ನಟ ದುನಿಯಾ ವಿಜಯ್‌ಗೆ ಸಂಕಷ್ಟ: ಭೀಮನಿಗೆ ಸಿಸಿಬಿ ನೋಟಿಸ್ ಸಾಧ್ಯತೆ ಭೀಮಾ ಸಿನಿಮಾ ರಿಲೀಸ್ ಆದ್ಮೇಲೆ ನಟ ದುನಿಯಾ ವಿಜಯ್ ಸ್ವತಃ ಮಾದಕ ವಸ್ತುಗಳ ಜಾಲ ಪತ್ತೆ ಹಚ್ಚಿ ರೈಡ್ ಮಾಡಿದ್ದರು. ಸಿಸಿಬಿ ಕಚೇರಿ ಬಳಿ ಮಾದಕ ವಸ್ತು ಮಾರಾಟವಾಗುತ್ತಿದೆ ಎಂದು ವಿಜಯ್ ಆರೋಪಿಸಿದ್ದರು. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.. ಬೆಂಗಳೂರು :ಇತ್ತೀಚೆಗೆ ತೆರೆಕಂಡ ಭೀಮಾ ಸಿನಿಮಾ ಸಾಕಷ್ಟು ಸೌಂಡ್ ಮಾಡುತ್ತಿದೆ. ವಿಜಯ್ ನಿರ್ದೇಶಿಸಿ, ನಟಿಸಿದ್ದ ಈ ಸಿನಿಮಾ ದುನಿಯಾ ವಿಜಯ್ ಸಿನಿಮಾಗಳಲ್ಲಿ ಮತ್ತೊಂದು ಹಿಟ್ ಲಿಸ್ಟ್ ಗೆ ಸೇರಿದೆ. ಆದರೆ ಸಿನಿಮಾ ಪ್ರಮೋಷನ್ ನಟ ದುನಿಯಾ ವಿಜಯ್ ಗೆ ಕಂಟಕವಾಗುವ ಸಾಧ್ಯತೆ ಇದೆ. ಭೀಮಾ ಸಿನಿಮಾ ರಿಲೀಸ್ ಆದ್ಮೇಲೆ ನಟ ದುನಿಯಾ ವಿಜಯ್ ಸ್ವತಃ ಮಾದಕ ವಸ್ತುಗಳ ಜಾಲ ಪತ್ತೆ ಹಚ್ಚಿ ರೈಡ್ ಮಾಡಿದ್ದರು. ಅಷ್ಟೇ ಅಲ್ಲದೇ ಸಿನಿಮಾಗಳಲ್ಲಿ ಚೇಸ್ ಮಾಡುವ ರೀತಿ ಬೈಕ್ ಏರಿ ಚೇಸ್ ಮಾಡಿ ಮಾದಕ ಗಾಂಜಾ ಅಡ್ಡೆಗಳ ಬಳಿ ಹೋಗಿದ್ದರು. ಇನ್ನೂ ಅಲ್ಲೇ ಬಿದ್ದಿದ್ದ ಮಾದಕ ವಸ್ತುಗಳನ್ನು ತೋರಿಸಿ ರಿಪೋರ್ಟ್‌ ಮಾಡಿ ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಇದನ್ನೂ ಓದಿ: ಇನ್ನೂ ಸಿಸಿಬಿ ಕಚೇರಿ ಬಳಿ ಮಾದಕ ವಸ್ತು ಮಾರಾಟವಾಗುತ್ತಿದೆ ಎಂದು ವಿಜಯ್ ಆರೋಪಿಸಿದ್ದರು. ಸದ್ಯ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸಿಸಿಬಿ ಅಧಿಕಾರಿಗಳು ಮಾದಕ ವಸ್ತುಗಳ ಮಾರಾಟ ಜಾಲ ಮತ್ತು ಬಳಸುವವರನ್ನು ಟಾರ್ಗೆಟ್ ಮಾಡಿಕೊಂಡು ದಾಳಿ ನಡೆಸಲು ಸಿದ್ಧವಾಗಿದ್ದಾರೆ. ಮತ್ತೊಂದು ಕಡೆ ನಟ ದುನಿಯಾ ವಿಜಯ್ ಗೆ ನೋಟಿಸ್ ಕೊಟ್ಟು ಕರೆಸಿ ವಿಚಾರಣೆ ನಡೆಸಲು ಪ್ಲಾನ್ ಮಾಡಿಕೊಂಡಿದ್ದಾರೆ. ಆಗಸ್ಟ್ 9ಕ್ಕೆ ರಿಲೀಸ್ ಆಗಿರುವ ಭೀಮಾ ಚಿತ್ರ ಬಿಡುಗಡೆಯಾದ ವೇಳೆ ಚಾಮರಾಜನಗರದ ಕೆಲವು ಏರಿಯಾ ಗಳು ಮಾರುತ್ತಾರೆ. ಸಿಸಿಬಿ ಕಚೇರಿ ಬಳಿ ಡ್ರಗ್ ಮಾರಾಟದ ಬಗ್ಗೆ ಸಾಕ್ಷಿ ಎಂದು ದುನಿಯಾ ದುನಿಯಾ ವಿಜಯ್ ಹೇಳಿದ್ದರು. ಹೀಗಾಗಿ ಈ ಬಗ್ಗೆ ಮಾಹಿತಿ ಪಡೆದು ವಿಚಾರಣೆ ನಡೆಸಲು ವಿಜಿಯನ್ನು ಕರೆಸಲು ಸಿಸಿಬಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...