ನಾಗಚೈತನ್ಯ ನಿಶ್ಚಿತಾರ್ಥ.. ಕೊನೆಗೂ ಮೌನಮುರಿದ ನಟಿ ಸಮಂತಾ!! : ನಾಗ ಚೈತನ್ಯ-ಶೋಭಿತಾ ಅವರ ನಿಶ್ಚಿತಾರ್ಥ ಆಗಸ್ಟ್ 8 ರಂದು ಅದ್ಧೂರಿಯಾಗಿ ನಡೆದಿದ್ದು ಗೊತ್ತೇ ಇದೆ. ಹತ್ತಿರದ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ನಡುವೆ ನಿಶ್ಚಿತಾರ್ಥ ನಡೆದಿದ್ದು, ಅಕ್ಕಿನೇನಿ ನಾಗಾರ್ಜುನ ಅವರು ಸಾಮಾಜಿಕ ಮಾಧ್ಯಮದಲ್ಲಿ ಚೈತು ಶೋಭಿತಾ ಅವರ ನಿಶ್ಚಿತಾರ್ಥವನ್ನು ಖಚಿತಪಡಿಸಿದ್ದಾರೆ. : ನಾಗ ಚೈತನ್ಯ ಅವರ ನಿಶ್ಚಿತಾರ್ಥದ ನಂತರ ಅಕ್ಕಿನೇನಿ ಅಭಿಮಾನಿಗಳು ನಾಗ ಚೈತನ್ಯ ಶೋಭಿತಾ ಅವರನ್ನು ಅಭಿನಂದಿಸಿದರು.. ಆದರೆ ಸಮಂತಾ ಅಭಿಮಾನಿಗಳು ನಾಗ ಚೈತನ್ಯ ಸಮಂತಾಗೆ ಅನ್ಯಾಯ ಮಾಡಿದ್ದಾರೆ ಎಂದು ಕಿಡಿ ಕಾರುತ್ತಿದ್ದು, ನಾಗ ಚೈತನ್ಯ ಜೊತೆ ಸಮಂತಾ ಬ್ರೇಕ್ ಅಪ್ ಆಗಲು ಸೋಭಿತಾ ಕಾರಣವಿರಬಹುದು ಎನ್ನುತ್ತಿದ್ದಾರೆ.. ನಾಗ ಚೈತನ್ಯ ಶೋಭಿತಾ ಧೂಳಿಪಾಲ ನಿಶ್ಚಿತಾರ್ಥದ ನಂತರ ಸಮಂತಾ ಬಗ್ಗೆಯೂ ಗುಸುಗುಸು ಹಬ್ಬಿತ್ತು. ಹೌದು ನಟಿ ಬಾಲಿವುಡ್ ಸ್ಟಾರ್‌ ಡೈರೆಕ್ಟರ್ ರಾಜ್ ನಿಡಿಯೋರ್ ಜೊತೆ ಸಮಂತಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಈ ನಡುವೆ ಸಮಂತಾ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಸೆಲ್ಫಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ, ನೆಟಿಜನ್‌ಗಳು ಸಮಂತಾ ಅವರ ನೋಟಕ್ಕೆ ತಮ್ಮದೇ ಆದ ಅರ್ಥವನ್ನು ಹೇಳುತ್ತಿದ್ದಾರೆ. ಇದನ್ನೂ ಓದಿ- ಸದ್ಯ ಸ್ಯಾಮ್‌ ಪೋಸ್ಟ್‌ ಮಾಡಿರುವ ಪೋಟೋ ನೋಡಿದ ನೆಟ್ಟಿಗರು ನಟಿ ಮುಖದ ಮೇಲೆ ಮಧ್ಯದ ಬೆರಳು ಇಟ್ಟುಕೊಂಡು ಪೋಸ್‌ ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ.. ಇದು ನಾಗಚೈತನ್ಯ ಅವರಿಗೆ ಸಂಬಂಧಿಸಿರಬಹದು ಎಂದು ಅಭಿಮಾನಿಗಳು ಕಾಮೆಂಟ್‌ ಮಾಡುತ್ತಿದ್ದಾರೆ.. ಇಷ್ಟೇ ಅಲ್ಲ ನಟಿ ಸಮಂತಾ ತಾವು ಶೇರ್‌ ಮಾಡಿಕೊಂಡಿರುವ ಪೋಟೋಗೆ ಆ ರೀತಿ ಬೆರಳು ಮಾಡಿದ್ದಲ್ಲದೇ.. ನೌ ವಿ ಆರ್‌ ಫ್ರೀ ಎಂಬ ಸಾಂಗ್‌ ಕೂಡಾ ಹಾಕಿದ್ದಾರೆ.. ಇದಕ್ಕೆ ಅವರ ಅಭಿಮಾನಿಗಳು ಅವರಿಗೆ ಬಂದ ಅರ್ಥವನ್ನು ಹೇಳುತ್ತಿದ್ದಾರೆ.. ಸದ್ಯ ವದಂತಿಗಳ ಬಗ್ಗೆ ಸೈಲೆಂಟ್ ಶಾಕ್ ಆದ ಸಮಂತಾ, ತುಂಬಾ ಕೂಲ್ ಆಗಿ ಪೋಸ್‌ ಕೊಟ್ಟಿದ್ದಾರೆ.. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...