'ನನ್ನ ಜೀವನಕ್ಕೆ ಹೊಂದಿಕೊಳ್ಳುವ ಸರಿಯಾದ ವ್ಯಕ್ತಿ..ʼ ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ನಟಿ ಕಂಗನಾ ರಣಾವತ್!! : ಬಾಲಿವುಡ್ ನಟಿ ಮತ್ತು ರಾಜಕಾರಣಿ ಕಂಗನಾ ರಣಾವತ್ ಅವರ ಮುಂಬರುವ ಎಮರ್ಜೆನ್ಸಿ ಸಿನಿಮಾದಿಂದಗಾಗಿ ಮುಖ್ಯಾಂಶಗಳಲ್ಲಿದ್ದಾರೆ. ಇದೆಲ್ಲದರ ಮಧ್ಯೆ ಸಂದರ್ಶನವೊಂದರಲ್ಲಿ, ನಟಿ ತನ್ನ ಮದುವೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. : ಕಂಗನಾ ರಣಾವತ್ ಹೆಚ್ಚಾಗಿ ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಆದರೆ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ತುಂಬಾ ಕಡಿಮೆ ಮಾತನಾಡುತ್ತಾರೆ. ಇತ್ತೀಚೆಗೆ, ನಟಿಯನ್ನು ಮದುವೆಯಾಗಿ ಮಕ್ಕಳನ್ನು ಹೊಂದಲು ಬಯಸುತ್ತೀರಾ ಎಂದು ಕೇಳಲಾಯಿತು.. ಅದಕ್ಕೆ ನಟಿಯ ಉತ್ತರ ಏನಾಗಿತ್ತು ಎಂಬುದನ್ನು ಇಲ್ಲಿ ತಿಳಿಯೋಣ.. ರಾಜ್ ಶಾಮಾನಿ ಅವರ ಪಾಡ್‌ಕಾಡ್‌ನಲ್ಲಿ ಕಂಗಾನ ಅವರನ್ನು ನೀವು ಮದುವೆಯಾಗಲು ಬಯಸುತ್ತೀರಾ? ಎಂದು ಕೇಳಲಾಯಿತು.. ಇದಕ್ಕೆ ನೇರವಾಗಿ ಉತ್ತರಿಸಿದ ನಟಿ 'ಹೌದು, ಯಾಕೆ ಬೇಡವೇ?'.. ಇದಾದ ಬಳಿಕ ಸೆಟಲ್ ಆಗುವ ಮತ್ತು ಮಕ್ಕಳನ್ನು ಹೊಂದುವ ಬಗ್ಗೆ ನಟಿ ಹೇಳಿದ್ದು, 'ಎಲ್ಲರಿಗೂ ಮದುವೆ ಮಕ್ಕಳು ಬೇಕು ಹಾಗೆಯೇ ನಾನು ಕೂಡ ಅದರ ಬಗ್ಗೆ ಯೋಚಿಸುತ್ತೇನೆ" ಎಂದಿದ್ದಾರೆ.. ಇದನ್ನೂ ಓದಿ- ನಂತರ ಮುಂದುವರೆದು ಮಾತನಾಡಿದ ಅವರು ಅವರು ಮದುವೆ ಏಕೆ ಮುಖ್ಯ ಎಂಬುದನ್ನು ಹೇಳಿದ್ದಾರೆ... "ಪ್ರತಿಯೊಬ್ಬರಿಗೂ ಸಂಗಾತಿ ಇರಬೇಕು.. ಸಂಗಾತಿಯಿಲ್ಲದೆ ಬದುಕುವುದು ಕಷ್ಟ, ಸಂಗಾತಿಯಿಲ್ಲದೆ ಬದುಕುವುದು ಸುಲಭವಲ್ಲ... ಹಾಗೆಯೇ ಕೆಲವೊಮ್ಮೆ ಸಂಗಾತಿಯೊಂದಿಗೆ ಬದುಕುವುದು ಸಹ ಕಷ್ಟ, ಆದರೆ ಸಂಗಾತಿಯಿಲ್ಲದೆ ಬದುಕುವುದು ಇನ್ನೂ ಕಷ್ಟ." ಇದನ್ನೂ ಓದಿ- ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡುವ ಮಾರ್ಗ ಯಾವುದು ಎಂಬುದರ ಬಗ್ಗೆಯೂ ಕಂಗನಾ ರಣಾವತ್ ವಿವರಿಸಿದರು.. "ಸರಿಯಾದ ವ್ಯಕ್ತಿಯನ್ನು ಹುಡುಕುವ ಅಗತ್ಯವಿಲ್ಲ.. ನಿಮ್ಮ ಸ್ವಂತ ಸಂಗಾತಿಯನ್ನು ನೀವು ಕಂಡುಕೊಂಡರೆ, ಅದು ನಿಮಗೆ ದೊಡ್ಡ ವಿಪತ್ತು" ಎಂದು ಗೊಂದಲಮಯ ಉತ್ತರವನ್ನು ನೀಡಿದ್ದಾರೆ.. ಆದರೆ ಈ ಸಮಯದಲ್ಲಿ ಕಂಗನಾ ತನ್ನ ಮದುವೆಯ ಬಗ್ಗೆ ಏನನ್ನೂ ಬಹಿರಂಗಪಡಿಸಲಿಲ್ಲ. ಇನ್ನು ಸುದೀರ್ಘ ಕಾಯುವಿಕೆಯ ನಂತರ, ಕಂಗಾನಾ ನಟನೆಯ ಎಮರ್ಜೆನ್ಸಿ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರವು 6 ಸೆಪ್ಟೆಂಬರ್ 2024 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ನಟಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಂಗನಾ ಅವರ ಚಿತ್ರಕ್ಕೆ ಅಭಿಮಾನಿಗಳಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...