: ರಾಜ್‌ಕುಮಾರ್‌ ಕೊನೆಯ ಆಸೆ ಏನಿತ್ತು ಗೊತ್ತೇ... ಕೊನೆಗೂ ಅದು ಈಡೇರಲೇ ಇಲ್ಲ ! : ರಾಜ್‌ಕುಮಾರ್‌ ಮೂಲತಃ ಗಾಜನೂರಿನವರು. ಕನ್ನಡ ಚಿತ್ರರಂಗದಲ್ಲಿ ಅಣ್ಣಾವರು ಎಂದೇ ಖ್ಯಾತಿ ಪಡೆದ ಡಾ.ರಾಜ್‌ಕುಮಾರ್‌ ಅವರ ಆ ಒಂದು ಆಸೆ ಕೊನೆಗೂ ಈಡೇರಲೆ ಇಲ್ಲ ಬೆಂಗಳೂರು:ಕನ್ನಡ ಚಿತ್ರರಂಗ ಕಂಡ ಮೇರು ನಟ ಡಾ.ರಾಜ್‌ಕುಮಾರ್‌. ʻವರನಟʼ ಎಂದೇ ಖ್ಯಾತರಾದ ಡಾ.ರಾಜ್‌ಕುಮಾರ್‌ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕೊನೆಯ ಉಸಿರು ಇರುವವರೆಗೂ ಕನ್ನಡ ಪ್ರೇಮ ಮೆರೆದವರು. ಡಾ.ರಾಜ್‌ಕುಮಾರ್‌ ಅನೇಕರಿಗೆ ಮಾದರಿ. ಡಾ.ರಾಜ್‌ಕುಮಾರ್‌ ಅವರ ಕೊನೆಯ ಆಸೆ ಒಂದಿತ್ತು. ಆದರೆ ಆ ಆಸೆ ಕೊನೆಗೂ ಈಡೇರಲೇ ಇಲ್ಲ. ಹಳ್ಳಿಯ ಹಿನ್ನೆಲೆಯಿಂದ ಬಂದ ಡಾ.ರಾಜ್‌ಕುಮಾರ್‌, ನಾಟಕಗಳಲ್ಲಿ ಪಾತ್ರ ಹಾಕುವ ಮೂಲಕ ಬಣ್ಣ ಹಚ್ಚಿದವರು. ನಾಟಕವಿಲ್ಲದ ಸಮಯದಲ್ಲಿ ಕೃಷಿ ಕೆಲಸ ಮಾಡುತ್ತಿದ್ದರು, ದನ ಕಾಯುತ್ತಿದ್ದರು. ಕೃಷಿಯ ಬಗ್ಗೆ ಡಾ.ರಾಜ್‌ಕುಮಾರ್‌ ಅಪಾರ ಆಸಕ್ತಿ ಹೊಂದಿದ್ದರು. ಆದರೆ ಸಿನಿರಂಗದಲ್ಲಿ ಅವರಿಗೆ ಅವಕಾಶಗಳು ಬರಲು ಶುರುವಾಗಿದ್ದವು. ಸಿನಿಮಾ ರಂಗದಲ್ಲಿ ತೊಡಗಿಕೊಂಡ ಬಳಿಕ ಕೃಷಿ ಮಾಡಲು ಸಾಧ್ಯವೇ ಆಗಲಿಲ್ಲ. ಇದನ್ನೂ ಓದಿ: ಡಾ.ರಾಜ್‌ಕುಮಾರ್‌ ಒಂದು ಸಮಯದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. ಸಣ್ಣವನಿದ್ದಾಗ ಕಾಡಿಗೆ ಹೋಗುತ್ತಿದ್ದೆ. ಕುರಿ ಮರಿ, ಹಸುಗಳನ್ನು ಮೇಯಿಸುತ್ತಿದ್ದೆ. ನನಗೆ ಸಿನಿಮಾ ವೃತ್ತಿ ಬಿಟ್ಟು ತೃಪ್ತಿ ಕೊಡುವ ಕೆಲಸವೆಂದರೆ ಅದು ಕೃಷಿ ಎಂದಿದ್ದರು. ಕೃಷಿಕನಾಗಬೇಕು.. ಭೂಮಿಯಲ್ಲಿ ದುಡಿಯಬೇಕು ಎಂಬುದು ನನ್ನ ಕೊನೆಯ ಆಸೆ. ಸಣ್ಣ ವಯಸ್ಸಿನಿಂದ ಈ ಆಸೆ ನನಗಿದೆ ಎಂದಿದ್ದರು. ಆದರೆ ರಾಜ್‌ಕುಮಾರ್‌ ಅವರಿಗೆ ಕೊನೆಯವರೆಗೂ ಈ ಆಸೆ ಈಡೇರಲೇ ಇಲ್ಲ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...