ಫ್ಯಾಶನ್ ಶೋಗಳಲ್ಲಿ ಬಟ್ಟೆ ಸರಿಪಡಿಸುತ್ತಿದ್ದ ಯುವತಿ ಇಂದು ಸ್ಟಾರ್‌ ನಟಿ..! ಆಗ 500 ರೂ. ಸಂಬಳ, ಈ ಕೋಟಿ.. ಕೋಟಿ.. : ಬಹುತೇಕ ನಟಿಯರು ಬಾಲ ಕಲಾವಿದೆಯಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಇದೀಗ ಸ್ಟಾರ್‌ ನಟಿಯಾಗಿ ಮಿಂಚುತ್ತಿದ್ದಾರೆ.. ಈ ಪೈಕಿ ಇಲ್ಲೊಬ್ಬ ನಟಿ ಮೊದಲು ಪ್ಯಾಶನ್‌ ಶೋಗಳಲ್ಲಿ ಬಟ್ಟೆ ಸರಿಪಡಿಸುವ ಕೆಲಸ ಮಾಡುತ್ತ 500 ರೂ. ಸಂಬಳ ಪಡೆಯುತ್ತಿದ್ದಳು.. ಆದ್ರೆ ಈಗ ಈಕೆ ಮಹಾನಟಿ... :ಸೌತ್‌ ನಟಿ ಕೀರ್ತಿ ಸುರೇಶ್ ಈಗ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. 2000 ರಲ್ಲಿ ತೆರೆಕಂಡ ಪೈಲಟ್ಸ್‌ ಎಂಬ ಮಲಯಾಳಂ ಸಿನಿಮಾದ ಮೂಲಕ ಬಾಲನಟಿಯಾಗಿ ಕೀರ್ತಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ನೇನು ಶೈಲಜಾ ಎಂಬ ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿ, ಮೊದಲ ಸಿನಿಮಾದಿಂದಲೇ ನಟಿಯಾಗಿ ಒಳ್ಳೆ ಕ್ರೇಜ್ ಗಿಟ್ಟಿಸಿಕೊಂಡರು. ನಾಗ್ ಅಶ್ವಿನ್ ನಿರ್ದೇಶನದ ಮಹಾನಟಿ ಸಿನಿಮಾದ ಮೂಲಕ ಸೌತ್‌ ಸಿನಿ ಪ್ರೇಕ್ಷಕರಿಗೆ ಹತ್ತಿರವಾದರು. ಚಿತ್ರದಲ್ಲಿ ಮಹಾನಟಿ ಸಾವಿತ್ರಿ ಪಾತ್ರದಲ್ಲಿ ಕೀರ್ತಿ ಸುರೇಶ್ ನಟಿಸಿದ್ದಾರೆ. ಸಾವಿತ್ರಿ ಪಾತ್ರಕ್ಕಾಗಿ ಈ ಚೆಲುವೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಕೀರ್ತಿ ಸುರೇಶ್ ತೆಲುಗಿನಲ್ಲಿ ಮಾತ್ರವಲ್ಲದೆ ಮಲಯಾಳಂ ಮತ್ತು ತಮಿಳಿನ ಪ್ಯಾನ್-ಇಂಡಿಯನ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಸುಂದರಿ ತೆಲುಗಿನಲ್ಲಿ ಹಲವು ಸ್ಟಾರ್ ಹೀರೋಗಳ ಜೊತೆ ನಟಿಸಿದ್ದಾಳೆ. ಇದನ್ನೂ ಓದಿ: ಇತ್ತೀಚೆಗಷ್ಟೇ ಕೀರ್ತಿ ಅಭಿನಯದ ರಘುತಾತ ಚಿತ್ರ ತೆರೆಕಂಡಿತ್ತು. ಚಿತ್ರ ಆಗಸ್ಟ್ 15 ರಂದು ಥಿಯೇಟರ್‌ಗೆ ಅಪ್ಪಳಿಸಿತು. ಸಂದರ್ಶನವೊಂದರಲ್ಲಿ ಕೀರ್ತಿ ಸುರೇಶ್ ತಮ್ಮ ಮೊದಲ ಸಂಭಾವನೆಯ ಬಗ್ಗೆ ಮಾತನಾಡಿದ್ದಾರೆ. ಅವರ ಮೊದಲ ಸಂಬಳ ರೂ. 500.. ಕೀರ್ತಿ ಸುರೇಶ್ ಮೊದಲು ಫ್ಯಾಶನ್ ಶೋಗಳಲ್ಲಿ ಬಟ್ಟೆಗಳನ್ನು ಸರಿಪಡಿಸುವ ಕೆಲಸ ಮಾಡಿದರು. ಇದಕ್ಕಾಗಿ ನಟಿಗೆ ಸಂಬಳವಾಗಿ 500 ರೂ. ನೀಡುತ್ತಿದ್ದರಂತೆ. ಇದು ನನ್ನ ಮೊದಲ ಸಂಭಾವನೆ ಎಂದು ಕೀರ್ತಿ ಸುರೇಶ್ ಹೇಳಿದ್ದಾರೆ. ಈ ಸುದ್ದಿ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...