ಪವಿತ್ರಾ ಅಲ್ಲ ರೇಣುಕಾಸ್ವಾಮಿ ಹತ್ಯೆಯಲ್ಲಿ ನಟ ದರ್ಶನ್‌ A1..! ಕೊಲೆ, ಸಾಕ್ಷಿ ನಾಶ, ಡೀಲ್‌ ಸೂತ್ರಧಾರನೇ ದಾಸ : ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಬಂಧಿಸಿ ಎ1 ಆರೋಪಿಯನ್ನಾಗಿ ಪವಿತ್ರಾಗೌಡರನ್ನ ಹೆಸರಿಸಲಾಗಿತ್ತು. ಆದರೆ ತನಿಖೆ ಮುಗಿದು ಚಾರ್ಜ್ ಶೀಟ್ ವೇಳೆ ದರ್ಶನ್ ಎ1 ಆರೋಪಿ ಮಾಡಲು ಅನೇಕ ಕಾರಣಗಳು ಸಹ ಇವೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.. :ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅಂದರ್ ಆಗಿರುವ ನಟ ದರ್ಶನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕೇಸಲ್ಲಿ ಎ2 ಆರೋಪಿಯಾಗಿರೋ ದರ್ಶನ್ ಎ1 ಆರೋಪಿ ಸ್ಥಾನಕ್ಕೆ ದರ್ಶನ್‌ಗೆ ಚಾರ್ಜ್ ಶೀಟ್ ಬಡ್ತಿ ನೀಡಲು ಪೊಲೀಸರು ತಯಾರಿ ನಡೆಸಿದ್ದಾರೆ. ಕೊಲೆ ಕೇಸಿನ ತನಿಖೆ ವೇಳೆ ದರ್ಶನ್ ಎ2 ಆರೋಪಿಯನ್ನಾಗಿ ಮಾಡಲಾಗಿತ್ತು. ಎ1 ಆರೋಪಿಯನ್ನಾಗಿ ಪವಿತ್ರಾಗೌಡರನ್ನ ಹೆಸರಿಸಲಾಗಿತ್ತು. ಆದರೆ ತನಿಖೆ ಮುಗಿದು ಚಾರ್ಜ್ ಶೀಟ್ ವೇಳೆ ದರ್ಶನ್ ಎ1 ಆರೋಪಿ ಮಾಡಲು ಅನೇಕ ಕಾರಣಗಳು ಸಹ ಇವೆ. ದರ್ಶನ್‌ ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್ ಮಾಡಲು ಸೂಚನೆ ನೀಡಿದ್ದು ಖಾತ್ರಿಯಾಗಿದೆ. ಇದನ್ನೂ ಓದಿ: ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರನಿಗೆ ರೇಣುಕಾಸ್ವಾಮಿಯನ್ನು ಅಪಹರಿಸಲು ಡೀಲ್ ಮಾಡಿದ್ದು. ಬಳಿಕ ರೇಣುಕಾಸ್ವಾಮಿಯನ್ನ ಆರ್.ಆರ್ ನಗರದ ಪಟ್ಟಣಗೆರೆಯ ಶೆಡ್‌ಗೆ ಕರೆತರಲಾಗಿತ್ತು. ಸ್ವತಃ ಶೆಡ್ ನಲ್ಲಿ ದರ್ಶನ್‌ನಿಂದ ಬೆಲ್ಟ್ ಲಾಠಿ ಹಾಗೂ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿ ಸಿಕ್ಕ ಸಿಕ್ಕ ಕಡೆ ಒದ್ದಿರುವ ಬಗ್ಗೆ ಸಾಕ್ಷಿ ಇದೆ. ಇನ್ನೂ ರೇಣುಕಾಸ್ವಾಮಿ ಸಾವನ್ನಪ್ಪಿದ್ದ ಬಳಿಕ ಶವ ವಿಲೇವಾರಿಗೆ ಪ್ಲ್ಯಾನ್‌ ಮಾಡಿ ಪ್ರದೋಷ್ ಗೆ 30 ಲಕ್ಷ ಹಣವನ್ನು ದರ್ಶನ್ ಕೊಟ್ಟಿದ್ದ. ಕೊಲೆ ಮಾಡಿದ ಸ್ಪಾಟ್ ನಲ್ಲಿ ಸಿಸಿಟಿವಿ ಡಿವಿಆರ್ ನಲ್ಲಿನ ವೀಡಿಯೋ ಅಳಿಸಿ ಹಾಕಿ ಸಾಕ್ಷಿ ನಾಶದ ಯತ್ನ ಮಾಡಲು ಸೂಚನೆ ಕೊಟ್ಟ ಆರೋಪ ದರ್ಶನ್ ಮೇಲಿದೆ. ಇನ್ನೂ ಕೊಲೆ ಪ್ರಕರಣ ಪ್ರಮುಖ ಸೂತ್ರಧಾರನೆ ದರ್ಶನ್ ಆಗಿರೋದರಿಂದ ಎ1 ಆರೋಪಿ ಮಾಡಲು ಪೊಲೀಸರು ತಯಾರಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...