ಮದುವೆಯಾದ ಆರೇ ತಿಂಗಳಿಗೆ ಪತಿ ಆತ್ಮಹತ್ಯೆ!ಎರಡನೇ ವಿವಾಹದಲ್ಲಿಯೂ ಗಂಡನ ದುರ್ಮರಣ!ವೈವಾಹಿಕ ಸುಖವೇ ಅನುಭವಿಸದ ಖ್ಯಾತ ನಟಿ ಈಕೆ ಖ್ಯಾತ ನಟಿಯ ಪಟ್ಟ. ಕೇ ತುಂಬಾ ಹಣ, ಹೆಸರು, ಕೀರ್ತಿ, ಯಶಸ್ಸು ಎಲ್ಲವೂ ಇತ್ತು. ಆದರೆ ಜೀವನದಲ್ಲಿ ಪ್ರೀತಿ ಮಾತ್ರ ಕೈ ಹಿಡಿಯಲೇ ಇಲ್ಲ. ಮುಂಬಯಿ :ಖ್ಯಾತ ನಟ ನಟಿಯರು ಅಂದ ಕೂಡಲೇ ಅವರ ಜೀವನದಲ್ಲಿ ಎಲ್ಲವೂ ಸುಖಮಯ ಎನ್ನುವ ಭಾವನೆ ಸಾಮಾನ್ಯವಾಗಿ ಎಲ್ಲರಲ್ಲಿಯೂ ಇರುತ್ತದೆ. ಆದರೆ ಎಲ್ಲರ ಜೀವನದಲ್ಲಿ ಹಾಗೆ ಆಗಿರುವುದಿಲ್ಲ. ಹೆಸರು ಕೀರ್ತಿ ಎಲ್ಲವೂ ಇದ್ದರೂ ನೆಮ್ಮದಿ, ಜೀವನ ಸುಖ ಎನ್ನುವುದು ಮರಿಚಿಕೆಯಾಗಿರುವ ಅದೆಷ್ಟೋ ನಟ ನಟಿಯರು ನಮ್ಮ ನಡುವೆ ಇದ್ದಾರೆ.ಆದರೆ ಜಗತ್ತಿನ ಕಣ್ಣಿಗೆ ಎಲ್ಲವೂ ಸರಿ ಇದೆ ಎನ್ನುವ ಹಾಗೆಯೇ ಅವರು ನಿಜ ಜೀವನದಲ್ಲಿಯೂ ನಟಿಸುತ್ತಾರೆ. ಹೌದು,ಕೆಲವು ಕಲಾವಿದರುಬೇಕಾ ಬಿಟ್ಟಿ ವರ್ತಿಸಿ ಎಲ್ಲವನ್ನೂ ತಮ್ಮ ಕೈಯ್ಯಾರೆ ಹಾಳು ಮಾಡಿಕೊಳ್ಳುತ್ತಾರೆ.ನಂತರ ತಮ್ಮದು ಯಾತನಾಮಯ ಬದುಕು ಎಂದು ಕಷ್ಟ ತೋಡಿಕೊಳ್ಳುತ್ತಾರೆ.ಇನ್ನು ಕೆಲವು ಕಲಾವಿದರು ಎಲ್ಲವೂ ಇದ್ದು ಏನೂ ಇಲ್ಲ ಎನ್ನುವಂತೆ ಬದುಕುವವರು.ಇನ್ನು ಕೆಲವರ ಜೀವನದಲ್ಲಿ ಹೆಸರು ಖ್ಯಾತಿ ಎಲ್ಲವೂ ಇರುತ್ತದೆ.ಆದರೆ ಬದುಕಿಗೆ ಮುಖ್ಯವಾದ ಪ್ರೀತಿಯೇ ಇರುವುದಿಲ್ಲ.ಅಂಥದ್ದೇ ಒಂದು ನಟಿಯ ಜೀವನದ ಬಗ್ಗೆ ಇಲ್ಲಿ ಹೇಳಲಿದ್ದೇವೆ. ಇದನ್ನೂ ಓದಿ : ರೇಖಾ, ಸದಾಜೊತೆಗಿನ ಸಂಬಂಧದ ವಿಚಾರದಿಂದ ತೀರಾ ಸುದ್ದಿಯಲ್ಲಿದ್ದವರು. ಆದರೆ, ಅಮಿತಾಬ್ ಜೊತೆ ಅವರ ಮದುವೆ ನಡೆಯಲಿಲ್ಲ. ಇವರು ಮದುವೆಯಾಗಿದ್ದು ಮುಖೇಶ್ ಅಗರವಾಲ್ ಎನ್ನುವವರನ್ನು.ಆದರೆ ಅದೇನಾಯಿತೋ ಗೊತ್ತಿಲ್ಲ ಮುಖೇಶ್ ಅಗರವಾಲ್ ಆರೇ ತಿಂಗಳಿಗೆ ಆತ್ಮಹತ್ಯೆ ಮಾಡಿಕೊಂಡು ಬಿಡುತ್ತಾರೆ.ಇದಕ್ಕಾಗಿ ರೇಖಾ ವರನ್ನು ಜರಿದವರು ಬಹಳಷ್ಟು ಮಂದಿ. ಇದಾದ ನಂತರ ಖ್ಯಾತ ನಟ ವಿನೋದ ಮೆಹ್ರಾ ಜೊತೆ ರೇಖಾ ಮದುವೆಯಾಗುತ್ತದೆ. ಇಲ್ಲಿ ವಿನೋದ್ ಮೆಹ್ರಾ ತಾಯಿಗೆ ರೇಖಾ ತನ್ನ ಸೊಸೆಯಾಗಿ ಬರುವುದು ಇಷ್ಟವಿರಲಿಲ್ಲವಂತೆ.ಅದಕ್ಕಾಗಿ ಇಬ್ಬರೂ ಗುಟ್ಟಾಗಿ ಮದುವೆಯಾಗಿದ್ದರು ಎನ್ನಲಾಗಿದೆ. ಆದರೆ ಸ್ವಲ್ಪ ಸಮಯದಲ್ಲಿಯೇ ವಿನೋದ್ ಮೆಹ್ರಾ ಕೂಡಾ ಸಾವನ್ನಪ್ಪುತ್ತಾರೆ. ಈ ಮದುವೆ ಬಗ್ಗೆ ರೇಖಾ ಎಲ್ಲಿಯೂ ತುಟಿ ಬಿಚ್ಚಿಲ್ಲ. ಇದನ್ನೂ ಓದಿ : ಅಲ್ಲಿಗೆ ಎರಡು ಮದುವೆಯಾದರೂ ವೈವಾಹಿಕ ಜೀವನದ ಸುಖ ಅನುಭವಿಸದೆ ಇಂದಿಗೂ ಒಂದಿಯಾಗಿ ಬದುಕು ಸವೆಸುತ್ತಿದ್ದಾರೆ ಹಿರಿಯ ನಟಿ ರೇಖಾ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...