ಮಾಡಿದ್ದು ಒಂದೇ ಸಿನಿಮಾ...ಸ್ಟಾರ್ ನಟಿಯರ ಎದೆಯಲ್ಲಿ ನಡುಕ ಹುಟ್ಟಿಸಿ.. ಇಂಡಸ್ಟ್ರಿಯಲ್ಲಿ ಬಿರುಗಾಳಿ ಎಬ್ಬಿಸುತ್ತಿರುವ ಈ ಬ್ಯೂಟಿ ಯಾರು ಗೊತ್ತೇ? : ಯಾವುದೇ ಮೇಕಪ್ ಇಲ್ಲದೆ ತುಂಬಾ ನೈಸರ್ಗಿಕವಾಗಿ ಕಾಣುವ ಈ ಮೇಲಿನ ಫೋಟೋದಲ್ಲಿರುವ ಈ ಹುಡುಗಿ ಯಾರೆಂದು ನಿಮಗೆ ಗೊತ್ತೇ? ಇಲ್ಲವಾದರೇ ಇಲ್ಲಿ ತಿಳಿಯೋಣ.. : ಈ ಬ್ಯೂಟಿ ಈಗ ಟಾಲಿವುಡ್‌ನ ಲೇಟೆಸ್ಟ್ ಸೆನ್ಸೇಷನ್. ಯುವಕರ ಕನಸಿನ ರಾಣಿ. ಈ ಸುಂದರಿಯ ಹೆಸರು ಎಲ್ಲೆಡೆ ಕೇಳಿಬರುವುದಲ್ಲದೇ... ಸಾಮಾಜಿಕ ಜಾಲತಾಣಗಳಲ್ಲಿ ಈಕೆಯ ಫೋಟೋಗಳು ಮತ್ತು ವೀಡಿಯೊಗಳು ಸಖತ್‌ ಟ್ರೆಂಡ್‌ ಆಗುತ್ತಿವೆ.. ವಿಶೇಷವೆಂದರೇ ಈ ಮೋಹನಾಂಗಿ ಹೆಚ್ಚು ಸಿನಿಮಾಗಳನ್ನು ಮಾಡಿಲ್ಲ. ಒಂದೇ ಒಂದು ಸಿನಿಮಾದಿಂದ ಇಂಡಸ್ಟ್ರಿ ಹಾಟ್ ಟಾಪಿಕ್ ಆಗಿಬಿಟ್ಟಿದ್ದಾರೆ.. ಸಾಮಾನ್ಯವಾಗಿ ಸಿನಿಮಾ ನಾಯಕಿಯರು ವೇದಿಕೆ ಮೇಲೆ ಹೆಚ್ಚು ಡ್ಯಾನ್ಸ್ ಮಾಡುವುದಿಲ್ಲ. ಆದರೆ ನಟಿ ವೇದಿಕೆಯ ಮೇಲೆ ಹೆಜ್ಜೆ ಹಾಕಿದ್ರೆ ಹುಡುಗರ ಎದೆಯಲ್ಲಿ ಸುನಾಮಿ ಸುಂಟರಗಾಳಿಯೇ ಏಳುತ್ತೆ.. ತನ್ನ ಸೌಂದರ್ಯ ಮತ್ತು ಡ್ಯಾನ್ಸ್‌ನಿಂದ ಚಿತ್ರರಂಗದಲ್ಲಿ ಸಂಚಲನ ಮೂಡಿಸಿರುವ ಈ ಮೋಹನಾಂಗಿ ಬೇರೆ ಯಾರೂ ಅಲ್ಲ, ರವಿತೇಜ ಅಭಿನಯದ 'ಮಿಸ್ಟರ್ ಬಚ್ಚನ್' ನಾಯಕಿ ಭಾಗ್ಯಶ್ರೀ ಬೋರ್ಸೆ. ಇದನ್ನೂ ಓದಿ- ಇದು ಒಂದು ವರ್ಷದ ಹಿಂದಿನ ಆಕೆಯ ಫೋಟೋ. ಸಿನಿಮಾ ರಿಲೀಸ್ ಆಗುತ್ತಿರುವ ಹಿನ್ನಲೆಯಲ್ಲಿ ಭಾಗ್ಯಶ್ರೀಗೆ ಸಂಬಂಧಿಸಿದ ಚಿತ್ರಗಳು ಮತ್ತು ವಿಡಿಯೋಗಳಿಗಾಗಿ ನೆಟಿಜನ್‌ಗಳು ಹುಡುಕಾಟ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋ ಪತ್ತೆಯಾಗಿದೆ. ಇದನ್ನೂ ಓದಿ- ಮಾಸ್ ಮಹಾರಾಜ್ ರವಿತೇಜ ನಾಯಕನಾಗಿ ಹರೀಶ್ ಶಂಕರ್ ನಿರ್ದೇಶನದ ಮೂರನೇ ಚಿತ್ರ ಮಿಸ್ಟರ್ ಬಚ್ಚನ್. ಪನೋರಮಾ ಸ್ಟುಡಿಯೋಸ್ ಮತ್ತು ಟಿ ಸಿರೀಸ್ ಬ್ಯಾನರ್ ಅಡಿಯಲ್ಲಿ ಟಿ ಜಿ ವಿಶ್ವ ಪ್ರಸಾದ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಟೀಸರ್, ಹಾಡುಗಳು ಮತ್ತು ಟ್ರೇಲರ್‌ನಿಂದ ಚಿತ್ರವು ಹವಾ ಕ್ರಿಯೇಟ್ ಮಾಡಿದ ಈ ಸಿನಿಮಾ ಇಂದು ಗುರುವಾರ (ಆಗಸ್ಟ್ 15) ಸ್ವಾತಂತ್ರ್ಯ ದಿನದ ಉಡುಗೊರೆಯಾಗಿ ಬಿಡುಗಡೆಯಾಯಿತು. ಉತ್ತರದಿಂದ ಬಂದಿರುವ ಭಾಗ್ಯಶ್ರೀಗೆ ಚಿತ್ರರಂಗದಲ್ಲಿ ಹೆಚ್ಚಿನ ಅನುಭವವಿಲ್ಲ. ಇತ್ತೀಚೆಗಷ್ಟೇ ತೆರೆಕಂಡ ‘ಚಂದು ಚಾಂಪಿಯನ್’ ಹಿಂದಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಸದ್ಯ ತೆಲುಗಿನಲ್ಲಿ ಮಿಸ್ಟರ್ ಬಚ್ಚನ್ ಚಿತ್ರದಲ್ಲಿ ಭಾಗ್ಯಶ್ರೀ ಅಭಿನಯಕ್ಕೆ ಉತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿಮರ್ಶಕರು ಕೂಡ ಆಕೆಗೆ ಉತ್ತಮ ಅಂಕಗಳನ್ನು ನೀಡುತ್ತಿದ್ದಾರೆ. ಡ್ಯಾನ್ಸ್ ನಲ್ಲಿ ರವಿತೇಜಾಗೆ ಪೈಪೋಟಿ ನೀಡುತ್ತಿದ್ದಾರೆ ಎಂದು ಅಭಿಮಾನಿಗಳು, ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...