2 ಚಿತ್ರದ ಶೂಟಿಂಗ್ ವೇಳೆ ನಟ ಜ್ಯೂನಿಯರ್ NTRಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು! 2 : ಆಕ್ಷನ್ ದೃಶ್ಯಕ್ಕಾಗಿ ಜೂನಿಯರ್ ತಯಾರಿ ನಡೆಸುತ್ತಿದ್ದಾಗ ಅವರ ಕೈಗಳಿಗೆ ಗಾಯವಾಗಿದೆ. ಹೀಗಾಗಿ ೨ ತಿಂಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ. ವರದಿಗಳ ಪ್ರಕಾರ, ಶೂಟಿಂಗ್‌ಅನ್ನು ಅಕ್ಟೋಬರ್‌ಗೆ ಮುಂದೂಡಲಾಗಿದೆಯಂತೆ. 2 :ಬಹುನಿರೀಕ್ಷಿತ 2 ಚಿತ್ರದ ಶೂಟಿಂಗ್ ವೇಳೆ ನಟ ಜ್ಯೂನಿಯರ್ NTRಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ. ಜೂನಿಯರ್ ಮತ್ತು ಹೃತಿಕ್ ರೋಷನ್ ಸೀಕ್ವೆಲ್ 2ನಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ. ಸದ್ಯ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಮಧ್ಯೆಅವರು ಸೆಟ್‌ನಲ್ಲಿ ಗಾಯಗೊಂಡಿದ್ದು, ಅವರಿಗೆ ವೈದ್ಯರು 2 ತಿಂಗಳ ಬೆಡ್ ರೆಸ್ಟ್‌ಗೆ ಸೂಚಿಸಿದ್ದಾರೆಂದು ತಿಳಿದುಬಂದಿದೆ. ಈ ಹಿನ್ನೆಲೆ ಜ್ಯೂನಿಯರ್ ಭಾಗದ ಚಿತ್ರೀಕರಣ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: ಆಕ್ಷನ್ ದೃಶ್ಯಕ್ಕಾಗಿ ಜೂನಿಯರ್ ತಯಾರಿ ನಡೆಸುತ್ತಿದ್ದಾಗ ಅವರ ಕೈಗಳಿಗೆ ಗಾಯವಾಗಿದೆ. ಹೀಗಾಗಿ 2 ತಿಂಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ. ವರದಿಗಳ ಪ್ರಕಾರ, ಶೂಟಿಂಗ್‌ಅನ್ನು ಅಕ್ಟೋಬರ್‌ಗೆ ಮುಂದೂಡಲಾಗಿದೆಯಂತೆ. ಸುಮಾರು 200 ಕೋಟಿ ರೂ. ವೆಚ್ಚದಲ್ಲಿವನ್ನು ನಿರ್ಮಾಣ ಮಾಡಲಾಗುತ್ತಿದೆ. ಜೂನಿಯರ್ & ಹೃತಿಕ್ ರೋಷನ್ ಜೊತೆಗೆ ಜಾನ್ ಅಬ್ರಹಾಂ, ಕಿಯಾರಾ ಅಡ್ವಾಣಿ, ಶಬೀರ್ ಅಹ್ಲುವಾಲಿಯಾ & ಪಾರ್ಥ ಸಿದ್ಧಪುರ ಸೇರಿದಂತೆ ಹಲವರು ನಟಿಸಿದ್ದಾರೆ. ಅಯಾನ್ ಮುಖರ್ಜಿ ನಿರ್ದೇಶಿಸುತ್ತಿರುವ ಈ ಚಿತ್ರವನ್ನು 2025ರ ಆಗಸ್ಟ್ 14ರಂದು ಬಿಡುಗಡೆ ಮಾಡಲು ಪ್ಲ್ಯಾನ್‌ ಮಾಡಲಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...