಈ ಪ್ರಶ್ನೆಗಳಿಗೆ ಉತ್ತರಿಸಲು ಅಗತ್ಯ ಮಾರ್ಗದರ್ಶನವನ್ನೂ ತೆಗೆದುಕೊಳ್ಳಬೇಕು ಎಂದಿದ್ದರು.. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...