ಹೊಸ ಕಾರು ಖರೀದಿಸಿದ ಜಾನ್ವಿ ಕಪೂರ್.. ಬೆಲೆ ತಿಳಿದ್ರೆ ತಲೆ ತಿರುಗುತ್ತೆ..! ನಡೆದಾಡುವ ಅರಮೆನೆ ಗುರು.. : ನಟಿ ಜಾನ್ವಿ ಕಪೂರ್‌ ಲೆಕ್ಸಸ್ ಎಲ್ ಎಂ 350 ಎಂಬ ಐಶಾರಾಮಿಯ ಕಾರೊಂದನ್ನು ಖರೀದಿಸಿದ್ದಾರೆ. ಈ ಕಾರಿನ ಬೇಲೆ ಟಾಕ್‌ ಆಪ್‌ ದಿ ಡೇ ಆಗಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.. :ಹಿಂದಿ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಸರಣಿ ಚಿತ್ರಗಳನ್ನು ಮಾಡುತ್ತಿರುವ ಹಿರಿಯ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್‌ ಸಖತ್‌ ಸುದ್ದಿಯಲ್ಲಿದ್ದಾರೆ.. ಅಷ್ಟಾಗಿ ಹಿಟ್‌ ಸಿನಿಮಾ ನೀಡಿಲ್ಲ ಅಂದ್ರೂ ನಟಿಯ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ... ಈ ಸುಂದರಿ ಚಲನಚಿತ್ರಗಳಿಂದ ಮಾತ್ರವಲ್ಲದೆ ಜಾಹೀರಾತು, ಪೋಸ್ಟ್‌ಗಳು ಮತ್ತು ಇತರೆ ವ್ಯವಹಾರಗಳಲ್ಲಿ ಹೂಡಿಕೆ ಮಾಡುವುದರ ಮೂಲಕ ಹಣವನ್ನು ಗಳಿಸುತ್ತಿದ್ದಾಳೆ.. ಸಧ್ಯ ಜಾನ್ವಿ ಹೊಸ ಕಾರು ಖರೀದಿಸಿದ್ದು, ಎಲ್ಲರ ಕಣ್ಣು ಅದರ ಬೆಲೆ ಮೇಲೆ ಬಿದ್ದಿದೆ.. ಇದನ್ನೂ ಓದಿ: ಬಾಲಿವುಡ್ ಹೀರೋಯಿನ್ ಜಾನ್ವಿ ಕಪೂರ್ ಸದ್ಯ ದೇವರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಾಸ್ ಡೈರೆಕ್ಟರ್ ಕೊರಟಾಲ ಶಿವ ನಿರ್ದೇಶನದ ಈ ಚಿತ್ರದಲ್ಲಿ ಯಂಗ್ ಟೈಗರ್ ಎನ್‌ಟಿಆರ್‌ಗೆ ನಾಯಕನಾಗಿ ಅಭಿನಯಿಸಿದ್ದಾರೆ. ಹಿಂದಿ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ರಿಲೀಸ್‌ ಆಗಲಿರುವ ಈ ಚಿತ್ರದ ಇತ್ತೀಚಿಗೆ ಬಿಡುಗಡೆಯಾದ ಸಾಂಗ್‌ ಸಖತ್‌ ವೈರಲ್‌ ಆಗುತ್ತಿದೆ. ಇದರ ನಡುವೆ ನಟಿ ಐಶಾರಾಮಿಯ ಕಾರು ಖರೀದಿಸಿದ್ದಾರೆ. ಜಾನ್ವಿ ಖರೀದಿಸಿರುವ ಕಾರಿನ ಬೇಲೆ ಟಾಕ್‌ ಆಪ್‌ ದಿ ಡೇ ಆಗಿದೆ. ಲೆಕ್ಸಸ್ ಎಲ್ ಎಂ 350 ಎಂಬ ಕಾರನ್ನು ಖರೀದಿಸಿದ್ದಾರೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ 2.50 ಕೋಟಿ. ಕಾರು ನೋಂದಣಿ ಮತ್ತು ಹೆಚ್ಚುವರಿ ಫಿಟ್ಟಿಂಗ್ ಸೇರಿದಂತೆ ಸುಮಾರು 3 ಕೋಟಿ ರೂ. ಇದನ್ನೂ ಓದಿ: ಈ ಕಾರಿನ ಹಿಂದಿನ ಸೀಟಿಗೆ ಪ್ರತ್ಯೇಕ ಟಿವಿ ವ್ಯವಸ್ಥೆ, ಮಲಗುವ ವ್ಯವಸ್ಥೆ, ವಿಶೇಷ ಬೆಳಕಿನ ವ್ಯವಸ್ಥೆ, ಹಿಂಭಾಗದ ಸೀಟಿನಲ್ಲಿ ಕುಳಿತುಕೊಳ್ಳುವವರಿಗೆ ಈ ಕಾರು ಹಲವು ಆಯ್ಕೆಗಳನ್ನು ನೀಡುತ್ತದೆ. ನಟ ರಣಬೀರ್ ಕಪೂರ್ ಕೂಡ ಈ ಕಾರನ್ನು ಹೊಂದಿದ್ದಾರೆ. ಇದೀಗ ಜಾನ್ವಿ ಕಪೂರ್ ಕೂಡ ಅದೇ ಕಾರನ್ನು ಖರೀದಿಸಿದ್ದಾರೆ. ಜಪಾನ್‌ನ ಖ್ಯಾತ ಕಾರು ವಿನ್ಯಾಸಕರು ಈ ಕಾರನ್ನು ವಿನ್ಯಾಸಗೊಳಿಸಿದ್ದಾರೆ. ಈ ಕಾರಿನ ಹೆಸರು 'ಲಕ್ಸುರಿ ಆನ್ ಮೋಷನ್'. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...