ಈ ಖ್ಯಾತ ನಟಿಗೆ 'ನಾನು ನಿನ್ನನ್ನು ಗರ್ಭಿಣಿಯಾಗಿಸಬಲ್ಲೆ' ಎಂದಿದ್ದರಂತೆ ಶಾರುಖ್‌! ಕಿಂಗ್‌ ಖಾನ್‌ ಮಾತಿಗೆ ಆಕೆಯ ಉತ್ತರ ಏನಾಗಿತ್ತು ಗೊತ್ತೇ? : ಬಾಲಿವುಡ್ ನಟ ಶಾರುಖ್ ಖಾನ್ ಸದಾ ಸುದ್ದಿಯಲ್ಲಿರುವ ಹೆಸರು. ಕಿಂಗ್‌ ಖಾನ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಈ ನಟನ ಸೆನ್ಸೇಷನಲ್‌ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. : ನಟಿ ಪ್ರೀತಿ ಜಿಂಟಾ ಬಗ್ಗೆ ಸಿನಿಪ್ರಿಯರು ಹಾಗೂ ಕ್ರಿಕೆಟ್‌ ಪ್ರಿಯರಿಗೆ ಗೊತ್ತಿಲ್ಲದೇ ಇರಲು ಸಾಧ್ಯವೇ ಇಲ್ಲ.. ಇವರು ತಮ್ಮ ಬಾಲಿವುಡ್ ವೃತ್ತಿಜೀವನದಲ್ಲಿ ಅನೇಕ ಹಿಟ್ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಪ್ರೀತಿ ಜಿಂಟಾ ಬಾಲಿವುಡ್ ನಟ ಶಾರುಖ್ ಖಾನ್ ಅವರೊಂದಿಗೂ ಕೆಲಸ ಮಾಡಿದ್ದಾರೆ. ಅಲ್ಲದೇ ಶಾರುಖ್ ಖಾನ್ ಮತ್ತು ಪ್ರೀತಿ ಜಿಂಟಾ ಕೂಡ ಒಳ್ಳೆಯ ಸ್ನೇಹಿತರು. ಐಪಿಎಲ್‌ನಲ್ಲಿ ಪ್ರೀತಿ ಜಿಂಟಾ-ಶಾರುಖ್ ಖಾನ್ ಇಬ್ಬರೂ ಕೂಡ ತಂಡವನ್ನು ಹೊಂದಿದ್ದಾರೆ. ಸದ್ಯ ಶಾರುಖ್ ಖಾನ್ ಮತ್ತು ಪ್ರೀತಿ ಜಿಂಟಾ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ... ಈ ವೀಡಿಯೋ ನೋಡಿದ ನೆಟ್ಟಿಗರು ಶಾಕ್‌ ಆಗಿರೋದಂತೂ ಖಂಡಿತ.. & ! — (@) ಇದನ್ನೂಓದಿ- ವಾಸ್ತವವಾಗಿ ಶಾರುಖ್ ಪ್ರೀತಿಗೆ ಮಗುವಿನ ನಿರೀಕ್ಷೆಯಲ್ಲಿದ್ದೀರಾ ಎಂದು ಕೇಳುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಈ ಪ್ರಶ್ನೆಯು ನಟಿಯನ್ನು ಮುಜುಗರಕ್ಕೀಡು ಮಾಡಿದರೂ, ನಂತರ ನಟ ಶಾರುಖ್ "ನಾನು ಅದನ್ನು ಮಾಡಬಲ್ಲೆ. ನಾನು ನಿನ್ನನ್ನು ಗರ್ಭಿಣಿಯಾಗಿಸಬಹುದು" ಎಂದು ಹೇಳುತ್ತಾರೆ. ಇದಾದ ಬಳಿಕ ಶಾರುಖ್ ಖಾನ್ ಕೂಡ ಪ್ರೀತಿ ಜಿಂಟಾಗೆ ನಗುನಗುತ್ತಲೇ ಸಾರಿ ಹೇಳಿದ್ದಾರೆ. ಒಟ್ಟಿನಲ್ಲಿ ಇದು ತಮಾಷೆಯ ವಿಡಿಯೋವಾದರೂ ನೆಟ್ಟಿಗರು ಇದನ್ನು ವಿರೋಧಿಸಿದ್ದಾರೆ.. ಶಾರುಖ್ ಖಾನ್ ಮತ್ತು ಪ್ರೀತಿ ಜಿಂಟಾ ಅವರ ಈ ವೈರಲ್ ವೀಡಿಯೊ ತುಂಬಾ ಹಳೆಯದಾಗಿದೆ.. ಆದರೆ ಇದೀಗ ಈ ವಿಡಿಯೋ ಮತ್ತೆ ಹಾಟ್‌ ಟಾಫಿಕ್‌ ಆಗಿದೆ.. ವಿಡಿಯೋಗೆ ಕಾಮೆಂಟ್‌ಗಳ ಸುರಿಮಳೆಯಾಗುತ್ತಿದ್ದು, "ಶಾರುಖ್ ಖಾನ್ ಈ ರೀತಿ ಹೇಳುವುದು ತುಂಬಾ ತಪ್ಪು... ಗೆಳೆಯರು ಎಷ್ಟೇ ಆತ್ಮೀಯರಾದರೂ ಹೀಗೆ ಮಾತನಾಡುವುದ ತಪ್ಪು ಎಂದು ಒಬ್ಬರು ಹೇಳಿದರೇ.. ಮತ್ತೊಬ್ಬರು ಶಾರುಖ್ ಖಾನ್ ಈ ರೀತಿ ಮಾತನಾಡುತ್ತಾರೆ ಎಂದು ನಾವು ನಿರೀಕ್ಷಿಸಿರಲಿಲ್ಲ ಎಂದು ಬರೆದಿದ್ದಾರೆ. ಇದೀಗ ಶಾರುಖ್ ಖಾನ್ ಮತ್ತು ಪ್ರೀತಿ ಜಿಂಟಾ ಅವರ ಈ ವಿಡಿಯೋ ಭಾರೀ ವೈರಲ್‌ ಆಗುತ್ತಿದೆ.. ಇದನ್ನೂಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...