ʼತಂದೆ-ತಾಯಿ ನೋಡಿದ ʼಆʼ ಹುಡುಗನೊಂದಿಗೆ ನಾನು...ʼ ಮದುವೆಗೆ ರೆಡಿಯಾದ್ರಾ ನಟಿ ಸಾಯಿ ಪಲ್ಲವಿ?! ಅಷ್ಟಕ್ಕೂ ವರ ಯಾರು? : ಸಾಯಿ ಪಲ್ಲವಿ ಯಾವಾಗ ಮದುವೆಯಾಗುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಪ್ರತಿ ಬಾರಿ ನಟಿಯ ಮದುವೆ ಬಗ್ಗೆ ಒಂದಷ್ಟು ಸುದ್ದಿಗಳು ಹೊರಬೀಳುತ್ತವೆ. ಇತ್ತೀಚೆಗೆ ಸಾಯಿ ಪಲ್ಲವಿಗೆ ಸಂಬಂಧಿಸಿದ ಸುದ್ದಿಯೊಂದು ಮತ್ತೆ ವೈರಲ್ ಆಗಿದೆ. : ನ್ಯಾಚುರಲ್‌ ಬ್ಯೂಟಿ ದಕ್ಷಿಣ ಭಾರತದ ಸ್ಟಾರ್ ನಟಿ ಸಾಯಿ ಪಲ್ಲವಿ ಎಲ್ಲಾ ನಾಯಕಿಯರಂತೆ ಅಲ್ಲ. ಮುಖಕ್ಕೆ ಬಣ್ಣ ಮತ್ತು ತುಟಿಗಳಿಗೆ ಲಿಪ್‌ಸ್ಟಿಕ್‌ನೊಂದಿಗೆ ಸಣ್ಣ ಬಟ್ಟೆಗಳನ್ನು ಧರಿಸುವುದು ಆಕೆಗೆ ಅಭ್ಯಾಸವಿಲ್ಲ. ನಟಿ ತುಂಬಾ ಸರಳ.. ಪಾತ್ರಗಳಿಗೆ ಪ್ರಾಮುಖ್ಯತೆ ಇದ್ದರೆ ಮಾತ್ರ ಸಾಯಿ ಪಲ್ಲವಿ ಸಿನಿಮಾ ಮಾಡುತ್ತಾರೆ. ಅದರಲ್ಲೂ ಹೀರೋ ಕಂಟೆಂಟ್ ಇರುವ ಸಿನಿಮಾಗಳನ್ನು ಮಾಡಲು ಆಕೆಗೆ ಇಷ್ಟವಿಲ್ಲ ಎನ್ನಲಾಗಿದೆ. ಹಾಗಾಗಿಯೇ ಸಾಯಿ ಪಲ್ಲವಿ ಸ್ಟಾರ್ ಹೀರೋಗಳು ಮತ್ತು ಸೂಪರ್ ಸ್ಟಾರ್ ಗಳ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದು..‌ ಅಷ್ಟೇ ಅಲ್ಲ, ತೆಲುಗು ಚಿತ್ರರಂಗದಲ್ಲಿ ಇಲ್ಲಿಯವರೆಗೂ ಎಕ್ಸ್ ಪೋಸ್ ಮಾಡದ ನಾಯಕಿ ಯಾರಿದ್ದಾರೆ ಎಂದರೆ ಮೊದಲು ನೆನಪಿಗೆ ಬರುವುದು ಸಾಯಿ ಪಲ್ಲವಿ ಹೆಸರು. ಇದನ್ನೂ ಓದಿ- ಅತ್ಯುತ್ತಮ ಕಂಟೆಂಟ್ ಇರುವ ಕಥೆಗಳನ್ನು ಆಯ್ದುಕೊಳ್ಳುತ್ತಿರುವ ಸಾಯಿ ಪಲ್ಲವಿ ಸದ್ಯ ಬಾಲಿವುಡ್ ನಲ್ಲಿ ರಾಮಾಯಣ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಸೀತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೀತಾ ಪಾತ್ರ ಮಾಡುತ್ತಿದ್ದಾಳೆ ಆದರೆ ಮದುವೆ ಯಾವಾಗ ಎಂದು ಎಲ್ಲರೂ ಕೇಳುತ್ತಿದ್ದಾರೆ. ಆದರೆ ಸಾಯಿ ಪಲ್ಲವಿಯನ್ನು ಮದುವೆಯಾಗುವಂತೆ ಒಬ್ಬ ವ್ಯಕ್ತಿ ಪೀಡಿಸಿದ್ದಾರಂತೆ.. ಹಾಗಾದ್ರೆ ಯಾರದು.. ಇದನ್ನೂ ಓದಿ- ಸಂದರ್ಶನವೊಂದರಲ್ಲಿ ಮಾತನಾಡಿರುವ ಸಾಯಿ ಪಲ್ಲವಿ ತಮ್ಮ ಮದುವೆಯ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ನನ್ನ ಮದುವೆಯನ್ನು ತಂದೆ-ತಾಯಿ ನೋಡಿಕೊಳ್ಳುತ್ತಾರೆ.. ಇದಲ್ಲದೆ, ಕರೋನಾ ಸಮಯದಲ್ಲಿ ನಾನು ಮನೆಯಲ್ಲಿದ್ದೆ.. ಆ ವೇಳೆ ನನ್ನ ತಂದೆ-ತಾಯಿ ಮದುವೆಯಾಗುವಂತೆ ಪೀಡಿಸಿದ್ದರು. ಎಲ್ಲಾ ಸೋದರ ಸೋದರಿಯರಿಗೆ ಮದುವೆಯಾಗಿದೆ.. ನೀನು ಮಾತ್ರ ಇನ್ನೂ ಮದುವೆಯಾಗಿಲ್ಲ, ಎಂದು ಕೋರೋನಾ ಸಮಯದಲ್ಲಿ ಮನೆಯವರು ಒತ್ತಾಯ ಮಾಡಿದ್ದರು.. ನನ್ನ ಪ್ರಕಾರ ನನಗೆ ಮದುವೆಗೆ ಒತ್ತಾಯ ಮಾಡುವಂತೆ ಮಾಡಿದ್ದು ಕೊರೋನಾ ಎಂದು ನಟಿ ಹೇಳಿದ್ದಾರೆ.. "ಈಗಲೂ ನಾನು ನನ್ನ ವೃತ್ತಿ ಜೀವನದಲ್ಲಿ ಏನನ್ನೂ ಸಾಧಿಸಿಲ್ಲ. ಹೇಗೆ ಮದುವೆಯಾಗಲು ಬಯಸಲಿ? ಕರೋನಾ ಅವಧಿ ಮುಗಿಯುವವರೆಗೂ ನನಗೆ ತುಂಬಾ ಒತ್ತಡಗಳಿದ್ದವು.. ಕರೋನಾ ಮುಗಿದ ನಂತರ, ಸಿನಿಮಾಗಳ ಬ್ಯುಸಿಯಿಂದಾಗಿ ನಮ್ಮ ಮನೆಯವರು ಮದುವೆಯ ಬಗ್ಗೆ ಹೇಳಲಿಲ್ಲ. ವೃತ್ತಿ ಜೀವನದಲ್ಲಿ ನನಗೆ ಬೇಕಾದುದನ್ನು ಸಾಧಿಸುವವರೆಗೆ ಮದುವೆಯಾಗುವುದಿಲ್ಲ, ಒಂದು ವೇಳೆ ಆದರೂ ಹಾಗೆ ಮಾಡಿದರೆ ತಂದೆ-ತಾಯಿ ನೋಡಿದ ಹುಡುಗನನ್ನೇ ಮದುವೆಯಾಗುವುದಾಗಿ ಸಾಯಿ ಪಲ್ಲವಿ ಹೇಳಿದ್ದಾರೆ. ಈಗ ಈ ಸುದ್ದಿ ವೈರಲ್ ಆಗುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...