ರಕ್ತಸಿಕ್ತವಾಗಿ ಮಂಡಿಯೂರಿ ಪ್ಲೀಸ್‌.. ಬಿಟ್ಬಿಡಿ ಅಂದ್ರೂ ಬಿಡ್ಲಿಲ್ಲ ಡಿ ಗ್ಯಾಂಗ್‌..! ರೇಣುಕಾಸ್ವಾಮಿ ಹತ್ಯೆಗೆ ಸಾಕ್ಷಿ ಈ ಫೋಟೋಸ್‌ ಎಫ್ಎಸ್ಎಲ್ ವರದಿಯಲ್ಲಿ ಆರೋಪಿಗಳಾದ ಪ್ರದೋಶ್ ಹಾಗೂ ವಿನಯ್ ಮೊಬೈಲ್ ನಲ್ಲಿ ರಕ್ತಸಿಕ್ತವಾಗಿರುವ ನಾಲ್ಕರಿಂದ ಐದು ಫೋಟೊಗಳು ರಿಟ್ರೀವ್ ಆಗಿವೆ ಎನ್ನಲಾಗ್ತಿದೆ... ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.. ಬೆಂಗಳೂರು :ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಪೊಲೀಸರು ಕಲೆಕ್ಟ್ ಮಾಡಿರುವ ಸಾಕ್ಷಿಗಳು ಕಂಟಕ ತಂದೊಡ್ಡಿವೆ. ಅದರಲ್ಲೂ ಎಫ್ಎಸ್ಎಲ್ ವರದಿಯಲ್ಲಿ ಬಯಲಾಗಿರುವ ಸತ್ಯಗಳು ಪ್ರಕರಣದ ದಿಕ್ಕನ್ನೇ ಬದಲಿಸಿವೆ. ಆರೋಪಿಗಳ ಮೊಬೈಲ್ ನಲ್ಲಿ ಸಿಕ್ಕ ರೇಣುಕಾಸ್ವಾಮಿಯ ಫೋಟೊಗಳು ಹಂತಕರ ಕೃತ್ಯ ಹೇಗಿತ್ತು ಎಂಬುದನ್ನು ಸಾರಿ ಹೇಳುತ್ತಿವೆ. ಎಫ್ಎಸ್ಎಲ್ ವರದಿಯಲ್ಲಿ ಆರೋಪಿಗಳಾದ ಪ್ರದೋಶ್ ಹಾಗೂ ವಿನಯ್ ಮೊಬೈಲ್ ನಲ್ಲಿ ರಕ್ತಸಿಕ್ತವಾಗಿರುವ ನಾಲ್ಕರಿಂದ ಐದು ಫೋಟೊಗಳು ರಿಟ್ರೀವ್ ಆಗಿವೆ ಎನ್ನಲಾಗ್ತಿದೆ. ಇದನ್ನೂ ಓದಿ: ‌ಅದ್ರಲ್ಲಿ ರೇಣುಕಾಸ್ವಾಮಿ ಕೈ ಮುಗಿಯುತ್ತಿರುವ ಫೋಟೋಗಳು ಪತ್ತೆಯಾಗಿದ್ದು, ಪರಿಪರಿಯಾಗಿ ಬೇಡಿಕೊಂಡರು ಬಿಡದೆ ಮಾರಣಾಂತಿಕ ಹಲ್ಲೆ ಮಾಡಿ ಕೊಂದಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತಿದೆ. ಈ ಫೋಟೋ ರಹಸ್ಯವನ್ನು ಹೈದರಾಬಾದ್ ಎಫ್ ಎಸ್ ಎಲ್ ತಂಡ ರಿವೀಲ್ ಮಾಡಿದೆ. ಇದೇ ರೇಣುಕಾಸ್ವಾಮಿ ಕೊಲೆಗೆ ಮಹತ್ವದ ಸಾಕ್ಷಿಯಾಗಿದ್ದು 17 ಜನ ಆರೋಪಿಗಳಿಗೆ ಮತ್ತಷ್ಟು ಉರುಳಾಗಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...