- : ಅಭಿಷೇಕ್-ಐಶ್ವರ್ಯಾ ರೈ ಡಿವೋರ್ಸ್‌ ರೂಮರ್ಸ್ ನಡುವೆ ವಿವಾಹಿತ ಜೋಡಿಗೆ ʼಇಂತದ್ದೊಂದುʼ ಸಲಹೆ ಕೊಟ್ರು ಅಮಿತಾಬ್! ಏನದು? : ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ಜನಪ್ರಿಯ ರಿಯಾಲಿಟಿ ಶೋ 'ಕೌನ್ ಬನೇಗಾ ಕರೋಡ್ಪತಿ 16' ಅನ್ನು ಪ್ರಾರಂಭಿಸಿದ್ದಾರೆ. ಈ ಸಂದರ್ಭದಲ್ಲಿ, ನಟ ಮದುವೆಯಾದ ಜೋಡಿಗಳಿಗೂ ಸಲಹೆ ನೀಡಿದ್ದಾರೆ.. - : ವಾಸ್ತವವಾಗಿ, ಕೌನ್ ಬನೇಗಾ ಕರೋಡ್ಪತಿಯ ಮೊದಲ ಸಂಚಿಕೆಯಲ್ಲಿ ದೀಪಾಲಿ ಸೋನಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಈ ವೇಳೆ ಅವರು ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದು, ದೀಪಾಲಿ ಸೋನಿ ಅವರ ಪತಿ ಇದು ಅರೇಂಜ್ಡ್ ಮ್ಯಾರೇಜ್ ಎಂದು ಬಹಿರಂಗಪಡಿಸಿದರು.. ಸೋನಿ ತನ್ನ ಪತಿಯೊಂದಿಗೆ ಎಲ್ಲಿಗೆ ಹೋದರೂ ಇಬ್ಬರೂ ಯಾವಾಗಲೂ ರೀಲ್ಸ್‌ ಮಾಡುತ್ತಾರೆ ಎಂದು ಹೇಳಿದರು. ಇದಕ್ಕೆ ನಗುತ್ತಾ ಅಮಿತಾಭ್ ಬಚ್ಚನ್ ಎಲ್ಲಾ ವಿವಾಹಿತ ದಂಪತಿಗಳಿಗೆ ಸಲಹೆ ನೀಡುತ್ತಾರೆ, 'ನೀವು ಗಂಡ ಹೆಂಡತಿಯರಿಗೆ ತುಂಬಾ ಒಳ್ಳೆಯ ಐಡಿಯಾ ನೀಡಿದ್ದೀರಿ. ಪ್ರತಿ ಗಂಡ ಹೆಂಡತಿಯೂ ಎಲ್ಲಿ ಹೋದರೂ ರೀಲ್ಸ್ ಮಾಡಿ"‌ ಎಂದು ಹೇಳಿದ್ದಾರೆ.. ಇದನ್ನೂ ಓದಿ- ತಮ್ಮ ಮಗ ಅಭಿಷೇಕ್ ಬಚ್ಚನ್ ಮತ್ತು ಸೊಸೆ ಐಶ್ವರ್ಯಾ ರೈ ಅವರ ವಿಚ್ಛೇದನದ ವದಂತಿಯು ಜೋರಾದಾಗ ಅಮಿತಾಬ್ ಬಚ್ಚನ್ ಅವರು ಇಂತಹ ಸಲಹೆ ನೀಡಿದ್ದು, ಇದು ಅವರನ್ನೇ ಟಾರ್ಗೆಟ್‌ ಮಾಡಿ ಹೇಳಿದಂತಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.. ವರದಿಗಳನ್ನು ನಂಬುವುದಾದರೆ, ಐಶ್ವರ್ಯ ಹಾಗೂ ಅಭಿಷೇಕ್‌ ನಡುವೆ ಯಾವುದೂ ಸರಿಯಿಲ್ಲ ಎನ್ನಲಾಗಿತ್ತು.. ಆದರೆ, ಈ ವದಂತಿಗಳಿಗೆ ಸ್ವತಃ ಅಭಿಷೇಕ್ ಅಂತ್ಯ ಹಾಡಿದ್ದು, 'ನಾನು ಇನ್ನೂ ವಿವಾಹಿನಾಗಯೇ ಇದ್ದೇನೆ" ಎಂದು ಹೇಳಿದ್ದರು.. ಇದನ್ನೂ ಓದಿ- ಇನ್ನು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇಬ್ಬರೂ ಪ್ರತ್ಯೇಕವಾಗಿ ಮದುವೆಗೆ ಆಗಮಿಸಿದ್ದು ವಿಚ್ಛೇದನದ ವದಂತಿಗಳಿಗೆ ಕಾರಣವಾಗಿದೆ. ಇದೇ ಮೊದಲಲ್ಲದಿದ್ದರೂ, ಅಭಿಷೇಕ್ ಮತ್ತು ಐಶ್ವರ್ಯಾ ಒಟ್ಟಿಗೆ ಕಾಣಿಸಿಕೊಳ್ಳದ ಇಂತಹ ಅನೇಕ ಘಟನೆಗಳು ಈ ಹಿಂದೆ ನಡೆದಿವೆ. ನಟಿ ತನ್ನ ಅತ್ತೆಯ ಮನೆಯನ್ನು ತೊರೆದಿದ್ದಾರೆ ಎಂಬ ವರದಿಗಳೂ ಇವೆ. ಈಗ ಸತ್ಯ ಏನೆಂಬುದನ್ನು ಹೇಳಲು ಸಾಧ್ಯವಿಲ್ಲ. ಆದ್ರೆ ಸದ್ಯ ಈ ವದಂತಿಗಳಿಗೆ ಐಶ್ವರ್ಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...