ʼಶೀಘ್ರದಲ್ಲೇ ಗುಡ್‌ ನ್ಯೂಸ್‌ ನೀಡುತ್ತೇನೆ..ʼ ನಾಗಚೈತನ್ಯ ನಿಶ್ಚಿತಾರ್ಥದ ಬೆನ್ನಲ್ಲೇ ಎರಡನೇ ಮದುವೆಗೆ ರೆಡಿಯಾದ್ರಾ ನಟಿ ಸಮಂತಾ?! : ಅಕ್ಕಿನೇನಿ ನಾಗ ಚೈತನ್ಯ ಜೊತೆಗಿನ ಸಮಂತಾ ಜೀವನ ಶಾಶ್ವತವಾಗಿ ಮುರಿದುಬಿದ್ದಿದೆ. ನಾಗ ಚೈತನ್ಯ ಸೋಭಿತಾ ಧೂಳಿಪಾಲ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. : ಇಲ್ಲಿಯವರೆಗೂ ಸಮಂತಾ ಮತ್ತು ಚೈತು ಒಂದಾಗುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಅಕ್ಕಿನೇನಿ ಮತ್ತು ಸಮಂತಾ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಈ ಬಗ್ಗೆ ಸಮಂತಾ ಅಧಿಕೃತವಾಗಿ ಎಲ್ಲಿಯೂ ಮಾತನಾಡಿಲ್ಲ. ಸದ್ಯ ವೆಬ್ ಸೀರೀಸ್ ಜೊತೆಗೆ ತಮ್ಮದೇ ಬ್ಯಾನರ್ ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಆಕೆಯ ಮೈಯೋಸಿಟಿಸ್ ಚಿಕಿತ್ಸೆಯು ಸಹ ಪೂರ್ಣಗೊಂಡಿದೆ. ಸ್ಟಾರ್ ಡೈರೆಕ್ಟರ್ ಜೊತೆ ಸಮಂತಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ, ಇಂತಹ ಸುದ್ದಿಗಳನ್ನು ನಂಬಬೇಡಿ ಎಂದು ಸಮಂತಾ ಆಪ್ತರು ಕೇಳಿಕೊಂಡಿದ್ದಾರೆ. ಶೋಭಿತಾ ಜೊತೆ ನಾಗ ಚೈತನ್ಯ ನಿಶ್ಚಿತಾರ್ಥ ಮಾಡಿಕೊಂಡ ಸಮಯದಲ್ಲಿ ಸಮಂತಾ ಯಾವ ಪೋಸ್ಟ್ ಹಾಕಿದರೂ ಅದರಲ್ಲಿ ಏನಾದ್ರೂ ಇರುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಇತ್ತೀಚೆಗಷ್ಟೇ ಸಮಂತಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ವಿಶೇಷ ಸುದ್ದಿಯೊಂದು ಬರುತ್ತಿದೆ ಎಂದು ಸ್ಟೋರಿ ಶೇರ್‌ ಮಾಡಿದ್ದಾರೆ... ಇದರಿಂದ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.. ಇದನ್ನೂ ಓದಿ- ಸದ್ಯ ಸಮಂತಾ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವವರು ಇದು ತಮ್ಮ ಹೊಸ ಸಿನಿಮಾದ ಬಗ್ಗೆ ಮಾತನಾಡುತ್ತಾರೆ ಎಂದಾದರೆ, ಇನ್ನು ಕೆಲವರು ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಮಾತನಾಡಲಿದ್ದಾರೆ ಎನ್ನುತ್ತಿದ್ದಾರೆ. ಮತ್ತೊಂದೆಡೆ ಸಮಂತಾ ಕೂಡ ನಾಗ ಚೈತನ್ಯ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರಾ? ಇದೇ ಆಕೆ ಹೇಳಲು ಹೊರಟಿರುವ ವಿಶೇಷ ಸುದ್ದಿಯೇ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಸಮಂತಾ ತಮ್ಮ ಹೊಸ ಸಿನಿಮಾದ ಬಗ್ಗೆ ಮಹತ್ವದ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದ್ದು, ಸುದ್ದಿಯ ಸಾರಾಂಶ. ಹಾಗಾದ್ರೆ ಯಾವುದು ನಿಜ ಎಂದು ತಿಳಿಯಲು ನಾವು ಕೆಲವು ಗಂಟೆಗಳ ಕಾಲ ಕಾಯಬೇಕಾಗಿದೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...