ಕಾಪಿ ರೈಟ್ಸ್ ಉಲ್ಲಂಘನೆ ಪ್ರಕರಣ: ನಟ ರಕ್ಷಿತ್ ಶೆಟ್ಟಿಗೆ 20 ಲಕ್ಷ ರೂ. ಠೇವಣಿ ಇಡುವಂತೆ ನಿರ್ದೇಶನ! : ಅನುಮತಿ ಪಡೆಯದೇ ತಮ್ಮ ನಿರ್ಮಾಣ ಸಂಸ್ಥೆಯಿಂದ ತಯಾರಾದ ʼಬ್ಯಾಚುಲರ್ ಪಾರ್ಟಿ' ಸಿನಿಮಾದಲ್ಲಿ ೨ ಹಾಡುಗಳನ್ನು ಬಳಕೆ ಮಾಡಿದ್ದಕ್ಕೆ ಸಂಸ್ಥೆಯು ದೆಹಲಿ ಹೈಕೋರ್ಟ್ ಮೆಟ್ಟಿಲು ಏರಿತ್ತು. :ಅಭಿಜಿತ್ ಮಹೇಶ್ ಬರೆದು ನಿರ್ದೇಶಿಸಿರುವ ಮತ್ತು ಪರಂವಾ ಸ್ಟುಡಿಯೋಸ್ ಅಡಿ ರಕ್ಷಿತ್ ಶೆಟ್ಟಿ ನಿರ್ಮಿಸಿರುವ ʼಬ್ಯಾಚುಲರ್ ಪಾರ್ಟಿʼ ಸಿನಿಮಾದಲ್ಲಿ Musicನ ಹಕ್ಕು ಹೊಂದಿರುವ 'ನ್ಯಾಯ ಎಲ್ಲಿದೆ' ಮತ್ತು ʼಒಮ್ಮೆ ನಿನ್ನನ್ನುʼ ಹಾಡು ಅನುಮತಿ ಪಡೆಯದೇ ಬಳಸಿರುವ ಪ್ರಕರಣ ಸಂಬಂಧ ರಕ್ಷಿತ್ ಶೆಟ್ಟಿ ಮತ್ತು ಪರಂವಾ ಸ್ಟುಡಿಯೋಗೆ 20 ಲಕ್ಷ ರೂ. ಠೇವಣಿ ಇಡುವಂತೆ ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ. ನಟಯವರು ತಮ್ಮ ʼಬ್ಯಾಚುಲರ್ ಪಾರ್ಟಿʼ ಸಿನಿಮಾದಲ್ಲಿ ಹಕ್ಕು ಹೊಂದಿರುವ ʼನ್ಯಾಯ ಎಲ್ಲಿದೆʼ ಮತ್ತು ʼಒಮ್ಮೆ ನಿನ್ನನ್ನುʼ ಹಾಡು ಬಳಕೆ ಮಾಡಿದ್ದರು. ಅನುಪತಿ ಪಡೆಯದೇ ಬಳಸಿದ್ದನ್ನೂ ಸ್ವತಃ ಅವರೇ ಒಪ್ಪಿಕೊಂಡಿದ್ದರು. ತುಣುಕು ಹಾಡುಗಳನ್ನು ಬಳಸಿಕೊಳ್ಳಲು ಅನುಮತಿ ಬೇಕಾ? ಅಂತಾ ಪ್ರಶ್ನೆ ಮಾಡಿದ್ದರು. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಸಹ ಹಂಚಿಕೊಂಡಿದ್ದರು. ಇದನ್ನೂ ಓದಿ: ಹೀಗಾಗಿ ಅನುಮತಿ ಪಡೆಯದೇ ತಮ್ಮ ನಿರ್ಮಾಣ ಸಂಸ್ಥೆಯಿಂದ ತಯಾರಾದ ʼಬ್ಯಾಚುಲರ್ ಪಾರ್ಟಿ' ಸಿನಿಮಾದಲ್ಲಿ 2 ಹಾಡುಗಳನ್ನು ಬಳಕೆ ಮಾಡಿದ್ದಕ್ಕೆ ಸಂಸ್ಥೆಯು ದೆಹಲಿ ಹೈಕೋರ್ಟ್ ಮೆಟ್ಟಿಲು ಏರಿತ್ತು. ಕಾಪಿ ರೈಟ್ಸ್ ಉಲ್ಲಂಘನೆ ಆಗಿರುವ ವಿಚಾರವನ್ನು ಉಲ್ಲೇಖಿಸಿತ್ತು. ಇದೀಗ ದೆಹಲಿ ಹೈಕೋರ್ಟ್ ‌ನಟ ರಕ್ಷಿತ್ ಶೆಟ್ಟಿ ಮತ್ತು ಪರಂವಾ ಸ್ಟುಡಿಯೋಗೆ 20 ಲಕ್ಷ ರೂ. ಠೇವಣಿ ಇಡುವಂತೆ ನಿರ್ದೇಶಿಸಿದೆ. ಮತ್ತು ಪರಂವಾ ಸ್ಟುಡಿಯೋಸ್‌ಗೆ ಹೈಕೋರ್ಟ್ ನೋಟಿಸ್ ನೀಡಿತ್ತು. ಈ ನೋಟಿಸ್‌ಗೆ ರಕ್ಷಿತ್ ಶೆಟ್ಟಿ ಕೋರ್ಟ್‌ಗೆ ಹಾಜರಾಗದ ಕಾರಣ ಸೋಷಿಯಲ್ ಮೀಡಿಯಾ ಸೇರಿ ಹಾಡುಗಳು ಬಳಕೆಯಾದ ಕಡೆ ತೆಗೆದು ಹಾಕಬೇಕು. ಇದರ ಜೊತೆಗೆ 20 ಲಕ್ಷ ರೂ. ಠೇವಣಿ ಇಡಬೇಕೆಂದು ಕೋರ್ಟ್ ನಿರ್ದೇಶನ ನೀಡಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...