ಲಂಡನ್‌ ವಾಸ ಸಾಕಾಯ್ತಾ.. ಶೀಘ್ರದಲ್ಲೇ ಮುಂಬೈಗೆ ಮರಳಲಿದ್ದಾರಾ ವಿರಾಟ್-ಅನುಷ್ಕಾ!? - : ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಅಷ್ಟೇ ಅಲ್ಲ ಈ ಜೋಡಿ ವಿದೇಶದಕ್ಕೆ ಶಿಫ್ಟ್ ಆಗಲಿದ್ದಾರೆ ಎನ್ನಲಾಗಿತ್ತು.. ಆದರೆ ಇದೀಗ ಇವರು ಮತ್ತೆ ಭಾರತಕ್ಕೆ ಬರಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.. : ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುದ್ದಿಯಲ್ಲಿರುವ ಹೆಸರು. ಕೆಲ ದಿನಗಳ ಹಿಂದೆ ಲಂಡನ್‌ನಲ್ಲಿ ಅನುಷ್ಕಾ ಶರ್ಮಾ ಮಗುವಿಗೆ ಜನ್ಮ ನೀಡಿದ್ದರು. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಗಂಡು ಮಗುವಿನ ಆಗಮನವನ್ನು ತಿಳಿಸುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಮಗನಿಗೆ ಅಕಾಯ್ ಎಂದು ಹೆಸರಿಟ್ಟಿದ್ದಾರೆ. ಸದ್ಯ ಅನುಷ್ಕಾ ಶರ್ಮಾ ತಮ್ಮ ಕುಟುಂಬದೊಂದಿಗೆ ಲಂಡನ್‌ನಲ್ಲಿದ್ದಾರೆ. ವಿರಾಟ್ ಕೊಹ್ಲಿ ಟಿ20 ಪಂದ್ಯಕ್ಕಾಗಿ ಭಾರತದಲ್ಲಿದ್ದರು.. ಆದರೆ ಅವರು ಪಂದ್ಯ ಮುಗಿದ ದಿನದ ರಾತ್ರಿಯೇ ಲಂಡನ್‌ಗೆ ಹಿಂತಿರುಗಿದರು. ವಿರಾಟ್ ಮತ್ತು ಅನುಷ್ಕಾ ತಮ್ಮ ಕುಟುಂಬದೊಂದಿಗೆ ವಿಶೇಷ ಸಮಯವನ್ನು ಕಳೆಯುತ್ತಿದ್ದಾರೆ. ಇದನ್ನೂ ಓದಿ- ಇದೀಗ ಅನುಷ್ಕಾ ಶರ್ಮಾ ಅವರು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್ ನಂತರ, ಅನುಷ್ಕಾ ಶರ್ಮಾ ಭಾರತಕ್ಕೆ ಬರುತ್ತಾರೆ ಎಂದು ಊಹಿಸಲಾಗಿದೆ. ಕಾರ್ಯಕ್ರಮವೊಂದಕ್ಕೆ ಅನುಷ್ಕಾ ಶರ್ಮಾ ಭಾರತಕ್ಕೆ ಆಗಮಿಸುತ್ತಿದ್ದಾರೆ. ಇನ್ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅನುಷ್ಕಾ ಶರ್ಮಾ, ನಾನು ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಬರೆದಿದ್ದಾರೆ. ಅನುಷ್ಕಾ ಶರ್ಮಾ ಅವರ ಈ ಪೋಸ್ಟ್ ನೋಡಿ ಮುಂಬೈಗೆ ಬರಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದನ್ನೂ ಓದಿ- ಅನುಷ್ಕಾ ಶರ್ಮಾ ಪೋಸ್ಟ್ ಮಾಡಿರುವ ಕಾರ್ಯಕ್ರಮ ಮುಂಬೈನಲ್ಲಿ ನಡೆಯಲಿದೆ. ಅಕಾಯ್ ಜನನದ ನಂತರ ಅನುಷ್ಕಾ ಶರ್ಮಾ ಒಮ್ಮೆ ಮುಂಬೈಗೆ ಬಂದಿದ್ದರು. ಆದರೆ ಸ್ವಲ್ಪ ಸಮಯದ ನಂತರ ಮತ್ತೆ ಲಂಡನ್‌ಗೆ ತೆರಳಿದ್ದರು.. ಈಗ ಅಭಿಮಾನಿಗಳು ಅನುಷ್ಕಾ ಶರ್ಮಾ ಭಾರತಕ್ಕೆ ಬರುತ್ತಾರಾ ಅಥವಾ ಲಂಡನ್‌ನಲ್ಲಿಯೇ ಇರುತ್ತಾರಾ ಎಂದು ಕೇಳುತ್ತಿದ್ದಾರೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಶಾಶ್ವತವಾಗಿ ವಿದೇಶಕ್ಕೆ ಶಿಫ್ಟ್ ಆಗುತ್ತಾರೆ ಎಂದು ನಿರಂತರವಾಗಿ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಅನುಷ್ಕಾ ಶರ್ಮಾ ಅಥವಾ ವಿರಾಟ್ ಕೊಹ್ಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...