ನನ್ನಲ್ಲಿರುವ ಈ ಸಮಸ್ಯೆಯಿಂದಲೇ ಎಲ್ಲಾ ಹುಡುಗಿಯರು ಬಿಟ್ಟು ಹೋಗುತ್ತಿರುವುದು! ಸತ್ಯ ಒಪ್ಪಿಕೊಂಡ ಸಲ್ಮಾನ್ ಖಾನ್ ತನ್ನ ಗರ್ಲ್ ಫ್ರೆಂಡ್ ಗಳು ಯಾರೂ ತನ್ನೊಂದಿಗೆ ಯಾಕೆ ನಿಲ್ಲುತ್ತಿಲ್ಲ, ತಾನಿ ಇನ್ನೂ ಯಾಕೆ ಮದುವೆಯಾಗದೆ ಉಳಿದಿದ್ದೇನೆ ಎನ್ನುವುದಕ್ಕೆ ಖುದ್ದು ಸಲ್ಮಾನ್ ಉತ್ತರಿಸಿದ್ದಾರೆ. ಮುಂಬಯಿ :ಸಲ್ಮಾನ್ ಖಾನ್ ಬಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್ ಎಂದೇ ಹೆಸರು ಪಡೆದವರು.ಸಲ್ಮಾನ್ ಖಾನ್ ಗೆ ಪ್ರತಿಯೊಂದು ಕಾರ್ಯಕ್ರಮದಲ್ಲಿ ಎದುರಾಗುವ ಪ್ರಶ್ನೆ ಮದುವೆ ಯಾವಾಗ? ಪ್ರತಿ ಬಾರಿ ಈ ಪ್ರಶ್ನೆ ಎದುರಾದಾಗಲೂ ಸಲ್ಮಾನ್ ನಕ್ಕು ಆ ಪ್ರಶ್ನೆಯಿಂದ ಜಾರಿಕೊಳ್ಳುತ್ತಾರೆ. ಇನ್ನೂ ಮದುವೆಯಾಗಿಲ್ಲ ಎಂದರೆ ಸಲ್ಮಾನ್ ಗೆ ಮದುವೆ ಮೇಲೆ ಆಸಕ್ತಿ ಇಲ್ಲ ಎಂದಲ್ಲ.ಪಟ್ಟಿ ಬಹಳ ದೊಡ್ಡದಿದೆ.ಖ್ಯಾತ ನಟಿಯರೊಂದಿಗೆ ಸಲ್ಮಾನ್ ಹೆಸರು ಥಳಕು ಹಾಕಿಕೊಂಡಿದೆ. ಕೆಲವು ನಟಿಯರ ಜೊತೆ ಇನ್ನೇನು ಮದುವೆ ಪಕ್ಕಾ ಎನ್ನುವ ಮಾತು ಕೂಡಾ ಬಾಲಿವುಡ್ ಅಂಗಳದಲ್ಲಿ ಜೋರಾಗಿಯೇ ಕೇಳಿಬಂದಿತ್ತು.ಇನ್ನೊಂದು ಮೂಲದ ಪ್ರಕಾರ ಒಂದು ಕಾಲದಲ್ಲಿ ಸಲ್ಮಾನ ಮದುವೆಯ ಆಮಂತ್ರಣ ಪತ್ರಿಕೆ ಕೂಡಾ ಪ್ರಿಂಟ್ ಮಾಡಿಸಿದ್ದರಂತೆ.ಆದರೆ ಕೊನೆ ಘಳಿಗೆಯಲ್ಲಿ ಮದುವೆ ನಿರ್ಧಾರ ಬದಲಾಗಿದೆ.ಈಗ ವಯಸ್ಸು 58 ಆದರೂ ಗರ್ಲ್ ಫ್ರೆಂಡ್ಸ್, ಲವರ್ ಗರ್ಲ್ಸ್ ಇದ್ದರೂ ಸಲ್ಮಾನ್ ಇಂದಿಗೂ ಒಂಟಿ. ಇದನ್ನೂ ಓದಿ : ಕಟಕಟೆಯಲ್ಲಿ ಹೊರ ಬಂದ ಸತ್ಯ :ತಾನು ಯಾಕೆ ಇನ್ನೂ ಮದುವೆಯಾಗಿಲ್ಲ ಎನ್ನುವುದಕ್ಕೆ ಖುದ್ದು ಸಲ್ಮಾನ್ ಖಾಸಗಿ ವಾಹಿನಿಯೊಂದರ ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಉತ್ತರಿಸಿದ್ದಾರೆ. ಮದುವೆಯಾಗುವ ಎಲ್ಲಾ ಇರಾದೆ ಇತ್ತು.ಆದರೆ ಯಾಕೋ ಮದುವೆಯಾಗಬೇಕು ಅಂದುಕೊಂಡವರೆಲ್ಲಾ ಒಬ್ಬೊಬ್ಬರೇ ಬಿಟ್ಟು ಹೋಗುವುದಕ್ಕೆ ಆರಂಭಿಸಿದರು. ಮೊದಲನೇ ಹುಡುಗಿ ಹೋದಾಗ ತಪ್ಪು ಆಕೆಯದ್ದೇ ಅಂದುಕೊಂಡೆ. ಎರಡನೇ ಹುಡುಗಿ ಬಿಟ್ಟು ಹೋದಾಗಲೂ ಕೊರತೆ ಇರುವುದು ಆಕೆಯಲ್ಲಿಯೇ ಅಂದುಕೊಂಡೆ. ಮೂರನೆ, ನಾಲ್ಕನೇ ಹುಡುಗಿ ಕೂಡಾ ಹೀಗೆ ಮಾಡಿದಾಗ ಯೋಚನೆ 60 *40 ಕ್ಕೆ ಬಂತು. ಆದರೆ ಇದು ಮುಂದುವರೆದುಕೊಂಡು ಹೋದಾಗ ಕೊರತೆ ಇರುವುದು ನನ್ನಲ್ಲಿಯೇ ಎನ್ನುವುದು ಸಾಬೀತಾಯಿತು ಎಂದಿದ್ದಾರೆ. ಬಹುಶಃನಾನು ಮುಟ್ಟುತ್ತಿಲ್ಲ.ಅವರು ಬಯಸುವ ಜೀವನ ನಾನು ಕೊಡಬಲ್ಲೇನಾ ಎನ್ನುವ ಬಗ್ಗೆ ನನಗೆ ಅಂಜಿಕೆ ಇದೆ.ಹಾಗಾಗಿ ನಾನೇ ಅವರ ನೀರೀಕ್ಷೆಯ ಮಟ್ಟ ತಲುಪಿಲ್ಲ ಎನ್ನುವ ಸತ್ಯವನ್ನು ನಾನು ಒಪ್ಪಿಕೊಂಡಿದ್ದೇನೆ ಎಂದು ಯಾವ ಅಳುಕೂ ಇಲ್ಲದೆ ಸಲ್ಮಾನ್ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ : ಇದರ ಜೊತೆಗೆ ನನಗೆ ಮದುವೆಯಾಗದಿದ್ದರೂ ಮಗು ಹೊಂದುವ ಆಸೆ ಇತ್ತು.ಆದರೆ ಬದಲಾದ ಕಾನೂನು ವ್ಯವಸ್ಥೆಯಿಂದ ಅದು ಸ್ವಲ್ಪ ಕಷ್ಟವಾಯಿತು.ಮಕ್ಕಳೆಂದರೆ ನನಗೆ ತುಂಬಾ ಇಷ್ಟ.ಆದರೆ ಏನು ಮಾಡುವುದು ಈಗ ಮಗು ಬೇಕು ಎಂದರೆ ತಾಯಿ ಕೂಡಾ ಜೊತೆಯಲ್ಲಿ ಬರುತ್ತಾಳೆ ಎಂದು ಹೇಳುತ್ತಾ ಜೋರಾಗಿ ನಕ್ಕಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...