ಬೆಳಿಗ್ಗೆ 3 ಗಂಟೆಗೆ 3 ʼಕಾಂಡೋಮ್ʼಗೆ ಬೇಡಿಕೆಯಿಟ್ಟ ಖ್ಯಾತ ನಟ..! ನಿರೋಧ ತರಲು ನಿರಾಕರಿಸಿದ್ದಕ್ಕೆ ಹೀರೋ ಹೀಗಾ ಮಾಡೋದು.. : ಸಹಾಯಕ ನಿರ್ದೇಶಕರೊಬ್ಬರಿಗೆ ಖ್ಯಾತ ನಟನೊಬ್ಬ ಬೆಳಿಗ್ಗೆ 3 ಗಂಟೆಗೆ ಕಾಂಡೋಮ್ ತರುವಂತೆ ಹೇಳಿದ್ದರು. ಆದರೆ ಅಸಿಸ್ಟಂಟ್‌ ಡೈರೆಕ್ಟರ್‌ ನಿರೋಧ ತರಲು ನಿರಾಕರಿಸಿದ್ದಕ್ಕೆ ಹೀರೋ ಮಾಡಿದ್ದೇನು ಗೊತ್ತೆ..? ಕೇಳಿದ್ರೆ ಶಾಕ್‌ ಆಗ್ತೀರಾ.. :ಕಾಲಿವುಡ್‌ ಖ್ಯಾತ ನಟ ನಕುಲ್ ದೀರ್ಘ ಸಮಯದ ನಂತರ ʼವಾಸ್ಕೋ ಡ ಗಾಮಾʼ ಸಿನಿಮಾ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದರು.. ಇದರ ಬೆನ್ನಲ್ಲೆ ಅವರ ಮೇಲೆ ಶಾಕಿಂಗ್‌ ಆರೋಪ ಒಂದು ಕೇಳಿ ಬಂದಿದೆ. ನಟ ಸಹಾಯ ನಿರ್ದೇಶಕರೊಬ್ಬರಿಗೆ ಕಾಂಡೋಮ್‌ ತರಲು ಹೇಳಿದ್ದಾಗಿ ಸುದ್ದಿಯಾಗಿದ್ದೆ. ಹೌದು.. ʼವಾಸ್ಕೋ ಡ ಗಾಮಾʼ ಚಲನಚಿತ್ರ ಸಹಾಯ ನಿರ್ದೇಶಕರಾಗಿ ಎ.ಎಂ. ಚಂದ್ರು ಕೆಲಸ ಮಾಡಿದ್ದಾರೆ. ಇದೀಗ ಚಂದ್ರು ನಟ ನಕುಲ್ ಬಗ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ನಟ ಸಿನಿಮಾ ಶೂಟಿಂಗ್‌ ವೇಳೆ ನಿರೋಧ ತರಲು ತಮಗೆ ಹೇಳಿದ್ದಾಗಿ ಹೇಳಿಕೊಂಡಿದ್ದಾರೆ.. ಇದನ್ನೂ ಓದಿ: ತಮಿಳು ಸಿನೆಮಾ ಜಗತ್ತಿನಲ್ಲಿ ಜನಪ್ರಿಯ ನಟರಲ್ಲಿ ನಕುಲ್ ಕೂಡ ಒಬ್ಬರು. ಬಾಯ್ಸ್‌ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟ ತಮ್ಮ ಮೊದಲ ಸಿನಿಮಾದಲಲ್ಲೇ ಯಶಸ್ಸು ಕಂಡರು. ಆದರೆ ಕಳೆದ ಕೆಲವು ವರ್ಷಗಳಿಂದ ಸಿನಿಮಾಗಳಿಂದ ದೂರವಿದ್ದರು. ಸಿನಿಮಾ ಅವಕಾಶಗಳ ಕೊರತೆಯಿಂದ ಕಿರುತೆರೆಯಲ್ಲಿ ನೃತ್ಯ ಕಾರ್ಯಕ್ರಮವೊಂದರ ತೀರ್ಪುಗಾರರಾಗಿದ್ದರು. ಬಹಳ ಗ್ಯಾಪ್ ನಂತರ ನಕುಲ್ ವಾಸ್ಕೋ ಡಿ ಗಾಮಾ ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಆರ್‌ಜಿ ಕೃಷ್ಣನ್ ನಿರ್ದೇಶನದ ಈ ಚಿತ್ರದಲ್ಲಿ ವಂಶಿ ಕೃಷ್ಣ, ಕೆಎಸ್ ರವಿಕುಮಾರ್, ಮುನಿಷ್ಕಾಂತ್ ಸೇರಿದಂತೆ ಹಲವು ನಟರು ನಟಿಸಿದ್ದಾರೆ. ಆದರೆ ಈ ಚಿತ್ರವೂ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ಇದನ್ನೂ ಓದಿ: ಈ ಸಂದರ್ಭದಲ್ಲಿ ಈ ಚಿತ್ರದ ಸಹಾಯಕ ನಿರ್ದೇಶಕ ಎ.ಎಂ. ಚಂದ್ರು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಕುಲ್ ಬಗ್ಗೆ ಶಾಕಿಂಗ್‌ ವಿಚಾರ ಬಿಚ್ಚಿಟ್ಟಿದ್ದಾರೆ. ವಾಸ್ಕೋಡಗಾಮಾ ಚಿತ್ರದಲ್ಲಿ ಎರಡು ವರ್ಷ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದೆ. ಆದರೆ ಕಳೆದ 10 ದಿನಗಳಿಂದ ನನ್ನನ್ನು ಶೂಟಿಂಗ್ ಸ್ಪಾಟ್‌ಗೆ ಕರೆಯಲೇ ಇಲ್ಲ. ನನಗೆ ಕೆಲಸ ಮಾಡಲು ಬಿಡಲಿಲ್ಲ. ಅದೇ ರೀತಿ ಮ್ಯೂಸಿಕ್ ಲಾಂಚ್ ಪಾರ್ಟಿಗೂ ಕರೆಯಲಿಲ್ಲ. ಸಿನಿಮಾ ರಿಲೀಸ್ ಆದ ನಂತರ ಸಿನಿಮಾದಲ್ಲೂ ನನ್ನ ಹೆಸರು ಬರಲಿಲ್ಲ. ಇದಕ್ಕೆಲ್ಲ ನಕುಲ್ ಕಾರಣ ಎಂದು ಆರೋಪಿಸಿದ್ದಾರೆ. : " , . , 🤯 - — ĶŇIĢHŤ🐴 (@) ಸೆಟ್ ನಲ್ಲಿ ನಕುಲ್ ನನಗೆ ಕರೆ ಮಾಡಿ ಕಾಂಡೋಮ್ ತರುವಂತೆ ಹೇಳಿದ್ದರು. ಇದನ್ನು ಕೇಳಿ ನನಗೆ ಶಾಕ್ ಆಯಿತು. ಆಮೇಲೆ ಮತ್ತೆ ಮುಂಜಾನೆ 3 ಗಂಟೆಗೆ ತುಂಬಾ ಅರ್ಜೆಂಟ್ ಆಗಿ ಮೂರು ಕಾಂಡೋಮ್ ತರಲು ಹೇಳಿದರು. ಆಗಲೂ ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿ ಹೊರಟೆ. ಆ ನಂತರ ಎಲ್ಲವೂ ಸರಿಯಾಗುತ್ತದೆ ಎಂದುಕೊಂಡೆ. ಇದನ್ನೂ ಓದಿ: ಆದರೆ ನಟ ಇದನ್ನೆ ತಲೆಯಲ್ಲಿ ಇಟ್ಟುಕೊಂಡು ನಕುಲ್‌ ನನಗೆ ತೊಂದರೆ ಕೊಟ್ಟರು.. ಚಿತ್ರೀಕರಣ ಸೇರಿದಂತೆ ಸಿನಿಮಾದ ಯಾವುದೇ ಕೆಲಸಕ್ಕೂ ಬಾರದಂತೆ ನನನ್ನು ತಡೆದ. ಚಿತ್ರ ಬಿಡುಗಡೆಯಾದ ನಂತರ ಚಿತ್ರದಲ್ಲಿ ನನ್ನ ಹೆಸರು ಸಹ ಕಾಣಿಸಲಿಲ್ಲ. ನನ್ನ ಎರಡು ವರ್ಷಗಳ ಕೆಲಸ ವ್ಯರ್ಥವಾಯಿತು ಎಂದು ಚಂದ್ರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...