"ಸಿನಿಮಾದಿಂದ ಹಿಂದೆ ಸರಿಯುತ್ತಿದ್ದೇನೆ" ಬಣ್ಣದ ಲೋಕಕ್ಕೆ ಗುಡ್‌ ಬೈ ಹೇಳ್ತಾರಾ ಸ್ಟಾರ್‌ ನಟ!? : ಇಡಸ್ಟ್ರಿಯ ದೊಡ್ಡ ಸೂಪರ್‌ಸ್ಟಾರ್ ಅಮೀರ್ ಖಾನ್ ತಮ್ಮ ವೃತ್ತಿಜೀವನದಲ್ಲಿ ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.. ಮತ್ತೆ ಸಿನಿಮಾಗಳಲ್ಲಿ ಅವರ ಪಾತ್ರಗಳನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಅವರ ಮುಂದಿನ ಚಿತ್ರ ‘ಸಿತಾರೆ ಜಮೀನ್ ಪರ್’ ಮೇಲೆ ಅಭಿಮಾನಿಗಳ ಕಣ್ಣಿದೆ.. ಇದರ ಮಧ್ಯೇ ಇತ್ತೀಚೆಗಷ್ಟೇ ಅಮೀರ್ ಖಾನ್ ಅವರು ಚಿತ್ರರಂಗದಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದ್ದಾರೆ. : ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತರ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ನಟನಾ ಪ್ರಪಂಚದಿಂದ ದೂರವಾಗಿದ್ದರು. ಈಗ ಈ ಆಘಾತದಿಂದ ಹೊರ ಬಂದ ಮೇಲೆ ಯಾರೂ ಕೆಲಸ ಕೊಡುತ್ತಿಲ್ಲ. ನಟಿ ಈಗ ತನ್ನದೇ ಆದ ಪಾಡ್‌ಕಾಸ್ಟ್ ಅನ್ನು ಪ್ರಾರಂಭಿಸಿದ್ದಾರೆ, ಅದರಲ್ಲಿ ಅಮೀರ್ ಖಾನ್ ಕೂಡ ಭಾಗವಹಿಸಿದ್ದಾರೆ.. ಇನ್ನು ಈ ದಿನಗಳಲ್ಲಿ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅವರ ಪಾಡ್‌ಕ್ಯಾಸ್ಟ್‌ಗಾಗಿ ಸುದ್ದಿಯಲ್ಲಿದ್ದಾರೆ. ಅವರ ಪಾಡ್‌ಕ್ಯಾಸ್ಟ್‌ನ ಮೊದಲ ಅತಿಥಿ ಉದ್ಯಮದ ಟಾಪ್ ನಟಿ ಸುಶ್ಮಿತಾ ಸೇನ್. ಈಗ ಬಾಲಿವುಡ್ ಸೂಪರ್‌ಸ್ಟಾರ್ ಅಮೀರ್ ಖಾನ್ ಅವರ ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಇತ್ತೀಚೆಗೆ, ಅಮೀರ್ ಖಾನ್ ಮತ್ತು ರಿಯಾ ಚಕ್ರವರ್ತಿ ಕೂಡ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಸಂಬಂಧ ವಿಡಿಯೋವೊಂದನ್ನು ನಟಿ ಹಂಚಿಕೊಂಡಿದ್ದಾರೆ.. ಇದನ್ನೂ ಓದಿ- ಈ ವಿಡಿಯೋದಲ್ಲಿ ಅಮೀರ್ ಖಾನ್ ಅವರು ಬಾಲಿವುಡ್ ತೊರೆಯುವ ಬಗ್ಗೆ ಮಾತನಾಡುತ್ತಿದ್ದಾರೆ.. ರಿಯಾ ಚಕ್ರವರ್ತಿ ಅವರು ಅಮೀರ್ ಖಾನ್ ಅವರನ್ನು ಕನ್ನಡಿಯಲ್ಲಿ ನೋಡಿದಾಗ, ಅವರು ಎಷ್ಟು ಸುಂದರವಾಗಿ ಕಾಣುತ್ತಾರೆ ಎಂದು ಕೇಳಿದರು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಮೀರ್, ನಾನು ಹಾಗೆ ಕಾಣಿಸದ ಕಾರಣ ನನ್ನನ್ನು ನಾನು ಸುಂದರವಾಗಿ ಪರಿಗಣಿಸುವುದಿಲ್ಲ ಎಂದಿದ್ದಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಹೃತಿಕ್ ರೋಷನ್ ನಿಜವಾದ ತಾರೆಗಳು ಎಂದಿದ್ದಾರೆ ನಟ.. ಇದೇ ವೇಳೆ ನಟಿ ರಿಯಾ ಅಮೀರ್‌ ಖಾನ್‌ ಸಿನಿಮಾದಿಂದ ದೂರ ಉಳಿಯುತ್ತಾರೆ ಎಂದು ಸುದ್ದಿ ಹರಿದಾಡುತ್ತಿದೆ ಎಂದು ಕೇಳಿದಾಗ ನಟ ಅಮೀರ್ ಖಾನ್ ಕೆಲವು ವಿಷಯದ ಬಗ್ಗೆ ಭಾವುಕರಾಗಿ ಅಳಲು ಪ್ರಾರಂಭಿಸುತ್ತಾರೆ.. ಸದ್ಯ ಇದನ್ನು ನೋಡಿದ ಅವರ ಫ್ಯಾನ್ಸ್‌ ಬೇಸರಗೊಂಡಿದ್ದಲ್ಲದೇ ಸಿನಿಪ್ರಿಯರಿಗೆ ಅವರು ಸಿನಿಮಾಗಳಿಂದ ಶೀಘ್ರದಲ್ಲೇ ದೂರ ಉಳಿಯುತ್ತಾರೆ ಎನ್ನುವ ಅನುಮಾನ ಶುರುವಾಗಿದೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...