ಆ ನಿರ್ದೇಶಕ ಹೀರೊಯಿನ್ ನೋಡಿ ಹಲ್ಲು ಕಿಸಿತಿದ್ದ, ನನ್ನ ಕೆಟ್ಟ ಕೆಟ್ಟದಾಗಿ ಬೈತಿದ್ದ: ತೆಲುಗಿನಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಕನ್ನಡದ ಖ್ಯಾತ ನಟಿ ಶಾಕಿಂಗ್‌ ಹೇಳಿಕೆ : ತೆಲುಗಿನ ಖ್ಯಾತ ನಿರೂಪಕಿ ಮತ್ತು ನಟಿ ಸೌಮ್ಯ ಎಂಬವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಲ್ಲಿ ತನಗಾದ ಕೆಟ್ಟ ಅನುಭವಗಳ ಬಗ್ಗೆ ಬಹಿರಂಗಪಡಿಸಿದ್ದಾರೆ. :ಕರ್ನಾಟಕದ ಅನೇಕ ನಟ-ನಟಿಯರು ಬೇರೆ ಬೇರೆ ಭಾಷೆಗಳಲ್ಲಿ ಅಭಿನಯಿಸಿ ಶೈನ್‌ ಆಗುತ್ತಿರುವುದು ಗೊತ್ತೇ ಇದೆ. ಅಂತೆಯೇ ಅನೇಕ ಬೇರೆ ಭಾಷೆಯಲ್ಲಿ ಮಿಂಚಿರುವ ಸೆಲೆಬ್ರಿಟಿಗಳು ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಅವಕಾಶ ಅರಸಿ ಬರುತ್ತಿರುವುದು ನಮಗೆಲ್ಲಾ ತಿಳಿದೇ ಇದೆ. ಆದರೆ ಕನ್ನಡದಲ್ಲೇ ಬೆಳೆದ ನಟಿಯೊಬ್ಬರು, ಧಾರಾವಾಹಿ ಶೂಟಿಂಗ್‌ ಸಮಯದಲ್ಲಿ ನಿರ್ಮಾಪಕ ಮತ್ತು ನಿರ್ದೇಶಕರು ತಮಗೆ ನೀಡಿದ ಸಂಕಷ್ಟಗಳ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ತೆಲುಗಿನ ಖ್ಯಾತ ನಿರೂಪಕಿ ಮತ್ತು ನಟಿ ಸೌಮ್ಯ ಎಂಬವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಲ್ಲಿ ತನಗಾದ ಕೆಟ್ಟ ಅನುಭವಗಳ ಬಗ್ಗೆ ಬಹಿರಂಗಪಡಿಸಿದ್ದಾರೆ. "ಒಬ್ಬ ನಿರ್ಮಾಪಕ ಹೀರೋಯಿನ್‌ʼಗೋಸ್ಕರ ಅವರ ಮನೆಯಿಂದ ಊಟ ತರುತ್ತಿದ್ದರು. ಅವರ ಬಳಿ ಹೋಗಿ, ನಿನಗೋಸ್ಕರ ಬಾಕ್ಸ್‌ ತಂದಿದ್ದೇನೆ, ಅಲ್ಲಿ ಇಟ್ಟಿದ್ದೇನೆ, ನೀನು ತಿನ್ನಲೇಬೇಕು ಎಂದೆಲ್ಲಾ ಹೇಳುತ್ತಿದ್ದರು. ಆದ್ರೆ ಆ ಬಾಕ್ಸ್‌ ಅನ್ನು ಪ್ರೊಡಕ್ಷನ್‌ ನೀಡುವ ಫುಡ್‌ ಪಕ್ಕದಲ್ಲಿಯೇ ಇಟ್ಟಿದ್ರು. ನಾನು ಊಟ ಮಾಡುವಾಗ ತಪ್ಪಾಗಿ ಅದರಲ್ಲಿದ್ದ ಸಿಹಿತಿಂಡಿಯನ್ನು ಒಂದು ಸ್ಪೂನ್ ನನ್ನ ಪ್ಲೇಟ್‌ʼಗೆ ಬಡಿಸಿಕೊಂಡೆ. ಆದ್ರೆ ಅದನ್ನು ನೋಡಿದ ಅವರು, ಅದು ಹೀರೋಯಿನ್‌ʼಗೆ ತಂದಿರೋದು, ದರಿದ್ರದವಳೇ ನೀನೇಕೆ ತಿಂದೆ ಎಂದು ಕೆಟ್ಟದಾಗಿ ಬೈದಿದ್ದರು" ಅಂತಾ ನಟಿ ಸೌಮ್ಯ ಹೇಳಿದ್ದಾರೆ. ಮತ್ತಷ್ಟು ಹೇಳಿಕೆ ನೀಡಿದ ಅವರು, "ಇಂತಹ ಕೆಟ್ಟ ಕೆಟ್ಟ ಅನುಭವಗಳು ಅಲ್ಲಿ ತುಂಬಾ ನಡೆದಿವೆ. ತುಂಬಾ ಪಕ್ಷಪಾತ ಮಾಡುತ್ತಿದ್ದರು. ನಿರ್ದೇಶಕ ಕೂಡ ನಾವೇನಾದ್ರೂ ತಪ್ಪು ಮಾಡಿದ್ರೆ ತುಂಬಾ ಕೆಟ್ಟದಾಗಿ ಬೈಯುತ್ತಿದ್ದರು. ಆದ್ರೆ ಹೀರೋಯಿನ್‌ ತಪ್ಪು ಮಾಡಿದಾಗ ಹಲ್ಲು ಕಿಸಿಯುತ್ತಾ ಮತ್ತೊಂದು ಸರಿ ಟೇಕ್‌ ತಗೊಳ್ಳೋಣ, ಎಂದೆಲ್ಲಾ ಹೇಳುತ್ತಿದ್ದರು. ನಮ್ಮನ್ನು ಅಲ್ಲಿ ಕರೆಯುವ ವಿಧಾನವೇ ತುಂಬಾ ಬೇರೆಯದ್ದೇ... ಶಾಟ್‌ ರೆಡಿ ಎಂದು ಹೀರೋಯಿನ್‌ ಅನ್ನು ಕರೆಯುವ ವಿಧಾನವೇ ಬೇರೆ" ಎಂದು ಹೇಳುತ್ತಾ ನಟಿ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಆದರೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದ್ದೇ ತಡ, ಕನ್ನಡ ಚಿತ್ರರಂಗದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಈ ನಟಿ ವಿರುದ್ಧ ಅನೇಕರು ಉರಿದುಬಿದ್ದಿದ್ದಾರೆ. ಇನ್ನೂ ಕೆಲವರು ಆಕೆಯ ಮಾತಲ್ಲಿ ಸತ್ಯ ಇದೆ ಎಂದು ವಾದಿಸುತ್ತಿದ್ದಾರೆ. ವಿಡಿಯೋ ಲಿಂಕ್‌ ಇಲ್ಲಿದೆ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...