ಐಶ್ವರ್ಯಾ ರೈ ಸಲ್ಮಾನ್ ಖಾನ್ ಸಹೋದರಿ?! ಇದಕ್ಕೆ ಕಾರಣ 'ಆ' ಸೂಪರ್ ಸ್ಟಾರ್.. ನಟಿಯ ಬಾಯಿಂದಲೇ ಹೊರಬಿತ್ತು ಬಿಗ್ ಸೀಕ್ರೆಟ್! : ನಟಿ ಐಶ್ವರ್ಯಾ ರೈ ಪ್ರಸ್ತುತ ವೈಯಕ್ತಿಕ ಜೀವನದಿಂದಾಗಿ ಸುದ್ದಿಯಲ್ಲಿದ್ದಾರೆ.. ನಟಿಯ ದಾಂಪತ್ಯದಲ್ಲಿ ಭಿನ್ನಾಬಿಪ್ರಾಯಗಳು ಮೂಡಿವೆ ಎನ್ನಲಾಗಿದೆ.. : ಕಳೆದ ಕೆಲವು ದಿನಗಳಿಂದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ಸುದ್ದಿ ಹರಿದಾಡುತ್ತಿದೆ.. ಕೆಲವು ವರದಿಗಳ ಪ್ರಕಾರ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವಿನ ವಿವಾದ ವಿಪರೀತಕ್ಕೆ ಹೋಗಿದೆ. ಐಶ್ವರ್ಯಾ ಮತ್ತು ಅಭಿಷೇಕ್ ವಿಚ್ಛೇದನದ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಮಧ್ಯದಲ್ಲಿ ಸಲ್ಮಾನ್ ಖಾನ್ ಹೆಸರು ಕೇಳಿ ಬರುತ್ತಿದೆ.. ವಾಸ್ತವವಾಗಿ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಕೆಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಅಷ್ಟೇ ಅಲ್ಲ ಇವರಿಬ್ಬರೂ ಮದುವೆಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಕಾರಣಾಂತರಗಳಿಂದ ಅವರು ಮದುವೆಯಾಗಲು ಸಾಧ್ಯವಾಗಲಿಲ್ಲ. 'ಹಮ್ ದಿಲ್ ದೇ ಚುಕೆ ಸನಮ್' ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಜೋಡಿಯ ಕೆಮಿಸ್ಟ್ರಿಗೆ ಪ್ರೇಕ್ಷಕರು ಕೂಡಾ ಮೆಚ್ಚಿಕೊಂಡಿದ್ದರು.. ಇದನ್ನೂ ಓದಿ- ಈ ಚಿತ್ರದ ನಂತರವೇ ಅವರು ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಇಷ್ಟೇ ಅಲ್ಲ, 2000ನೇ ಇಸವಿಯಲ್ಲಿ ಸಿನಿಮಾವೊಂದರಲ್ಲಿ ಸಲ್ಮಾನ್ ಖಾನ್‌ಗೆ ಐಶ್ವರ್ಯಾ ರೈ ತಂಗಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಂದರ್ಭವೊಂದು ಎದುರಾಗಿತ್ತಂತೆ.. ಆ ಚಿತ್ರದ ಹೆಸರು ಜೋಶ್. ಆದರೆ, ಕಾರಣಾಂತಾರಗಳಿಂದ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಐಶ್ವರ್ಯ ಅಲ್ಲ, ಆದರೆ ಐಶ್ವರ್ಯಾ ರೈ ಮತ್ತು ಶಾರುಖ್ ಖಾನ್ ಸಹೋದರಿ ಮತ್ತು ಸಹೋದರನ ಪಾತ್ರವನ್ನು ನಿರ್ವಹಿಸಿದರು.. ಜೋಶ್ ಚಿತ್ರದಲ್ಲಿ ಸಲ್ಮಾನ್ ಖಾನ್ ತಂಗಿಯಾಗಿ ಐಶ್ವರ್ಯಾ ಪಾತ್ರ ನಿರ್ವಹಿಸಬೇಕಿತ್ತು. ಆದರೆ, ಶಾರುಖ್‌ನಿಂದಾಗಿ ಇದು ಸಾಧ್ಯವಾಗಲಿಲ್ಲ. ಐಶ್ವರ್ಯಾ ರೈ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ- 2018 ರಲ್ಲಿ ಸಂದರ್ಶನವೊಂದರಲ್ಲಿ, ಸಲ್ಮಾನ್ ಮತ್ತು ಅಮೀರ್ ಆರಂಭದಲ್ಲಿ ಜೋಶ್‌ನಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ ಎಂದು ಐಶ್ವರ್ಯಾ ಹೇಳಿದ್ದರು. ಆದರೆ, ನಡೆದಿದ್ದೇ ಬೇರೆ.. ಐಶ್ವರ್ಯಾ ರೈ ಜೊತೆ ಸಹೋದರನ ಪಾತ್ರದಲ್ಲಿ ನಟಿಸಲು ಸಲ್ಮಾನ್ ಖಾನ್ ಇಷ್ಟಪಡಲಿಲ್ಲ. ಹೀಗಾಗಿ ಸಲ್ಮಾನ್ ಖಾನ್ ಬದಲಿಗೆ ಶಾರುಖ್ ಸಹೋದರನಾಗಿ ಕಾಣಿಸಿಕೊಂಡಿದ್ದರು ಎನ್ನಲಾಗಿದೆ.. ಸಲ್ಮಾನ್ ಖಾನ್ ಜೊತೆಗಿನ ಬ್ರೇಕಪ್‌ ನಂತರ ಐಶ್ವರ್ಯಾ ರೈ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಜೊತೆ ಡೇಟಿಂಗ್ ಪ್ರಾರಂಭಿಸಿದರು. ಚಿತ್ರದ ಶೂಟಿಂಗ್ ವೇಳೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಪ್ರೀತಿಯಲ್ಲಿ ಬಿದ್ದಿದ್ದು, 2007 ರಲ್ಲಿ ವಿವಾಹವಾದರು. ಆದರೆ, ಮತ್ತೊಂದೆಡೆ ಸಲ್ಮಾನ್ ಖಾನ್ ಇನ್ನೂ ಮದುವೆಯಾಗಲಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...