ಸೂಪರ್‌ ಸ್ಟಾರ್‌ ಜೊತೆ ಓಡಿ ಹೋಗಿ.. 12 ವರ್ಷದ ಬಳಿಕ ನಿರ್ದೇಶಕರನ್ನು ವರಿಸಿದ ಸ್ಟಾರ್‌ ನಟಿ ಬಿಂದಿಯಾ! ಈಗ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ? : ಬಿಂದಿಯಾ ಗೋಸ್ವಾಮಿ ಅವರು ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಪ್ರಸಿದ್ಧ ನಟಿಯಾಗಿದ್ದರು. ಈ ಮುದ್ದು ಮುಖದ ನಟಿ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಹಾಗಾದ್ರೆ ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? :ನಟಿ ಬಿಂದಿಯಾ ಎರಡು ಬಾರಿ ಮದುವೆಯಾಗಿದ್ದಾರೆ. ಮೊದಲಿಗೆ ಬಾಲಿವುಡ್ ಸೂಪರ್‌ಹಿಟ್ ಹೀರೋ ವಿನೋದ್ ಮೆಹ್ರಾ ಅವರನ್ನು ವಿವಾಹವಾದರು. ಆದರೆ ಮದುವೆಯಾದ ನಾಲ್ಕು ವರ್ಷಗಳ ನಂತರ ಅವರು ಬೇರೆಯಾಗಲು ನಿರ್ಧರಿಸಿದರು. ಬಳಿಕ ಪ್ರಸಿದ್ಧ ಬಾಲಿವುಡ್ ನಿರ್ದೇಶಕ ಜ್ಯೋತಿ ಪ್ರಕಾಶ್ ದತ್ ಅಕಾ ಜೆಪಿ ದತ್ ಅವರೊಂದಿಗೆ ಎರಡನೇ ಬಾರಿಗೆ ವಿವಾಹವಾದರು. ಅವರಿಗೆ ನಿಧಿ ಮತ್ತು ಸಿದ್ಧಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 14 ನೇ ವಯಸ್ಸಿನಲ್ಲಿ ಫಿಲ್ಮ್‌ಫೇರ್ ಮ್ಯಾಗಜೀನ್‌ನ ಮುಖಪುಟದಲ್ಲಿ ಅವರ ಫೋಟೋ ಕಾಣಿಸಿಕೊಂಡ ನಂತರ ಒಂದರ ನಂತರ ಒಂದರಂತೆ ಹಿಟ್ ನೀಡಿದ ನಟಿ ಬಿಂದಿಯಾ ವೃತ್ತಿಪರ ಜೀವನಕ್ಕಿಂತ ತನ್ನ ವೈಯಕ್ತಿಕ ಜೀವನಕ್ಕಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ.. ಏಕೆಂದರೇ ವಿನೋದ್ ಮೆಹ್ರಾ ಅವರ ಎರಡನೇ ಪತ್ನಿ ಬಿಂದಿಯಾ ಗೋಸ್ವಾಮಿ ವಿನೋದ್ ಮೆಹ್ರಾ ಅವರನ್ನು ತೊರೆದು ಜೆಪಿ ದತ್ ಅವರೊಂದಿಗೆ ಓಡಿಹೋಗಿದ್ದರು.. ಇದನ್ನೂ ಓದಿ- ಬಿಂದಿಯಾ ಗೋಸ್ವಾಮಿ ರಾಜಸ್ಥಾನದ ಭರತ್‌ಪುರದಲ್ಲಿ ಜನಿಸಿದರು, ತಂದೆ ಹೆಸರು ವೇಣು ಗೋಪಾಲ್ ಗೋಸ್ವಾಮಿ ಮತ್ತು ತಾಯಿ ಹೆಸರು ಡಾಲಿ, ಅವರು ಕ್ಯಾಥೋಲಿಕ್ ಆಗಿದ್ದರು. ಕೆಲವು ವರದಿಗಳು ಬಿಂದಿಯಾ ಅವರ ತಂದೆ 7 ಮದುವೆಯಾಗಿದ್ದಾರೆ ಎನ್ನಲಾಗಿದೆ. ಬಿಂದಿಯಾ ಅವರ ಮೊದಲ ಚಿತ್ರ ಜೀವನ ಜ್ಯೋತಿ 1976 ರಲ್ಲಿ ಬಿಡುಗಡೆಯಾಯಿತು.. ವಿಜಯ್ ಅರೋರಾ ಇವರೊಂದಿಗೆ ನಟಿಸಿದರು. ಚಿತ್ರವು ಹಿಟ್ ಆಗದಿದ್ದರೂ, ಉತ್ತಮ ವಿಮರ್ಶೆ ಪಡೆದಿತ್ತು.. ನಂತರ ಅವರು 1978 ರಲ್ಲಿ ' ' ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರವು ಹಿಟ್ ಆಗಿ ಬಿಂದಿಯಾ ಬಾಲಿವುಡ್‌ನಲ್ಲಿ ಜನಪ್ರಿಯತೆಯನ್ನು ಗಳಿಸಿದರು.. ಅದರ ನಂತರ ಬಿಂದಿಯಾ ವಿನೋದ್ ಮೆಹ್ರಾ ಅವರೊಂದಿಗೆ ಅನೇಕ ಸಿನಿಮಾಗಳನ್ನು ಮಾಡಿದರು. ಆದರೆ ಅವರಿಬ್ಬರ ಮಧ್ಯದ ಸ್ನೇಹ ಯಾವಾಗ ಪ್ರೀತಿಗೆ ತಿರುಗಿತು ಎಂದು ಯಾರಿಗೂ ತಿಳಿದಿಲ್ಲ. ವಿನೋದ್ ತನ್ನ ಮೊದಲ ಹೆಂಡತಿಗೆ ಮೋಸ ಮಾಡಿ ಬಿಂದಿಯಾಳೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸುತ್ತಾನೆ. ಹತ್ತಿರದ ಸಂಬಂಧಿ ಪ್ರಕಾರ, ಅವರಿಬ್ಬರೂ 1980 ರಲ್ಲಿ ರಹಸ್ಯವಾಗಿ ವಿವಾಹವಾದರು. ಶೂಟಿಂಗ್ ನೆಪದಲ್ಲಿ ಒಮ್ಮೊಮ್ಮೆ ಹೊಟೇಲ್ ಗಳಲ್ಲಿ ಮತ್ತೆ ಕೆಲವೆಡೆ ಗುಟ್ಟಾಗಿ ವಾಸ ಮಾಡುತ್ತಿದ್ದರು. ಬಳಿಕ ವಿನೋದ್ ಮೆಹ್ರಾ ತನ್ನ ಮೊದಲ ಹೆಂಡತಿಗೆ ವಿಚ್ಛೇದನ ನೀಡಿದರು.. ಆದರೆ ಆಗಲೇ ನಟಿ ಬಿಂದಿಯಾ ಅವರ ಜೀವನದಲ್ಲಿ ಖ್ಯಾತ ನಿರ್ದೇಶಕ ಜೆಪಿ ದತ್ ಬಂದರು. ಬಿಂದಿಯಾ ತಮ್ಮ ವೈಯಕ್ತಿಕ ಸಮಸ್ಯೆಗಳಿಂದ ಸಂಕಷ್ಟದಲ್ಲಿದ್ದಾಗ, ಜೆಪಿ ದತ್ ಅವರ ಬೆಂಬಲಕ್ಕೆ ನಿಂತರು. ನಂತರ ಬಿಂದಿಯಾ ಕ್ರಮೇಣ ಜೆಪಿ ದತ್ ಅವರೊಂದಿಗೆ ಕ್ಲೋಸ್‌ ಆಗಿ.. ವಿನೋದ್ ಮೆಹ್ರಾ ತನ್ನ ಮೊದಲ ಹೆಂಡತಿಗೆ ವಿಶ್ವಾಸದ್ರೋಹಿಯಾಗಿದ್ದಂತೆ, ಬಿಂದಿಯಾ ಕೂಡ ವಿನೋದ್‌ಗೆ ವಿಶ್ವಾಸದ್ರೋಹಿ ಆದರು ಎಂದು ವದಂತಿಗಳಿವೆ. ಇದನ್ನೂ ಓದಿ- ಆದರೆ ಅವರ ಮನೆಯವರು ಮದುವೆಗೆ ಒಪ್ಪಿರಲಿಲ್ಲ.. ಇದಕ್ಕೆ ಮುಖ್ಯ ಕಾರಣ ಜೆಪಿ ದತ್ ಅವರ ವಯಸ್ಸು. ಬಿಂದಿಯಾ ತನ್ನ ಕುಟುಂಬದ ವಿರುದ್ಧವಾಗಿ ಎರಡನೇ ಬಾರಿಗೆ ರಹಸ್ಯವಾಗಿ ವಿವಾಹವಾದರು. ಮದುವೆಯಾದ ಸ್ವಲ್ಪ ಸಮಯದ ನಂತರ, ಬಿಂದಿಯಾ ನಟನೆಯನ್ನು ತೊರೆದರು. ಅವರು ಸಿನಿಮಾ ನಿರ್ದೇಶನದಲ್ಲಿ ಪತಿಗೆ ಸಹಾಯ ಮಾಡಲು ಪ್ರಾರಂಭಿಸಿದರು. ಇದರೊಂದಿಗೆ ಕಾಸ್ಟ್ಯೂಮ್ ಡಿಸೈನಿಂಗ್ ಕೆಲಸ ಆರಂಭಿಸಿದರು. ರಾಣಿ ಮುಖರ್ಜಿ, ಐಶ್ವರ್ಯ ರೈ, ಕರೀನಾ ಕಪೂರ್ ಮುಂತಾದ ಅನೇಕ ನಟಿಯರ ಬಟ್ಟೆಗಳನ್ನು ಡಿಸೈನ್‌ ಮಾಡಿದ್ದಾರೆ.. ಪ್ರಸ್ತುತ, ಬಿಂದಿಯಾ ತನ್ನ ಕುಟುಂಬದೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ ಎನ್ನುವ ವರದಿಗಳಿವೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...