ವಿಚ್ಛೇದನ ವದಂತಿ ಕಾವಿನ ಬೆನ್ನಲ್ಲೇ ಸಲ್ಮಾನ್ ಖಾನ್ ಜೊತೆ ರಹಸ್ಯ ಮದುವೆ ರೂಮರ್ಸ್?! ಕೊನೆಗೂ ಮೌನ ಮುರಿದ ಐಶ್ವರ್ಯ ರೈ! : ಇತ್ತೀಚೆಗೆ ನಟಿ ಐಶ್ವರ್ಯ ಹಾಗೂ ಅಭಿಷೇಕ್ ಬಚ್ಚನ್‌ ಮಧ್ಯೆ ಯಾವುದು ಸರಿ ಇಲ್ಲ.. ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.. - :ನಟಿ ಐಶ್ವರ್ಯಾ ರೈ ಮತ್ತು ನಟ ಸಲ್ಮಾನ್ ಖಾನ್ ನಡುವಿನ ಸಂಬಂಧದ ಬಗ್ಗೆ ಇಂದು ಎಲ್ಲರಿಗೂ ತಿಳಿದಿದೆ. ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಅವರ ಸಂಬಂಧವು ಬಾಲಿವುಡ್‌ನಲ್ಲಿ ಮಾತ್ರವಲ್ಲದೆ ಅಭಿಮಾನಿಗಳಲ್ಲಿಯೂ ಚರ್ಚೆಯಾಗುತ್ತಿದ್ದ ಸಮಯವಿತ್ತು. ಆದರೆ ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಬ್ರೇಕಪ್‌ ಬಳಿಕ ಐಶ್ವರ್ಯಾ ನಟ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು. ಮದುವೆಯ ನಂತರ ಐಶ್ವರ್ಯಾ ಆರಾಧ್ಯ ಎಂಬ ಮಗಳಿಗೆ ಜನ್ಮ ನೀಡಿದಳು. ಆದರೆ ಸಲ್ಮಾನ್ ಖಾನ್ ಇನ್ನೂ ಒಂಟಿ ಜೀವನ ನಡೆಸುತ್ತಿದ್ದಾರೆ. ಇಂದು ಐಶ್ವರ್ಯಾ ಮತ್ತು ಸಲ್ಮಾನ್ ತಮ್ಮ ಜೀವನದಲ್ಲಿ ಬಹಳ ಮುಂದೆ ಬಂದಿದ್ದಾರೆ. ಆದರೆ ಒಂದು ಕಾಲದಲ್ಲಿ ಸಲ್ಮಾನ್ ಮತ್ತು ಐಶ್ವರ್ಯಾ ರಹಸ್ಯವಾಗಿ ಮದುವೆಯಾಗುತ್ತಾರೆ ಎಂಬ ವದಂತಿಗಳು ಇದ್ದವು. ಇದನ್ನೂ ಓದಿ- ಹೌದು ಈ ಹಿಂದೆ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ವದಂತಿಗಳು ಜೋರಾಗಿ ಹಬ್ಬಿದ್ದವು. ಆದರೆ ಈ ಬಗ್ಗೆ ಇಬ್ಬರೂ ಯಾವುದೇ ಹೇಳಿಕೆ ನೀಡಿರಲಿಲ್ಲ. ಆದರೆ ವರದಿಗಳ ಪ್ರಕಾರ, ಮದುವೆಗಾಗಿ ಐಶ್ವರ್ಯಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಇಬ್ಬರ ನಿಕಾಹ್ ಸಮಾರಂಭದಲ್ಲಿ ಆಪ್ತರು ಭಾಗವಹಿಸಿದ್ದರು ಎಂದೂ ಹೇಳಲಾಗಿದೆ. ಅಲ್ಲದೇ ಸಲ್ಮಾನ್-ಐಶ್ವರ್ಯಾ ಪೋಷಕರೂ ಮದುವೆಗೆ ಹಾಜರಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಮದುವೆಯ ನಂತರ, ಸಲ್ಮಾನ್ - ಐಶ್ವರ್ಯ ತಮ್ಮ ಹನಿಮೂನ್‌ಗಾಗಿ ನ್ಯೂಯಾರ್ಕ್‌ಗೆ ಹೋಗಿದ್ದು, ಮುಂಬೈಗೆ ಹಿಂತಿರುಗಿದ ನಂತರ ಇಬ್ಬರು ಕಾಣಿಸಿಕೊಂಡಿದ್ದರು ಎನ್ನಲಾಗಿತ್ತು.. ವಾಸ್ತವವೆಂದರೇ ಸಲ್ಮಾನ್ ಖಾನ್ ಜೊತೆಗಿನ ಐಶ್ವರ್ಯಾ ಅವರ ಸಂಬಂಧವನ್ನು ನಟಿಯ ಪೋಷಕರು ಎಂದಿಗೂ ಒಪ್ಪಲಿಲ್ಲ. ಮೇಲೆ ನಡೆದ ಚರ್ಚೆಗಳು ನಟಿಯ ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರಿದ್ದವು.. ಮೇಲಾಗಿ ಐಶ್ವರ್ಯಾ ಜೊತೆ ಸಿನಿಮಾ ಮಾಡುವ ಬಗ್ಗೆಯೂ ನಿರ್ಮಾಪಕರು ಚಿಂತಿಸಿದ್ದರಂತೆ.. ಇದನ್ನೂ ಓದಿ- ಮದುವೆ ಮಾತುಕತೆ ಬಗ್ಗೆ ಐಶ್ವರ್ಯಾ ಪ್ರತಿಕ್ರಿಯೆ:ಸಲ್ಮಾನ್ ಖಾನ್ ಜೊತೆಗಿನ ಮದುವೆಯ ವದಂತಿಗಳು ಭುಗಿಲೆದ್ದ ನಂತರ, ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ನಟಿ ಹೇಳಿದ್ದರು... 'ಒಂದು ವೇಳೆ ಮದುವೆ ನಡೆದಿದ್ದರೆ ಇಡೀ ಇಂಡಸ್ಟ್ರಿಗೆ ಗೊತ್ತಾಗುತ್ತಿತ್ತು. ಉದ್ಯಮ ಬಹಳ ಚಿಕ್ಕದು. ಇಷ್ಟೇ ಅಲ್ಲ, ನನ್ನ ಕುಟುಂಬದೊಂದಿಗೆ ಕಳೆಯಲು ಸಮಯವಿಲ್ಲ... ನನ್ನ ಮದುವೆಯ ವಿಷಯ ಬಂದಾಗ, ನಾನು ಹೆಮ್ಮೆಯಿಂದ ಹೇಳುತ್ತೇನೆ... ಆದರೆ ನನಗೆ ಮದುವೆಯಾಗಲು ಸಮಯವಿಲ್ಲ.." ಎಂದು ಅಭಿಷೇಕ್‌ ಜೊತೆ ಮದುವೆಗೂ ಮುನ್ನ ನಟಿ ಐಶ್ವರ್ಯ ವದಂತಿಗಳಿಗೆ ಬ್ರೇಕ್‌ ನೀಡಿದ್ದರು.. ಸದ್ಯ ಸಲ್ಮಾನ್‌ ಖಾನ್‌ ಹಾಗೂ ಐಶ್ವರ್ಯ ರೈ ಸುದ್ದಿಗಳು ಸಾಕಷ್ಟು ಹರಿದಾಡುತ್ತಿದ್ದರಿಂದ ಈ ವಿಚಾರ ಮತ್ತೊಮ್ಮೆ ಸದ್ದು ಮಾಡುತ್ತಿದೆ.. ಸಲ್ಮಾನ್ ಖಾನ್-ಐಶ್ವರ್ಯ ರೈ ಬ್ರೇಕಪ್ ಕಾರಣ:ಹಳೆ ಸಂದರ್ಶನದಲ್ಲಿ ಸಲ್ಮಾನ್ ಖಾನ್ ಜೊತೆ ಐಶ್ವರ್ಯಾ ರೈ ಬ್ರೇಕ್ ಅಪ್ ಆಗಿದ್ದೇಕೆ? ಎನ್ನುವುದರ ಕಾರಣವನ್ನು ವಿವರಿಸಿದ್ದರು... 'ಸಲ್ಮಾನ್ ಖಾನ್ ಜೊತೆಗಿನ ಸಂಬಂಧದಲ್ಲಿ ನಾನು ಅನೇಕ ತೊಂದರೆಗಳನ್ನು ಎದುರಿಸಿದ್ದೇನೆ. ಸಲ್ಮಾನ್‌ನ ಮದ್ಯದ ದುರುಪಯೋಗ, ಮೌಖಿಕ, ದೈಹಿಕ ಮತ್ತು ಭಾವನಾತ್ಮಕ ನಿಂದನೆ, ಮೋಸ ಮತ್ತು ಅವಮಾನವನ್ನು ಅನುಭವಿಸಿದೆ. ಈ ಕಾರಣದಿಂದ ಸಲ್ಮಾನ್ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದು" ಎಂದು ಹೇಳಿದ್ದರು.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...