ತಮಿಳು ನಟ ಧನುಷ್‌ಗೆ ಜೋಡಿಯಾಗಲಿದ್ದಾರೆ ನಿತ್ಯಾ ಮೆನನ್ ! : ತಮಿಳು ನಟ ಧನುಷ್‌ಗೆ ನಿತ್ಯಾ ಮೆನನ್ ಜೋಡಿಯಾಗಲಿದ್ದಾರೆ. ಈ ಸಂಗತಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. :ಕಾಲಿವುಡ್ ಸ್ಟಾರ್ ಹೀರೋ ಧನುಷ್ ಮತ್ತೊಮ್ಮೆ ನಿತ್ಯಾ ಮೆನನ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕಾಲಿವುಡ್ ಸಿನಿರಂಗಲ್ಲಿ ತಮಿಳುನಾಡಿನ ನಾಯಕಿಯರಿಗಿಂತ ಕೇರಳದ ಮಲಯಾಳಂ ಕ್ಯೂಟಿಯರೇ ಹೆಚ್ಚಾಗಿದ್ದಾರೆ. ಅವರಲ್ಲೇ ಒಬ್ಬರು ನಿತ್ಯಾ ಮೆನನ್. ನಿತ್ಯಾ ಮೆನನ್ ಅನೇಕ ಜನರ ನೆಚ್ಚಿನ ನಾಯಕಿ. ಆರಂಭಿಕ ದಿನಗಳಿಂದಲೂ ನಿತ್ಯಾ ಮೆನನ್ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. 2022 ರಲ್ಲಿ ಜವಾಹರ್ ನಿರ್ದೇಶನದ 'ತಿರಿಚಿರಂಬಲಂ' ಚಿತ್ರದಲ್ಲಿ ಧನುಷ್ ಜೊತೆ ನಿತ್ಯಾ ಮೆನನ್ ನಟಿಸಿದ್ದರು. ಇದರಲ್ಲಿ ಅವರ ಶೋಭನಾ ಪಾತ್ರ ಹೆಚ್ಚು ಟ್ರೆಂಡಿಂಗ್ ಆಯಿತು. ಈ ಚಿತ್ರಕ್ಕಾಗಿ ನಿತ್ಯಾ ಮೆನನ್‌ಗೆ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿದೆ. ಅದೇ ರೀತಿ ಇದರಲ್ಲಿನ ‘ಮೇಗಂ ಕರುಕಥೆ’ ಹಾಡಿಗೂ ನೃತ್ಯ ಸಂಯೋಜನೆಗಾಗಿ ರಾಷ್ಟ್ರಪ್ರಶಸ್ತಿ ಲಭಿಸಿದೆ. ಇದನ್ನೂ ಓದಿ: ಇದೀಗ ಮತ್ತೊಮ್ಮೆ ನಿತ್ಯಾ ಮೆನನ್ ಮತ್ತು ಧನುಷ್‌ ಒಟ್ಟಿಗೆ ಕೆಲಸ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರವನ್ನು ಧನುಷ್ ನಿರ್ದೇಶನ ಮಾಡಲಿದ್ದಾರೆ ಎಂದು ವರದಿಯಾಗಿದೆ. ಧನುಷ್ ಜೊತೆ ನಿತ್ಯಾ ಮೆನನ್ ಮತ್ತೊಮ್ಮೆ ತೆರೆ ಮೇಲೆ ಮ್ಯಾಜಿಕ್ ಕ್ರಿಯೇಟ್ ಮಾಡಲಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿದ್ದು, ಅಭಿಮಾನಿಗಳು ಸಂತಸಗೊಂಡಿದ್ದಾರೆ. ನಿತ್ಯಾ ಮೆನನ್ ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. 8 ನೇ ವಯಸ್ಸಿನಲ್ಲಿ ಇಂಗ್ಲಿಷ್ ಚಲನಚಿತ್ರ ದಿ ಮಂಕಿ ಹೂ ನ್ಯೂ ಟೂ ಮಚ್ (1998) ನಲ್ಲಿ ಬಾಲ ನಟಿಯಾಗಿ ನಟಿಸಲು ಪ್ರಾರಂಭಿಸಿದರು. 17 ನೇ ವಯಸ್ಸಿನಲ್ಲಿ ಅಂದರೆ 2006 ರಲ್ಲಿ ಕನ್ನಡ ಸಿನಿಮಾದಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದರು. ನಂತರ ಮಲಯಾಳಂ ಚಿತ್ರ ಆಕಾಶ ಗೋಪುರಂನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ ಪಡೆದರು. ನಂತರ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿಯೂ ನಟಿಸಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...